Connect with us

LATEST NEWS

ಪ್ರತಿಕೂಲ ಹವಾಮಾನದ ಮಧ್ಯೆ ಕೋಸ್ಟ್ ಗಾರ್ಡ್‌ ಮಹತ್ವದ ಕಾರ್ಯಾಚರಣೆ, 11 ಮಂದಿ ಮೀನುಗಾರರ ರಕ್ಷಣೆ..!

ಕೇರಳ : ಕೇರಳದ ಪೊನಾನಿ ಕರಾವಳಿಯಲ್ಲಿ ಭಾರೀ ಮಳೆಯ ನಡುವೆ ಸಿಕ್ಕಿಬಿದ್ದ ಮೀನುಗಾರಿಕಾ ದೋಣಿಗಾಗಿ ಭಾರತೀಯ ಕೋಸ್ಟ್ ಗಾರ್ಡ್ ಪ್ರತಿಕೂಲ ಹವಾಮಾನದ ಹೊರತಾಗಿಯೂ ಯಶಸ್ವಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ.

ಬುಧವಾರ ಬೆಳಿಗ್ಗೆ ಕೊಚ್ಚಿಯ ಕೇಂದ್ರ ಕಚೇರಿಗೆ ಬಂದ  ಮಾಹಿತಿ ಆಧಾರಿಸಿ ಕೋಸ್ಟ್ ಗಾರ್ಡ್ ಭಾರೀ ಮಳೆ ಮತ್ತು ಸವಾಲಿನ ಹವಾಮಾನ ಪರಿಸ್ಥಿತಿಗಳ ಮಧ್ಯೆಯೂ ಮೀನುಗಾರರ ಜೀವಗಳನ್ನು ಉಳಿಸಲು ರಕ್ಷಣಾ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಸಂಘಟಿಸಿತು.ಇಂಜಿನ್ ವೈಫಲ್ಯದಿಂದ ಸಮುದ್ರದ ಮಧ್ಯೆ ಹೆಣಗಾಡುತ್ತಿರುವ 11 ಮಂದಿ ಮೀನುರಾರು ಇದ್ದ ಅಶ್ನಿ ಹೆಸರಿನ ದೋಣಿಯನ್ನು ಡಾರ್ನಿಯರ್ ವಿಮಾನದ ಮೂಲಕ ಪತ್ತೆ ಹಚ್ಚಿತು.

ಬಳಿಕ ಕೇರಳ ಮತ್ತು ಮಾಹೆ ಮಧ್ಯೆ ಗಸ್ತು ತಿರುಗುತ್ತಿದ್ದ ಕೋಸ್ಟ್ ಗಾರ್ಡ್‌ ICGS ಸಕ್ಷಮ್ ಕಾರ್ಯಾಚರಣೆ ಆರಂಭಿಸಿ ಕೊಚ್ಚಿಯಿಂದ 80 ನಾಟಿಕಲ್ ಮೈಲು ದೂರದಲ್ಲಿ ಭಾರತೀಯ ಮೀನುಗಾರಿಕಾ ದೋಣಿ ಅನ್ನು ಪತ್ತೆಹಚ್ಚಲು ಯಶಸ್ವಿಯಾಯಿತು. ಆರಂಭದಲ್ಲಿ ಮೀನುಗಾರಿಕಾ ದೋಣಿಯಲ್ಲಿ ಬಳಲಿದ್ದ 11 ಮಂದಿ ಸಿಬಂದಿಗೆ ಅಗತ್ಯವಾಗಿ ಬೇಕಾಗಿದ್ದ ನೀರು, ಆಹಾರ ಮತ್ತಯ ವೈದ್ಯಕೀಯ ನೇರವನ್ನು ನೀಡಿ ಉಪಚರಿಸಿ ಹೆಲಿಕಾಪ್ಟ್ರರ್ ನೆರವಿನಿಂದ ಎಲ್ಲರನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿ ಬಳಿಕ ಮೀನುಗಾರಿಕಾ ದೋಣಿಯನ್ನು ಯಶಸ್ವಿಯಾಗಿ ಕೊಚ್ಚಿ ಬಂದರಿಗೆ ಎಳೆದು ತಂದಿದೆ.

After a boat struggling with engine failure amid the severe flooding in Kerala was spotted by aircraft, the Coast Guard rushed to rescue the 11-man crew on board the IFB Aashni near Ponnani – despite the treacherous conditions.

Share Information
Continue Reading
Advertisement
Click to comment

Leave a Reply

Your email address will not be published. Required fields are marked *