UDUPI
ಸ್ವಾತಂತ್ರ್ಯೋತ್ಸವದ ಸಂದರ್ಭ ಕ್ಯಾನ್ಸರ್ ಪೀಡಿತ ಬಡ ಮಹಿಳೆ ಸಹಾಯಕ್ಕೆ ಬಂದ ಶ್ರೀ ವಿಷ್ಣುಮೂರ್ತಿ ಫ್ರೆಂಡ್ಸ್ ದೊಡ್ಡಣ್ಣಗುಡ್ಡೆ

ಉಡುಪಿ : 74 ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಶ್ರೀ ವಿಷ್ಣುಮೂರ್ತಿ ಫ್ರೆಂಡ್ಸ್ ದೊಡ್ಡಣ್ಣಗುಡ್ಡೆ, ಹಾಗೂ ಶ್ರೀ ಗಣೇಶ ಭಕ್ತಾಭಿಮಾನಿಗಳು ದೊಡ್ಡಣ್ಣಗುಡ್ಡೆ ಇವರು ಜಂಟಿಯಾಗಿ ಕೊಡಮಾಡಿದ ಸುಮಾರು 25,000 ರೂಪಾಯಿಗಳನ್ನು ಸ್ಥಳೀಯ ಓರ್ವ ಕ್ಯಾನ್ಸರ್ ಪೀಡಿತ ಬಡ ಮಹಿಳೆ ಶಾಂತ ನಾಯ್ಕ್ ಇವರ ಶುಶ್ರುಷೆಗಾಗಿ ಶಾಂತ ನಾಯ್ಕ್ರ ಪತಿ ಸುರೇಶ ನಾಯ್ಕ್ ರಿಗೆ ಸ್ಥಳೀಯ ಮುಖಂಡರಾದ ಡಿ. ರಾಧಾಕೃಷ್ಣ ಶೆಟ್ಟಿ ಇವರ ನೇತೃತ್ವದಲ್ಲಿ ನೀಡಲಾಯಿತು.
ಈ ಸಂಧರ್ಭದಲ್ಲಿ ವಿಷ್ಣುಮೂರ್ತಿ ಫ್ರೆಂಡ್ಸ್ನ ಸ್ಥಾಪಕ ಅಧ್ಯಕ್ಷರಾದ ಸತೀಶ್ ಪುತ್ರನ್, ಶ್ರೀರಾಮ ಸೇನೆಯ ಜಯರಾಮ್ ಅಂಬೆಕಲ್ಲು, ಸ್ಥಳೀಯರಾದ ಜೋಸೆಫ್ ಸಲ್ಧಾನ, ವಿಜಯ್, ರಾಜೇಶ್, ಸೀತಾರಾಮ್, ಮೋಹನ್ ಶೇರಿಗಾರ್, ರಾಮು ಆಚಾರ್ಯ, ಶರತ್, ಇನ್ನಿತರರು ಉಪಸ್ಥಿತರಿದ್ದರು.
