LATEST NEWS
ಅಕ್ರಮ ಮರಳು ದಾಸ್ತಾನಿನ ಮೇಲೆ ದಾಳಿ 35 ಲಕ್ಷ ರೂಪಾಯಿ ಮೌಲ್ಯದ ಮರಳು ವಶ
ಅಕ್ರಮ ಮರಳು ದಾಸ್ತಾನಿನ ಮೇಲೆ ದಾಳಿ 35 ಲಕ್ಷ ರೂಪಾಯಿ ಮೌಲ್ಯದ ಮರಳು ವಶ
ಮಂಗಳೂರು ಜೂನ್ 06 :ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರು ಅಕ್ರಮ ಮರಳುಗಾರಿಕೆಯನ್ನು ಮಟ್ಟ ಹಾಕಲು ಪೊಲೀಸ್ ಇಲಾಖೆ ಮುಂದಾಗಿದ್ದು, ಈ ಹಿನ್ನಲೆಯಲ್ಲಿ ವಿಶೇಷ ತಂಡವೊಂದನ್ನು ರಚಿಸಿದೆ. ಈ ನೂತನ ಕಾರ್ಯಪಡೆ ಈಗಾಗಲೇ ತನ್ನ ಕಾರ್ಯಾಚರಣೆ ಆರಂಭಿಸಿದ್ದು ನಗರದ ಹಲವೆಡೆ ಅಕ್ರಮ ಮರಳು ದಾಸ್ತಾನುಗಳ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಮರಳನ್ನು ವಶಪಡಿಸಿಕೊಂಡಿದೆ.
ಮಂಗಳೂರು ಪೊಲೀಸ್ ಕಮಿಷನರ್ ವಿಪುಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಸಿದ್ದಪಡಿಸಲಾದ ಈ ಕಾರ್ಯಪಡೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳಿದ್ದಾರೆ.
ಈ ವಿಶೇಷ ಕಾರ್ಯಪಡೆ ತಂಡ ಈಗಾಗಲೇ ಕಾರ್ಯಾಚರಣೆ ನಡೆಸಿ ಬಡಗುಳಿಪಾಡಿ ಗ್ರಾಮದಲ್ಲಿ ಅಕ್ರಮವಾಗಿ ದಾಸ್ತಾನಿರಿಸಿದ್ದ 177 ಲೋಡ್ ಮರಳು ಸೇರಿದಂತೆ ಇನ್ನಿತರ ಕಡೆ ಅಕ್ರಮವಾಗಿ ದಾಸ್ತಾನು ಇಡಲಾಗಿದ್ದ 250 ಕ್ಕೂ ಹೆಚ್ಚು ಲೋಡ್ ಮರಳನ್ನು ವಶಪಡಿಸಿಕೊಂಡಿದೆ.
ಇದಲ್ಲದೇ ಮೊಗರು ಗ್ರಾಮದ ನಾರ್ಲಪದವು ಎಂಬಲ್ಲಿ 40 ಲೋಡ್, ಸರ್ವೆ ನಂಬ್ರ 56/ಪಿ5 ಯಲ್ಲಿದ್ದ 193 ಲೋಡ್, ಮೂಡುಪೆರಾರ್ ಗ್ರಾಮದ ಚರ್ಚ್ ಬಳಿ ಸರ್ವೆ ನಂಬ್ರ 76/1 ಪಿ 2ರಲ್ಲಿದ್ದ 272 ಲೋಡ್, ಸರ್ವೆ ನಂಬ್ರ 78ರಲ್ಲಿದ್ದ 35 ಲೋಡ್ ಗಳಷ್ಟು ಅಕ್ರಮ ಮರಳನ್ನು ಪೊಲೀಸರ ವಿಷೇಶ ಕಾರ್ಯಪಡೆತಂಡ ದಾಳಿ ನಡೆಸಿ ವಶಪಡಿಸಿಕೊಂಡಿದೆ. ವಶಪಡಿಸಿಕೊಳ್ಳಲಾದ ಅಕ್ರಮ ಮರಳು ದಾಸ್ತಾನಿನ ಅಂದಾಜು ಮೌಲ್ಯ ರೂಪಾಯಿ 35 ಲಕ್ಷ ರೂಪಾಯಿ ಎಂದು ಹೇಳಲಾಗಿದೆ.