LATEST NEWS
‘ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್’ ಸೇರಿದ ಭಾರತೀಯ ರೈಲ್ವೆ
ನವದೆಹಲಿ: ಏಕಕಾಲದಲ್ಲಿ ಹಲವು ಸ್ಥಳಗಳಲ್ಲಿ ನಡೆದ ಸಾರ್ವಜನಿಕ ಸೇವಾ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಪಾಲ್ಗೊಂಡಿದ್ದರಲ್ಲಿ ಭಾರತೀಯ ರೈಲ್ವೆಯು ‘ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್’ಗೆ ಸೇರಿದೆ.
ರೈಲ್ವೆ ಸಚಿವಾಲಯವು 2024ರ ಫೆಬ್ರುವರಿ 26ರಂದು ದೇಶದ ವಿವಿಧೆಡೆ ರೈಲ್ವೆ ಬ್ರಿಡ್ಜ್, ವಿವಿಧ ರೈಲ್ವೆ ನಿಲ್ದಾಣಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಆಗಿ ನೆರವೇರಿಸಿದ್ದರು.
Indian Railways enters its name into Limca Book of Records
Read @ANI Story | https://t.co/ICxj9XDpgm#IndianRailways #LimcaBookOfRecords pic.twitter.com/bCrhuNefYa
— ANI Digital (@ani_digital) June 15, 2024
ದೇಶದ 2,140 ಸ್ಥಳಗಳಲ್ಲಿ ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ 40,19,516 ಜನರು ಭಾಗವಹಿಸಿದ್ದರು. ರೈಲ್ವೆ ಸಚಿವಾಲಯದ ಈ ಅಭೂತಪೂರ್ವ ಆಯೋಜನೆಗೆ ಪ್ರತಿಷ್ಠಿತ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಗರಿ ಸಂದಿದೆ. ಈ ನಡುವೆ ಸತತ 2ನೇ ಬಾರಿಗೆ ರೈಲ್ವೆ ಸಚಿವರಾಗಿ ಅಶ್ವಿನಿ ವೈಷ್ಣವ್ ಅಧಿಕಾರ ಸ್ವೀಕರಿಸಿದ್ದು, ರೈಲ್ವೆ ಜೊತೆ ಪ್ರಧಾನಿ ನರೇಂದ್ರ ಮೋದಿ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ ಎಂದು ಅವರು ಶ್ಲಾಘಿಸಿದ್ದಾರೆ.
‘ದೇಶದ ಸೇವೆ ಮಾಡಲು ಮೋದಿಯವರಿಗೆ ಜನ ಮತ್ತೆ ಆಶೀರ್ವಾದ ಮಾಡಿದ್ದಾರೆ. ದೇಶದ ಸೇವೆಯಲ್ಲಿ ರೈಲ್ವೆಯ ಪಾತ್ರ ಬಹಳ ದೊಡ್ಡದಿದೆ. ಕಳೆದ 10 ವರ್ಷಗಳಲ್ಲಿ ರೈಲ್ವೆಯಲ್ಲಿ ಮೋದಿ ಬಹಳಷ್ಟು ಸುಧಾರಣೆ ಮಾಡಿದೆ. ವಿದ್ಯುದ್ದೀಕರಣ, ಹೊಸ ಹಳಿಗಳ ನಿರ್ಮಾಣ ಹೊಸ ರೈಲುಗಳ ಬಿಡುಗಡೆ, ಹೊಸ ಸೇವೆಗಳು, ನಿಲ್ದಾಣಗಳು ಮರುಅಭಿವೃದ್ಧಿ ಸೇರಿ ಹಲವು ಅಭಿವೃದ್ಧಿಯಾಗಿದೆ’ಎಂದಿದ್ದಾರೆ.