LATEST NEWS
ಇಸ್ರೇಲ್ ಮೇಲೆ ಲೆಬನಾನ್ ನಿಂದ ಕ್ಷಿಪಣಿ ದಾಳಿ – ಕೇರಳ ಮೂಲದ ವ್ಯಕ್ತಿ ಸಾವು

ಇಸ್ರೇಲ್ ಮಾರ್ಚ್ 05: ಇಸ್ರೇಲ್ ಮತ್ತು ಗಾಜಾಪಟ್ಟಿ ನಡುವೆ ನಡೆಯುತ್ತಿರುವ ಯುದ್ದ ನಡುವೆ ಲೆಬನಾನ್ ಇಸ್ರೇಲ್ ಮೆಲೆ ಕ್ಷಿಪಣಿ ದಾಳಿ ನಡೆಸಿದ್ದು, ಅದರಲ್ಲಿ ಕೇರಳ ಮೂಲದ ವ್ಯಕ್ತಿಯೊಬ್ಬ ಮೃತಪಟ್ಟು ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಇಸ್ರೇಲ್‌ನ ಮಾರ್ಗಾಲಿಒಟ್ ಎಂಬಲ್ಲಿ ಸೋಮವಾರ ನಡೆದಿದೆ.
ಮೃತ ವ್ಯಕ್ತಿಯನ್ನು ಕೇರಳದ ಕೊಲ್ಲಂ ಜಿಲ್ಲೆಯ ಪ್ರತಿಭನ್ ಮ್ಯಾಕ್ಸ್ವೆಲ್ ಎಂದು ಗುರುತಿಸಲಾಗಿದ್ದು, ಬುಶ್ ಜೋಸೆಫ್ ಜಾರ್ಜ್, ಪೌಲ್ ಮೆಲ್ವಿನ್ ಎಂಬುವವರು ಗಾಯಗೊಂಡವರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತ ಮಾಹಿತಿಯನ್ನು ಇಸ್ರೇಲ್ ತುರ್ತು ನಿಗಾ ಪಡೆ ಎಂಡಿಎ ಖಚಿತಪಡಿಸಿದೆ.

ಉತ್ತರ ಇಸ್ರೇಲ್‌ನ ಗಲಿಲೀ ಎಂಬ ಪ್ರದೇಶದ ತೋಟದ ಮೇಲೆ ಲೆಬನಾನ್ ಕಡೆಯಿಂದ ಕ್ಷಿಪಣಿ ದಾಳಿಯಾಗಿದೆ ಎಂದು ತಿಳಿಸಿದೆ. ಗಾಜಾ ಮೇಲೆ ಇಸ್ರೇಲ್ ದಾಳಿ ಖಂಡಿಸಿ Shi’ite Hezbollah ಎಂಬ ಲೆಬನಾನ್ ಸಂಘಟನೆ ಇಸ್ರೇಲ್ ಗುರಿಯಾಗಿಸಿ ಕಳೆದ ಅಕ್ಟೋಬರ್ 8ರಿಂದ ಆಗಾಗ ಕ್ಷಿಪಣಿ ದಾಳಿಗಳನ್ನು ಮಾಡುತ್ತಿದೆ.