LATEST NEWS
ವಿಧಾನಪರಿಷತ್ ಸದಸ್ಯ ಬಿ.ಎಂ ಫಾರೂರ್ ಗೆಸ್ಟ್ ಹೌಸ್ ನಲ್ಲಿ ಭಾರಿ ಪ್ರಮಾಣದಲ್ಲಿ ಅಕ್ರಮ ಮರಳು
ವಿಧಾನಪರಿಷತ್ ಸದಸ್ಯ ಬಿ.ಎಂ ಫಾರೂರ್ ಗೆಸ್ಟ್ ಹೌಸ್ ನಲ್ಲಿ ಭಾರಿ ಪ್ರಮಾಣದಲ್ಲಿ ಅಕ್ರಮ ಮರಳು
ಮಂಗಳೂರು ಅಕ್ಟೋಬರ್ 14: ವಿಧಾನಪರಿಷತ್ ಸದಸ್ಯ ಬಿ.ಎಂ ಫಾರೂಕ್ ಅವರ ಗೆಸ್ಟ್ ಹೌಸ್ ನಲ್ಲಿ ಭಾರಿ ಪ್ರಮಾಣದಲ್ಲಿ ಸಮುದ್ರದ ಮರಳನ್ನು ದಾಸ್ತಾನು ಇಡಲಾಗುತ್ತಿದೆ ಎಂದು ಆರೋಪಿಸಲಾಗಿದ್ದು, ಜೆಸಿಬಿ ಮೂಲಕ ಮರಳನ್ನು ಗೆಸ್ಟ್ ಹೌಸ್ ಗೆ ತುಂಬಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಮುದ್ರ ದಂಡೆಯಿಂದ ಮರಳು ತೆಗೆಯಬಾರದು ಎಂಬ ಕಾನೂನು ಇದೆ. ಆದರೆ ದಕ್ಷಿಣಕನ್ನಡ ಜಿಲ್ಲಾಡಳಿತಕ್ಕೆ ಹಾಗೂ ಜನಪ್ರತಿನಿಧಿಗಳಿಗೆ ಈ ನಿಮಯ, ಕಾನೂನುಗಳು ಅನ್ವಯವಾಗ್ತಿಲ್ಲ.
ಮಂಗಳೂರು ಹೊರವಲಯದ ಉಳ್ಳಾಲದ ಬೀಚ್ ಬಳಿಯಿರುವ ವಿಧಾನ ಪರಿಷತ್ ಸದಸ್ಯ, ಜೆಡಿಎಸ್ ಮುಖಂಡ ಬಿ.ಎಂ.ಫಾರೂಕ್ ಗೆ ಸೇರಿದ ಗೆಸ್ಟ್ ಹೌಸ್ ಆವರಣದಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮ ಮರಳು ರಾಶಿ ಹಾಕಲಾಗಿದೆ.
ಸಮುದ್ರ ತೀರದಲ್ಲಿ ರಾಶಿ ಬಿದ್ದ ಮರಳನ್ನು ರಾಜಾರೋಷವಾಗಿ ಜೆಸಿಬಿ ಮೂಲಕ ಗೆಸ್ಟ್ ಹೌಸ್ ಕಂಪೌಂಡ್ ಒಳಗೆ ತುಂಬಿಸಲಾಗಿದೆ. ನಿನ್ನೆ ಸಂಜೆ ಹೊತ್ತಿಗೆ ಈ ಅಕ್ರಮ ನಡೆದಿದ್ದು ಸ್ಥಳೀಯರು ವಿಡಿಯೋ ಮಾಡಿ ಮಾಧ್ಯಮಕ್ಕೆ ಮುಟ್ಟಿಸಿದ್ದಾರೆ.
ಸಮುದ್ರ ದಂಡೆಯ ಮರಳನ್ನು ಈ ರೀತಿ ಯಾವುದೇ ಎಗ್ಗಿಲ್ಲದೆ ತನ್ನ ಕಂಪೌಂಡ್ ಒಳಸೇರಿಸಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಕಾನೂನು, ಕಟ್ಟಳೆಗಳು ಕೇವಲ ಬಡವರಿಗೆ ಮಾತ್ರನಾ ಎಂದು ಕೇಳುವಂತಾಗಿದೆ. ರಾಶಿ ಹಾಕಿದ ಮರಳು ನೂರಾರು ಟನ್ ನಷ್ಟಿದ್ದು ಮಾರುಕಟ್ಟೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯ ಹೊಂದಿದೆ.
VIDEO