LATEST NEWS
ಮಂಗಳೂರಿನಲ್ಲಿ 48 ಗಂಟೆಗಳ ನಂತರ ಇಂಟರ್ ನೆಟ್ ಸೇವೆ ಪ್ರಾರಂಭ
ಮಂಗಳೂರಿನಲ್ಲಿ 48 ಗಂಟೆಗಳ ನಂತರ ಇಂಟರ್ ನೆಟ್ ಸೇವೆ ಪ್ರಾರಂಭ
ಮಂಗಳೂರು ಡಿಸೆಂಬರ್ 21: ಪೌರತ್ವ ತಿದ್ದುಪಡಿ ಪ್ರತಿಭಟನೆ ಗಲಭೆ ಹಿಂಸಾಚಾರಕ್ಕೆ ತಿರುಗಿದ ಹಿನ್ನಲೆ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ 2 ದಿನ ಕಾಲ ಸ್ತಬ್ದವಾಗಿದ್ದ ಇಂಟರ್ ನೆಟ್ ಸೇವೆ ಇಂದು ರಾತ್ರಿ 10.30 ಸುಮಾರಿಗೆ ಪುನರಾರಂಭಗೊಂಡಿದೆ.
ಪೌರತ್ವ ಮಸೂದೆ ವಿರೋಧಿಸಿ ನಡೆದ ಪ್ರತಿಭಟನೆಯಿಂದಾಗಿ ಹಿಂಸಾಚಾರಕ್ಕೆ ತಿರುಗಿದ್ದ ಹಿನ್ನಲೆಯಲ್ಲಿ ಮಂಗಳೂರು ನಗರದಲ್ಲಿ ಕರ್ಪ್ಯೂ ಜಾರಿಗೊಳಿಸಿ ಜಿಲ್ಲೆಯಲ್ಲಿ ಇಂಟರ್ ನೆಟ್ ಸೇವೆಯನ್ನು ಸಂಪೂರ್ಣ ಸ್ತಬ್ದಗೊಳಿಸಲಾಗಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ಗಲಭೆಗೆ ಸಂಬಂಧಿಸಿದಂತೆ ಯಾವುದೇ ಪ್ರಚೋದನಕಾರಿ ಸಂದೇಶಗಳು ಬರದಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿತ್ತು. ಇಂಟರ್ ನೆಟ್ ಮತ್ತೆ ಪ್ರಾರಂಭವಾಗಿದ್ದರೂ ಕೂಡ ಪೊಲೀಸ್ ಇಲಾಖೆ ಮೊನ್ನೆ ನಡೆದ ಗಲಭೆಗೆ ಸಂಬಂಧಿಸಿದ ಯಾವುದೇ ಸಂದೇಶ, ವಿಡಿಯೋ ಹಾಗೂ ಪೋಟೋಗಳನ್ನು ಪಾರ್ವರ್ಡ್ ಮಾಡದಂತೆ ಎಚ್ಚರಿಕೆ ನೀಡಿದೆ. ಸಾಮಾಜಿ ಸ್ವಾಸ್ಥ್ಯ ಕದಡುವ ಮೆಸೆಜ್ ಪಾರ್ವರ್ಡ್ ಮಾಡಿದವರ ವಿರುದ್ದ ಕಠಿಣ ಕ್ರಮಕೈಗೊಳ್ಳಲಾಗುವುದೆಂದು ಪೊಲೀಸ್ ಇಲಾಖೆ ತಿಳಿಸಿದೆ.