DAKSHINA KANNADA
ಪುತ್ತೂರು – ಬೃಹತ್ ಆಯಿಲ್ ದಂಧೆ ಪತ್ತೆ – ಅಕ್ರಮವಾಗಿ ಸಂಗ್ರಹಿಸಿದ್ದ 36 ಸಾವಿರ ಲೀಟರ್ ಫರ್ನೇಸ್ ಆಯಿಲ್ ವಶಕ್ಕೆ
ಪುತ್ತೂರು ಜೂನ್ 30: ಅಕ್ರಮವಾಗಿ ಟ್ಯಾಂಕರ್ ಗಳಿಂದ ಫರ್ನೇಸ್ ಆಯಿಲ್ ನ್ನು ಕದ್ದು ಮಾರಾಟ ಮಾಡುತ್ತಿದ್ದ ಆಯಿಲ್ ದಂಧೆಯ ಬೃಹತ್ ಜಾಲವನ್ನು ದಕ್ಷಿಣಕನ್ನಡ ಪೊಲೀಸರು ಪುತ್ತೆ ಹಚ್ಚಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿಯನ್ನುಬಂಧಿಸಲಾಗಿದೆ.
ಬಂಧಿತರನ್ನು ರಘುನಾಥನ್, ಮುತ್ತು ಪಾಂಡಿ, ಜಿ ದಾಸ್ (37),ಸಿಂಗರಾಜ್ (42) , ಎಸ್ ಕಾರ್ತಿ (27), ಸೆಲ್ವರಾಜ್ (60) ಎಂದು ಗುರುತಿಸಲಾಗಿದೆ. ಬಂಧಿತರು ಉಪ್ಪಿನಂಗಡಿ ಸಮೀಪದ ನೆಲ್ಯಾಡಿ ಎಂಬಲ್ಲಿ ರಾಷ್ಟ್ರೀಯ ಹೆದ್ದಾರೆ 75 ಪಕ್ಕದಲ್ಲೇ ನಿರ್ಜನ ಪ್ರದೇಶದಲ್ಲಿ ಈ ಅಕ್ರಮವಾಗಿ ಈ ದಂಧೆಯನ್ನು ನಡೆಸುತ್ತಿದ್ದರು.
ಆರೋಪಿಗಳು ಆಯಿಲ್ ಟ್ಯಾಂಕರ್ ಚಾಲಕರ ಜೊತೆ ಒಪ್ಪಂದ ಮಾಡಿಕೊಂಡು ಟ್ಯಾಂಕರ್ ಗಳಿಂದ 100 ಲೀಟರ್ ಗೂ ಅಧಿಕ ಆಯಿಲ್ ನ್ನು ಕದ್ದು, ಜಾಗದಲ್ಲಿ ನಿರ್ಮಿಸಿರುವ ಭೂಗತ ಟ್ಯಾಂಕ್ ಒಂದರಲ್ಲಿ ಸಂಗ್ರಹ ಮಾಡುತ್ತಿದ್ದರು, ಹೆಚ್ಚು ಸಂಗ್ರಹಣೆ ಆದ ನಂತರ ಮಾಲಿಕರ ಖಾಲಿ ಟ್ಯಾಂಕರ್ ಗಳಲ್ಲಿ ತುಂಬಿಸಿ ಇತರೇ ಸ್ಥಳಗಳಿಗೆ ಸೂಕ್ತ ದಾಖಲಾತಿಗಳಿಲ್ಲದೆ ಅಕ್ರಮವಾಗಿ ಸಾಗಿಸಿ ಮಾರಾಟ ಮಾಡುವುದು ತಿಳಿದುಬಂದಿದೆ. ಮಂಗಳೂರು- ಬೆಂಗಳೂರು ಮಾರ್ಗವಾಗಿ ಸಾಗುವ ಫರ್ನೆಸ್ ಆಯಿಲ್ ಟ್ಯಾಂಕರ್ ಗಳ ಚಾಲಕರಿಗೆ ಹಣವನ್ನು ನೀಡಿ ಮಾಲೀಕರ ಗಮನಕ್ಕೆ ತರದೇ ಮಾಲಿಕರಿಗೆ ವಂಚಿಸಿ ನಷ್ಟವನ್ನುಂಟು ಮಾಡಿರುವುದಲ್ಲದೇ, ಕಳ್ಳತನ ಮಾಡಿ ಸಂಗ್ರಹಿಸಿಟ್ಟು ಫರ್ನೇಸ್ ಆಯಿಲನ್ನು ಟ್ಯಾಂಕರ್ ಮೂಲಕ ಚೆನ್ನೈ ಕಡೆಗೆ ಸಾಗಾಟ ಮಾಡುವುದಾಗಿ ಇದನ್ನು ಮುತ್ತು ಪಾಂಡಿ ಮತ್ತು ರಘನಾಥನ್ ಎಂಬಿಬ್ಬರು ನಡೆಸಿರುವುದಾಗಿ ತಿಳಿಸಿದ್ದಾರೆ.
ಆಯಿಲ್ ಶೇಖರಣೆಗಾಗಿ ಭೂಮಿ ಅಡಿಗಡೆ 20 ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕ್ ನ್ನು ಆರೋಪಿಗಳು ನಿರ್ಮಾಣ ಮಾಡಿದ್ದರು. ಕಳೆದ ಹಲವಾರು ವರ್ಷಗಳಿಂದ ನಡೆಯುತ್ತಿದ್ದ ದಂಧೆ ಎನ್ನುವ ಅನುಮಾನ ಇದ್ದು, ಪೋಲೀಸರಿಂದ ಸುಮಾರು 36 ಸಾವಿರ ಲೀಟರ್ ಫರ್ನಿಶ್ ಆಯಿಲ್ ವಶಕ್ಕೆ ಪಡೆಯಾಗಿದೆ. ಅಲ್ಲದೆ ಕೃತ್ಯಕ್ಕೆ ಬಳಸುತ್ತಿದ್ದ ಎರಡು ಟ್ಯಾಂಕರ್ ಹಾಗೂ ಮೋಟಾರು ಪಂಪ್ ಗಳು ಸೇರಿದಂತೆ ಲಕ್ಷಾಂತರ ಮೌಲ್ಯದ ಸೊತ್ತು ವಶ ಪಡಿಸಿಕೊಳ್ಳಲಾಗಿದ್ದು, ಸ್ಥಳಕ್ಕೆ ದಕ್ಷಿಣಕನ್ನಡ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಖುಷಿಕೇಶ್ ಸೋನಾವಣೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಿಂದ ಸ್ವಾಧೀನ ಪಡಿಸಿಕೊಂಡ ಎಲ್ಲಾ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ ರೂ. 35,21,400.
ಈ ಭಾಗದಲ್ಲಿ ಈ ಹಿಂದೆ ಡೀಸೇಲ್,ಪೆಟ್ರೋಲ್ ಹಾಗೂ ಡಾಂಬರ್ ಗಳನ್ನೂ ಕದ್ದು ಮಾರಾಟ ಮಾಡಲಾಗುತ್ತಿತ್ತು, ಆಯಿಲ್ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಒರ್ವ ಸಿಬ್ಬಂದಿಯಿಂದ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಉಪ್ಪಿನಂಗಡಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು