DAKSHINA KANNADA
ಸಮಾಜದ ಕಟ್ಟಕಡೆಯ ವ್ಯಕ್ತಿಯ ಬದುಕಿಗೆ ತೊಂದರೆಯಾದಾಗ ನ್ಯಾಯಾಲಯ ಮಧ್ಯಪ್ರವೇಶಿಸುತ್ತದೆ – ಹೈಕೋರ್ಟ್ ನ್ಯಾಯಮೂರ್ತಿ ರಾಜೇಶ್ ರೈ ಕಲ್ಲಂಗಳ

ಪುತ್ತೂರು ಮೇ 24: ರಾಜ್ಯಹೈಕೋರ್ಟ್ ಆದೇಶದ ಮೇರೆಗೆ ನಿರ್ಮಾಣಗೊಂಡ ರಸ್ತೆ ಹಾಗೂ ಸೇತುವೆಗಳ ಉದ್ಘಾಟನೆ ಕಾರ್ಯಕ್ರಮ ಇಂದು ಕಡಬ ತಾಲೂಕಿನ ನಡೆಯಿತು.
ಹೈಕೋರ್ಟ್ ಆದೇಶದ ಮೇರೆಗೆ ನಿರ್ಮಾಣಗೊಂಡ ರಸ್ತೆ ಮತ್ತು ಸೇತುವೆ ಉದ್ಘಾಟಿಸಿ ಮಾತನಾಡಿದ ನ್ಯಾಯಮೂರ್ತಿ ರಾಜೇಶ್ ರೈ ಕಲ್ಲಂಗಳ ನ್ಯಾಯಾಲಯದ ಮಧ್ಯಪ್ರವೇಶ ಪ್ರಕ್ರಿಯೆಗಳು ನಿರಂತರ ನಡೆಯುತ್ತಲೂ ಇವೆ. ಆದರೆ ಆ ಸಮಸ್ಯೆಯನ್ನು ನ್ಯಾಯಾಲಯದ ಗಮನಕ್ಕೆ ತರುವ ಅಗತ್ಯವಿದೆ. ಹಲವಾರು ಕಡೆಗಳಲ್ಲಿ ಜನಸಾಮಾನ್ಯ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆ. ಆದರೆ ಸಮಸ್ಯೆಯನ್ನು ನ್ಯಾಯಾಲಯದ ಗಮನಕ್ಕೆ ತರಲು ಹಲವು ಜನ ವಿಫಲರಾಗಿದ್ದಾರೆ. ಈ ಸಮಯದಲ್ಲಿ ಬೆಂಕಿಗೆ ಗಂಟೆ ಕಟ್ಟೋರು ಯಾರು ಎನ್ನುವ ಪ್ರಶ್ನೆ ಮೂಡುತ್ತೆ.

ನ್ಯಾಯಾದಾನ ಅನ್ನೋದು ಇಂದು ಹಲವಾರು ಕಾರಣಗಳಿಂದ ವಿಳಂಬವಾಗುತ್ತಿದೆ. ಸಂದಿಗ್ಧ ಪರಿಸ್ಥಿತಿಯಲ್ಲಿರುವವರ ಕೆಲಸವನ್ನು ಜನಪ್ರತಿನಿಧಿಗಳು ಮರೆತಲ್ಲಿ ಅದನ್ನು ನ್ಯಾಯಾಂಗದ ಮೂಲಕ ಪರಿಹರಿಸಿಕೊಳ್ಳೋದು ಕಷ್ಟದ ಕೆಲಸ ನ್ಯಾಯಾಲಯಗಳು ನಿರ್ದೇಶನ ನೀಡಿದರೂ ಕೆಲಸ ಮಾಡೋದು ಕಾರ್ಯಾಂಗವೇ ಇದರಲ್ಲಿ ಮೇಲುಕೀಳು ಎನ್ನುವ ಭೇಧವೇ ಬರಬಾರದು.
ಸಮಾಜ ಸ್ವಸ್ಥವಾಗಿ ನಡೆದುಕೊಂಡು ಹೋಗಲು ಸಂವಿಧಾನದ ಎಲ್ಲಾ ಅಂಗಗಳು ತಮ್ಮ ತಮ್ಮ ಕಾರ್ಯವನ್ನು ನಡೆಸಬೇಕು ಇಂದು ಸಮಾಜದಲ್ಲಿ ಧನಿಕ ಮತ್ತು ಬಡವನ ಮಧ್ಯೆ ದೊಡ್ಡದಾದ ಅಂತರವಿದೆ ಧನಿಕನ ಮನೆಯ ಬೆಡ್ ರೂಂ ತನಕ ರಸ್ತೆ ಸಂಪರ್ಕವಿದೆ. ಆದರೆ ಕೆಲವು ಹಳ್ಳಿಗಳಿಗೆ ರಸ್ತೆಗಳು ಇರಲ್ಲ, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಸರಿಯಾಗಿ ಕೆಲಸ ಮಾಡಿದಲ್ಲಿ ಈ ಅಂತರವನ್ನು ತಗ್ಗಿಸಬಹುದು ಎಂದರು.