Connect with us

    KARNATAKA

    IAS ಅಧಿಕಾರಿ ರೋಹಿಣಿ ಸಿಂಧೂರಿ ನಡೆ ಪ್ರಶ್ನಿಸಿದ IPS ಅಧಿಕಾರಿ ಡಿ.ರೂಪಾ ..!

    ಬೆಂಗಳೂರು, ಜೂನ್ 24: ಕೊರೊನಾ ಸಮಯದಲ್ಲಿ ಈಜುಕೊಳ ಕಟ್ಟಿದ್ದು ನೈತಿಕ ಅಧಃಪತನ ಎಂದು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ದ ಐಪಿಎಸ್ ಅಧಿಕಾರಿ ಡಿ.ರೂಪಾ ಟ್ವೀಟ್ ಮಾಡಿದ್ದಾರೆ.

    ಈಜುಕೊಳಕ್ಕೆ ಲೈಸೆನ್ಸ್​​ ಪಡೆಯದಿರುವುದು ನಂತರದ ವಿಚಾರ. ಆದರೆ, ಅವರು ಈಜುಕೊಳ ಕಟ್ಟುವುದನ್ನೇ ಮುಂದೂಡಬಹುದಿತ್ತು. ಕೊರೊನಾ ಕಾಲದಲ್ಲಿ ಆರ್ಥಿಕವಾಗಿ ಜನರು ಸಂತ್ರಸ್ತರಾಗಿದ್ದಾರೆ. ಇಂಥ ಸಂದರ್ಭದಲ್ಲಿ ಜನರ ಹಣ ಬಳಸಿ ಸ್ವಿಮ್ಮಿಂಗ್ ಫೂಲ್ ಕಟ್ಟಿದ್ದು ರೋಹಿಣಿ ಅವರ ನೈತಿಕ ಅಧಃಪತನ ಎಂದು ಅವರು ಆಕ್ಷೇಪಿಸಿದ್ದಾರೆ.

    ಕೋರೋನ ಹಾಗು ಆರ್ಥಿಕ ವ್ಯವಸ್ಥೆಯಿಂದ ಜನರು ಸಂತ್ರಸ್ತರಾಗಿರುವ ಸಂದರ್ಭದಲ್ಲಿ ಜನರ ಹಣ ಅಂದರೆ ಸಾರ್ವಜನಿಕ ಹಣವ ಬಂಗಲೆಯಲ್ಲಿ ಸ್ವಿಮ್ಮಿಂಗ್ ಪೂಲ್ ಕಟ್ಟಲು ಮುಂದಾಗಿದ್ದು ಮೊಟ್ಟ ಮೊದಲನೆಯದಾಗಿ ರೋಹಿಣಿ ಐಎಎಸ್ ಅವರ ನೈತಿಕ ಪತನ ಎದ್ದು ತೋರಿಸುತ್ತದೆ. ಕಟ್ಟಲು ಪರವಾನಗಿ ತೆಗೆದುಕೊಂಡಿಲ್ಲ ಎನ್ನುವುದು ನಂತರದ ವಿಚಾರ.ಕಟ್ಟುವುದ ಮುಂದೂಡಲೂಬಹುದಿತ್ತು

    ಮೈಸೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದಾಗ ತಮ್ಮ ನಿವಾಸದಲ್ಲಿ ಈಜುಕೊಳ ನಿರ್ಮಾಣ ವಿಚಾರವಾಗಿ ಉದ್ಭವಿಸಿದ್ದ ವಿವಾದದ ಬಗ್ಗೆ ರೋಹಿಣಿ ಸಿಂಧೂರಿ ಪ್ರಾದೇಶಿ ಆಯುಕ್ತರಿಗೆ ವಿವರಣೆ ನೀಡಿದ್ದರು. ಈಜುಕೊಳವನ್ನು ಕಾನೂನುಬಾಹಿರವಾಗಿ ನಿರ್ಮಾಣ ಮಾಡಿಲ್ಲ. ಈಜುಕೊಳ ನಿರ್ಮಾಣವು 5 ವರ್ಷಗಳ ಹಿಂದಿನ ಯೋಜನೆ. ಇದರ ನಿರ್ಮಾಣ ವೆಚ್ಚವನ್ನು ನಿರ್ಮಿತಿ ಕೇಂದ್ರವೇ ನಿರ್ವಹಿಸಿದೆ. ಈಜುಕೊಳ ನಿರ್ಮಾಣಕ್ಕೆ ₹ 27.72 ಲಕ್ಷ ವೆಚ್ಚವಾಗಿದೆ. ನಿರ್ಮಿತಿ ಕೇಂದ್ರದ ವಾರ್ಷಿಕ ಸಭೆಯಲ್ಲಿ ಅನುಮೋದನೆ ಪಡೆದೇ ಈಜುಕೊಳ ನಿರ್ಮಿಸಲಾಗಿದೆ ಎಂದು ಹೇಳಿದ್ದರು.

    ಪಾರಂಪರಿಕ ಕಟ್ಟಡಕ್ಕೆ ಧಕ್ಕೆ ಆರೋಪದ ಬಗ್ಗೆಯೂ ವಿವರಣೆ ನೀಡಿರುವ ಅವರು, ಈಗಾಗಲೇ ಹಲವಾರು ಪಾರಂಪರಿಕ ಕಟ್ಟಡಗಳ ಪಕ್ಕದಲ್ಲಿ ಇತರ ಕಟ್ಟಡ‌ಗಳನ್ನೂ ನಿರ್ಮಿಸಲಾಗಿದೆ. ಚುನಾವಣಾ ಶಾಖೆ‌, ವಸಂತ ಮಹಲ್, ಪ್ರಾದೇಶಿಕ ಆಯುಕ್ತರ ಕಚೇರಿ, ಜಲದರ್ಶಿನಿ ಆವರಣ ಸೇರಿ ಹಲವು ಕಡೆ ಕಟ್ಟಡಗಳ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಈಜುಕೊಳ ನಿರ್ಮಾಣ ಕಾನೂನುಬಾಹಿರ ಅಲ್ಲ ಎಂದು ತಮ್ಮ ವರದಿಯಲ್ಲಿ ರೋಹಿಣಿ ಸಿಂಧೂರಿ ಸಮರ್ಥಿಸಿಕೊಂಡಿದ್ದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *