LATEST NEWS
ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ – ನಾಲ್ಕು ಇನ್ಸ್ಟಾ ಗ್ರಾಂ ಪೇಜ್ ಡಿಲೀಟ್

ಮಂಗಳೂರು ಮೇ 24: ಸಾಮಾಜಿಕ ಜಾಲತಾಣಗಳಲ್ಲಿ ಉದ್ರೇಕಕಾರಿ ಮತ್ತು ಪ್ರಚೋದನ ಕಾರಿಯಾಗಿ ಪೋಸ್ಟ್ ಹಾಕಿದ ಆರೋಪದ ಮೇಲೆ ನಾಲ್ಕು ಇನ್ಸ್ಟಾಗ್ರಾಂ ಪೇಜ್ ಗಳನ್ನು ಪೊಲೀಸರು ರದ್ದು ಪಡಿಸಿದ್ದಾರೆ.
1. vhp_bajrangadal_ashoknagar ಮತ್ತು shankha_nada ಎಂಬ 02 ಇನ್ ಸ್ಟಾ ಗ್ರಾಂ ಪೇಜ್ಗಳ ವಿರುದ್ದ ಉರ್ವಾ ಪೊಲೀಸ್ ಠಾಣಾ ಅ.ಕ್ರ. 42/2025 ಕಲಂ. 353(1),353(2)) ಭಾರತೀಯ ನ್ಯಾಯ ಸಂಹಿತೆಯಂತೆ ಪ್ರಕರಣ ದಾಖಲಾಗಿರುತ್ತದೆ.
2. _dj_bharath_2008, ಎಂಬ ಇನ್ ಸ್ಟಾ ಗ್ರಾಂ ಪೇಜ್ ವಿರುದ್ದ ಕಾವೂರು ಪೊಲೀಸ್ ಠಾಣಾ ಅ.ಕ್ರ. 69/2025 ಕಲಂ. 353(1),353(2)) ಭಾರತೀಯ ನ್ಯಾಯ ಸಂಹಿತೆಯಂತೆ ಪ್ರಕರಣ ದಾಖಲಾಗಿರುತ್ತದೆ.
3. karaavali_official ಎಂಬ ಇನ್ ಸ್ಟಾ ಗ್ರಾಂ ಪೇಜ್ ವಿರುದ್ದ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಅ.ಕ್ರ. 86/2025 ಕಲಂ. 196, 351(3), 353(2) ಭಾರತೀಯ ನ್ಯಾಯ ಸಂಹಿತೆಯಂತೆ ಪ್ರಕರಣ ದಾಖಲಾಗಿರುತ್ತದೆ.
4. “ಆಶಿಕ್ ಮೈಕಾಲ” ಎಂಬ ಪೇಸ್ ಬುಕ್ ಪೇಜ್ ವಿರುದ್ದ ಬರ್ಕೆ ಪೊಲೀಸ್ ಠಾಣಾ ಅ.ಕ್ರ. 47/2025 ಕಲಂ. 353(2)ಭಾರತೀಯ ನ್ಯಾಯ ಸಂಹಿತೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಸದ್ರಿ ಪ್ರಕರಣಗಳ ತನಿಖೆಯನ್ನು ಮಂಗಳೂರು ನಗರ ಸಿ.ಇ.ಎನ್ ಅಪರಾಧ ಪೊಲೀಸ್‍ಠಾಣೆಗೆ ವರ್ಗಾವಣೆ ಮಾಡಲಾಗಿರುತ್ತದೆ. ಸದ್ರಿ ಪೇಜ್ ಗಳ ಮಾಹಿತಿ ಹಾಗೂ ರದ್ದು ಮಾಡುವ ಬಗ್ಗೆ ಸಂಬಂಧಪಟ್ಟ Law Enforcement Agency ರವರಿಗೆ ಪತ್ರ ವ್ಯವಹಾರ ನಡೆಸಲಾಗಿತ್ತು, ಅದರಂತೆ ಸಂಬಂಧಪಟ್ಟ Law Enforcement Agency ರವರು ಸದ್ರಿ ಇನ್ ಸ್ಟಾ ಗ್ರಾಂ ಹಾಗೂ ಪೇಸ್ ಬುಕ್ ಪೇಜ್ ಗಳನ್ನು ಭಾರತ ದೇಶದಲ್ಲಿ ಕಾರ್ಯ ನಿರ್ವಹಿಸದಂತೆ ರದ್ದುಗೊಳಿಸಿರುತ್ತಾರೆ. (De Activate).
ಇದುವರೆಗೆ ಸಾಮಾಜಿಕ ಜಾಲತಾಣಗಳಲ್ಲಿ ಉದ್ರೇಕಕಾರಿ ಮತ್ತು ಪ್ರಚೋದನ ಕಾರಿಯಾಗಿ ಪೋಸ್ಸ್ ಮಾಡುತ್ತಿದ್ದಒಟ್ಟು 06 ಇನ್ ಸ್ಟಾ ಗ್ರಾಂ ಪೇಜ್ ಗಳು ಹಾಗೂ 01 ಪೇಸ್ ಬುಕ್ ಪೇಜ್ ನ್ನು ರದ್ದುಗೊಳಿಸಲಾಗಿರುತ್ತದೆ.(De Activate).