LATEST NEWS
ಮಂಗಳೂರಿನಲ್ಲಿ ಅನ್ನಭಾಗ್ಯ ಯೋಜನೆ ಅಕ್ಕಿಯ ಅಕ್ರಮ ಮಾರಾಟ
ಮಂಗಳೂರಿನಲ್ಲಿ ಅನ್ನಭಾಗ್ಯ ಯೋಜನೆ ಅಕ್ಕಿಯ ಅಕ್ರಮ ಮಾರಾಟ
ಮಂಗಳೂರು ಸೆಪ್ಟೆಂಬರ್ 7: ರಾಜ್ಯ ಸರಕಾರದ ಅನ್ನಭಾಗ್ಯ ಯೋಜನೆಯ ಅಕ್ಕಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವೇಳೆ ಅಧಿಕಾರಿಗಳು ದಾಳಿ ನಡೆಸಿ ಸುಮಾರು 5 ಕ್ವಿಂಟಾಲ್ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ.
ರಾಜ್ಯ ಸರಕಾರ ಬಡವರಿಗೆಂದು ಉಚಿತವಾಗಿ ನೀಡುವ ಅನ್ನಭಾಗ್ಯ ಯೋಜನೆಯ ಅಕ್ಕಿ ಇದಾಗಿದ್ದು. ಮಂಗಳೂರಿನ ಶಕ್ತಿನಗರದಲ್ಲಿರುವ ಸರ್ಕಾರಿ ರೈಸ್ ಮಿಲ್ ನಿಂದ ಅಕ್ಕಿಯನ್ನು ಲಾರಿ ಮೂಲಕ ಸಾಗಾಟ ಮಾಡಿ ಮಂಗಳೂರಿನ ಬೊಂದೆಲ್ ನಲ್ಲಿರುವ ಖಾಸಗಿ ರೈಸ್‌ಮಿಲ್‌ಗೆ ತಂದು ಗೋಣಿ ಬದಲಾಯಿಸಿ ಮಾರಾಟ ಮಾಡಲಾಗುತ್ತಿದ್ದು ಎಂದು ಆರೋಪಿಸಲಾಗಿದೆ.
ಪಾಂಡೇಶ್ವರ ಕಾರ್ಪೊರೇಟರ್ ದಿವಾಕರ್,ಆರ್ಟಿ ಐ ಕಾರ್ಯಕರ್ತರ ಹನುಮಂತ್ ಕಾಮತ್ ನೇತೃತ್ವದಲ್ಲಿ ದಾಳಿ ನಡೆಸಿದಾಗ ಈ ಅಕ್ರಮ ಬಯಲಿಗೆ ಬಂದಿದ್ದು. ಮಂಗಳೂರಿನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಲಾರಿ ಕೆಎ -19- ಎಎ- 5508 ಇದರಲ್ಲಿ ಅಕ್ಕಿಯನ್ನು ಖಾಸಗಿ ಮಳಿಗೆಯಲ್ಲಿ ಮಾರಾಟ ಮಾಡಲು ತಯಾರಿ ನಡೆಸಲಾಗಿತ್ತು. ಸ್ಥಳಕ್ಕೆ ಕಾವೂರು ಠಾಣಾಧಿಕಾರಿ ಭೇಟಿ ನೀಡಿದ್ದು ಲಾರಿ ಚಾಲಕ ಪೊಲೀಸ್ ವಶಕ್ಕೆ ಪಡೆದಿದ್ದಾರೆ .