BELTHANGADI
ಧರ್ಮಸ್ಥಳದಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ, ಮುಸ್ಲೀಂ ಯುವಕ ಹಿಂದೂ ಯುವತಿ ಜೋಡಿಯನ್ನು ಹಿಡಿದ ಸಾರ್ವಜನಿಕರು..!
ಪುಣ್ಯ ಕ್ಷೇತ್ರ ಧರ್ಮಸ್ಥಳದಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ಯ ಘಟನೆ ಮರುಕಳಿಸಿದ್ದು ಮುಸ್ಲೀಂ ಯುವಕನ ಜೊತೆ ಬಂದಿದ್ದ ಹಿಂದೂ ಯುವತಿಯ ಜೋಡಿಯನ್ನು ಸಾರ್ವಜನಿಕರು ಹಿಡಿದು ವಿಚಾರಿಸಿ ಬಳಿಕ ಪೋಲಿಸರಿಗೆ ಒಪ್ಪಿಸಿದ್ದಾರೆ.
ಬೆಳ್ತಂಗಡಿ : ಪುಣ್ಯ ಕ್ಷೇತ್ರ ಧರ್ಮಸ್ಥಳದಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ಯ ಘಟನೆ ಮರುಕಳಿಸಿದ್ದು ಮುಸ್ಲೀಂ ಯುವಕನ ಜೊತೆ ಬಂದಿದ್ದ ಹಿಂದೂ ಯುವತಿಯ ಜೋಡಿಯನ್ನು ಸಾರ್ವಜನಿಕರು ಹಿಡಿದು ವಿಚಾರಿಸಿ ಬಳಿಕ ಪೋಲಿಸರಿಗೆ ಒಪ್ಪಿಸಿದ್ದಾರೆ.
ಬೆಂಗಳೂರು ಮೂಲದ ಈ ಜೋಡಿ ಧರ್ಮಸ್ಥಳದಲ್ಲಿ ತಿರುಗಾಡುತ್ತಿದ್ದಾಗ ಸಂಶಯಗೊಂಡ ಸಾರ್ವಜನಿಕರು ಹಿಡಿದು ವಿಚಾರಿಸಿದ್ದಾರೆ, ಆಗ ಯುವಕ ಮುಸ್ಲೀಂ ಧರ್ಮದವನಾಗಿದ್ದು ಯುವತಿ ಹಿಂದೂ ಎಂದು ಗೊತ್ತಾಗಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಸ್ಥಳಕ್ಕೆಧಾವಿಸಿ ಬಂದ ಪೊಲೀಸರು ಯುವಕ ಯುವತಿಯನ್ನು ವಶಕ್ಕೆ ಪಡೆದು ಠಾಣೆಗೆ ಒಯ್ದು ವಿಚಾರಣೆ ನಡೆಸಿದ್ದಾರೆ.