Connect with us

LATEST NEWS

ಅಂತರಾಷ್ಟ್ರೀಯ ಯೋಗ ದಿನಾಚರಣೆ – ಸ್ವಿಮ್ಮಿಂಗ್ ಮಾಡುತ್ತಲೇ ಪ್ರಧಾನಿಗೆ ಪತ್ರ ಬರೆದ ಯೋಗಪಟು

ಮಂಗಳೂರು ಜೂನ್ 21: ಮಂಗಳೂರಿನಲ್ಲಿ ವಿಶ್ವಯೋಗ ದಿನಾಚರಣೆಯಲ್ಲಿ ವಿಭಿನ್ನವಾಗಿ ಆಚರಿಸಲಾಗಿದ್ದು, ಯೋಗಪಟು ಒಬ್ಬರು ಜಲಯೋಗ ಮಾಡಿ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದು ವಿಶೇಷವಾಗಿತ್ತು.


ಇಂದು ದೇಶದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಿದೆ. ಮಂಗಳೂರಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಆಚರಿಸಲಾಗಿದೆ. ಮಂಗಳೂರು ಮಹಾನಗರ ಈಜುಕೊಳದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು 40 ಮಂದಿ ಹವ್ಯಾಸಿ ಈಜುಗಾರರ ಬಳಗದ ಸದಸ್ಯರು ಭಾಗವಹಿಸಿ, ನೀರಿನಲ್ಲಿ ಯೋಗಾಸನಗಳನ್ನು ಪ್ರದರ್ಶಿಸಿದರು. ಈ ವಿಶೇಷ ಸಂದರ್ಭದಲ್ಲಿ ಮಂಗಳೂರು ಮೀನುಗಾರಿಕಾ ವಿಶ್ವವಿದ್ಯಾಲಯದ ನಿವೃತ್ತ ಡೀನ್ ಎಸ್.ಎಂ. ಶಿವಪ್ರಕಾಶ್ ಅವರು ಈಜುತ್ತಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪೋಸ್ಟ್ ಕಾರ್ಡ್ ಮೂಲಕ ಪತ್ರ ಬರೆದು ಎಲ್ಲರ ಗಮನ ಸೆಳೆದರು.


ಕಾರ್ಯಕ್ರಮದ ವಿಶೇಷ ಆಕರ್ಷಣೆ ಮಂಗಳೂರು ಮೀನುಗಾರಿಕಾ ವಿಶ್ವವಿದ್ಯಾಲಯದ ನಿವೃತ್ತ ಡೀನ್ ಎಸ್.ಎಂ. ಶಿವಪ್ರಕಾಶ್ ಅವರ ವಿಭಿನ್ನ ಪ್ರಯತ್ನ. ಯೋಗ ದಿನಾಚರಣೆಯ ಮಹತ್ವವನ್ನು ಎತ್ತಿಹಿಡಿಯುವ ಸಲುವಾಗಿ, ಅವರು ಈಜುತ್ತಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪೋಸ್ಟ್ ಕಾರ್ಡ್ ಮೂಲಕ ಪತ್ರ ಬರೆದರು. ‘ಡಿಯರ್ ಮೋದಿಜಿ, ಹ್ಯಾಪಿ ಇಂಟರ್​​ನ್ಯಾಷನಲ್ ಯೋಗ ಡೇ. ಐ ಯಾಮ್ ರೈಟಿಂಗ್ ದಿಸ್ ಪೋಸ್ಟ್ ಕಾರ್ಡ್ ವೈಲ್ ಸ್ವಿಮ್ಮಿಂಗ್ ಇನ್‌ದ ಪೂಲ್. ಫಿಟ್ ಇಂಡಿಯಾ – ಶಿವಪ್ರಕಾಶ್, ಮಂಗಳೂರು’ ಎಂದು ಈಜುತ್ತಲೇ ಪತ್ರ ಬರೆದದ್ದು ವಿಶೇಷವಾಗಿತ್ತು.


ಈ ಬಗ್ಗೆ ಮಾತನಾಡಿದ ನಿವೃತ್ತ ಡೀನ್ ಶಿವಪ್ರಕಾಶ್, ”ನಮ್ಮ ದೇಶದ ಪ್ರಧಾನಮಂತ್ರಿ ಮೋದಿ ಅವರು ಯೋಗದ ಬಗ್ಗೆ ಇಡೀ ವಿಶ್ವಕ್ಕೆ ಅರಿವು‌ ಮೂಡಿಸಿದ್ದಾರೆ. ಮನಸು, ಆತ್ಮ, ದೇಹದ ಸಂಯೋಗವೇ ಯೋಗ. ನಾನು ಇಲ್ಲಿ ಪ್ರತಿದಿನ ಈಜಲು ಬರುತ್ತೇನೆ. ಇಂದು ಯೋಗ ದಿನದ ಪ್ರಯುಕ್ತ ಈಜುತ್ತಲೇ ಪ್ರಧಾನಮಂತ್ರಿಗೆ ಪತ್ರ ಬರೆಯುವ ಪ್ರಯತ್ನ ಮಾಡಿದ್ದೇನೆ” ಎಂದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *