LATEST NEWS
ಹಮಾಸ್ ಪರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಭಾರತದ ವಿಧ್ಯಾರ್ಥಿನಿಯನ್ನು ಗಡಿಪಾರು ಮಾಡಿದ ಅಮೇರಿಕಾ

ನ್ಯೂಯಾರ್ಕ್ ಮಾರ್ಚ್ 15: ಹಮಾಸ್ ಸಂಘಟನೆ ಪರ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಕಾರಣ ಭಾರತೀಯ ವಿದ್ಯಾರ್ಥಿನಿಯ ವೀಸಾವನ್ನು ಅಮೆರಿಕ ರದ್ದುಗೊಳಿಸಿದೆ. ಇದರಿಂದ ಸ್ವಯಂ ಗಡೀಪಾರಾಗಿದ್ದಾಳೆ ಎಂದು ವರದಿಯಾಗಿದೆ.
ಭಾರತೀಯ ಪ್ರಜೆ ರಂಜನಿ ಶ್ರೀನಿವಾಸನ್ ಎಫ್-1 ವಿದ್ಯಾರ್ಥಿ ಕಲಿಕಾ ವೀಸಾದಲ್ಲಿ ಅಮೆರಿಕಕ್ಕೆ ತೆರಳಿದ್ದರು. ಕೊಲಂಬಿಯಾ ವಿಶ್ವವಿದ್ಯಾಲಯದ ವೈದ್ಯ ವಿದ್ಯಾರ್ಥಿನಿಯಾಗಿದ್ದ ಆಕೆ ಭಯೋತ್ಪಾದಕ ಸಂಘಟನೆಯಾದ ಹಮಾಸ್ ಅನ್ನು ಬೆಂಬಲಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು ಹೋಮ್‌ಲ್ಯಾಂಡ್ ಸೆಕ್ಯೂರಿಟಿ ತಿಳಿಸಿದೆ.

ವಿದೇಶಿ ವಿದ್ಯಾರ್ಥಿಗಳ ಬಗ್ಗೆ ತೀವ್ರ ಪರಿಶೀಲನೆ ನಡೆಯುತ್ತಿರುವ ನಡುವೆಯೇ ಕಾಲೇಜು ಕ್ಯಾಂಪಸ್ ನಲ್ಲಿ ಫೆಲಸ್ತೀನ್ ಪರ ಪ್ರತಿಭಟನೆಯನ್ನು ಹಮ್ಮಿಕೊಂಡ ಹಿನ್ನೆಲೆಯಲ್ಲಿ ಶ್ರೀನಿವಾಸನ್ ಪ್ರಕರಣ ಬೆಳಕಿಗೆ ಬಂದಿತ್ತು.
ಮಾರ್ಚ್ 5ರಂದು ಆಕೆಯ ವೀಸಾವನ್ನು ಡಿಪಾರ್ಟ್‌ಮೆಂಟ್ ಆಫ್ ಸ್ಟೇಟ್ ರದ್ದುಗೊಳಿಸಿದೆ. ಮಾರ್ಚ್ 11ರಂದು ಕಸ್ಟಮ್ಸ್ ಆ್ಯಂಡ್ ಬಾರ್ಡರ್ ಪ್ರೊಟೆಕ್ಷನ್ (ಸಿಬಿಪಿ) ಆ್ಯಪ್ ಮೂಲಕ ಸ್ವಯಂ ಗಡೀಪಾರು ಆಗುತ್ತಿರುವ ದೃಶ್ಯ ನಮಗೆ ಲಭಿಸಿದೆ ಎಂದು ಅದು ಹೇಳಿದೆ.