LATEST NEWS
ಮಗನಿಗೆ ನಿಶ್ಚಯಿಸಿದ ಹುಡುಗಿಯನ್ನು ಮದುವೆ ಆದ ಅಪ್ಪ..!!

ಉತ್ತರಪ್ರದೇಶ ಜೂನ್ 21: ತನ್ನ ಮಗನಿಗೆ ಮದುವೆ ಮಾಡಲು ನಿಶ್ಚಯಿಸಿದ ಹುಡುಗಿಯನ್ನು ಅಪ್ಪನೆ ಮದುವೆಯಾದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಉತ್ತರಪ್ರದೇಶದ ರಾಂಪುರದ ಭೋಟ್ ಪೊಲೀಸ್ ಠಾಣೆ ವ್ಯಾಪ್ತಿಯ ಬಸಂಗಲಿ ಗ್ರಾಮದಲ್ಲಿಈ ವಿಚಿತ್ರ ಘಟನೆ ನಡೆದಿದೆ.
56 ವರ್ಷ ಪ್ರಾಯದ ಶಕೀಲ್ ಎಂಬಾದ ತನ್ನ ಮಗನಿಗೆ ಮದುವೆ ಮಾಡಿಸಲು ಹುಡುಗಿಯನ್ನು ಹುಡುಕಾಟ ನಡೆಸಿದ್ದಾನೆ. ಈ ವೇಳೆ ಹತ್ತಿರದ ಅಜೀಮ್ ನಗರ ಪೊಲೀಸ್ ಠಾಣೆ ಪ್ರದೇಶದ ಹಳ್ಳಿಯ 18 ವರ್ಷದ ಹುಡುಗಿಯ ಜೊತೆ ಮಗನಿಗೆ ಮದುವೆ ಮಾಡಲು ನಿಶ್ಚಯ ಮಾಡಿದ್ದಾನೆ. ಮದುವೆ ನಿಶ್ಚಯವಾದ ನಂತರ, ಹುಡುಗನ ತಂದೆ (ಭಾವಿ ಮಾವ) ಆಗಾಗ್ಗೆ ಹುಡುಗಿಯ ಮನೆಗೆ ಭೇಟಿ ನೀಡಲು ಪ್ರಾರಂಭಿಸಿದರು. ಕುಟುಂಬ ಸದಸ್ಯರು ಇದು ಸಾಮಾನ್ಯ ನಡವಳಿಕೆ ಎಂದು ಭಾವಿಸಿದ್ದರು,

ಒಂದು ವಾರದ ಹಿಂದೆ, ವರನ ತಂದೆ ತನ್ನ ಭಾವಿ ಸೊಸೆಯ ಮನೆಗೆ ತನ್ನ ಕಾರಿನಲ್ಲಿ ಬಂದಿದ್ದರು. ಹುಡುಗಿಯ ಕುಟುಂಬಕ್ಕೆ ಆಕೆ ತುಂಬಾ ದುರ್ಬಲಳಾಗಿರುವುದರಿಂದ ವೈದ್ಯರ ಬಳಿಗೆ ಕರೆದೊಯ್ಯಲು ಬಯಸುವುದಾಗಿ ಹೇಳಿದ್ದರು. ಕುಟುಂಬವು ಒಪ್ಪಿಕೊಂಡಿತು, ಆದರೆ ಸಂಜೆಯ ವೇಳೆಗೆ ಇಬ್ಬರೂ ಹಿಂತಿರುಗಲಿಲ್ಲ. ಕುಟುಂಬವು ಅವರನ್ನು ಸಂಪರ್ಕಿಸಿದಾಗ, ಮಾವ ಹುಡುಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದರು. ಎರಡು ದಿನಗಳವರೆಗೆ ಯಾವುದೇ ಸುದ್ದಿ ಇರಲಿಲ್ಲ ಮತ್ತು ಕುಟುಂಬವು ಮತ್ತೆ ಕೇಳಿದಾಗ, ಅವರು ಪ್ರಶ್ನೆಯಿಂದ ತಪ್ಪಿಸಿಕೊಳ್ಳಲು ಪ್ರಾರಂಭಿಸಿದರು. ಸುಮಾರು ಎಂಟು ದಿನಗಳ ನಂತರ ಮಾವ ಮತ್ತು ಯುವತಿ ಹಿಂತಿರುಗಿದ್ದಾರೆ. ಈ ವೇಳೆ ಇಬ್ಬರೂ ಮದುವೆಯಾಗಿರುವುದಾಗಿ ಹೇಳಿದ್ದಾರೆ. ಇದು ಇಡೀ ಗ್ರಾಮಕ್ಕೆ ಆಘಾತವುಂಟು ಮಾಡಿತ್ತು.
ಮಾವ ಬಹಿರಂಗವಾಗಿ ತನ್ನ ಭಾವಿ ಸೊಸೆಯನ್ನು ಮದುವೆಯಾಗಿರುವುದಾಗಿ ಮತ್ತು ಈಗ ಅವಳು ತನ್ನ ಹೆಂಡತಿಯಾಗಿದ್ದಾಳೆಂದು ಎಂದು ಎಲ್ಲರ ಎದುರೇ ಹೇಳಿದ್ದಾನೆ. ಈ ವಿಚಾರ ತಿಳಿದು ಮಗ ಮತ್ತು ಅಪ್ಪನ ನಡುವೆ ದೊಡ್ಡ ಗಲಾಟೆ ನಡೆದಿದೆ. ಈ ವಿಚಾರ ಇಡೀ ಊರಿಗೆ ತಿಳಿದು , ಊರಿನವರು ಪಂಚಾಯತಿ ನಡೆಸಿದ್ದಾರೆ. ಈ ವೇಳೆ ಹಿರಿಯ ವಯಸ್ಸಿನವನಾದ ಈತ ತನ್ನ ಮಗನಿಗೆ ನಿಶ್ಚಯಿಸಿದ ಹುಡುಗಿಯನ್ನು ಮದುವೆಯಾಗಿದ್ದು ಸರಿಯಲ್ಲ ಎಂದು ಪಂಚಾಯತಿ ತೀರ್ಮಾನಿಸಿ ಇಬ್ಬರನ್ನು ಗ್ರಾಮದಿಂದ ಹೊರ ಹಾಕಿದೆ. ಪಾಪ ಮಗ ತನಗೆ ಹೆಂಡತಿಯಾಗಬೇಕಿದ್ದವಳು ಈಗ ಚಿಕ್ಕಮ್ಮ ಆಗಿ ಬಂದಿದ್ದಾಳೆ ಎಂದು ತಲೆ ಮೇಲೆ ಕೈಹೊತ್ತು ಕೊಂಡು ಕೂತಿದ್ದಾನೆ.