LATEST NEWS
ಗೋವಾದ ಜಂಪಿಂಗ್ ಚಿಕನ್ ಗೆ ಕರಾವಳಿಯಲ್ಲಿ ಕಪ್ಪೆಗಳ ಭೇಟೆ

ಗೋವಾದ ಜಂಪಿಂಗ್ ಚಿಕನ್ ಗೆ ಕರಾವಳಿಯಲ್ಲಿ ಕಪ್ಪೆಗಳ ಭೇಟೆ
ಮಂಗಳೂರು ಜೂನ್ 12: ಕರಾವಳಿಯ ಕಪ್ಪೆಗಳಿಗೆ ಈಗ ಗೋವಾದಲ್ಲಿ ಭಾರಿ ಬೇಡಿಕೆ, ಗೋವಾದಲ್ಲಿ ಜಂಪಿಂಗ್ ಚಿಕನ್ ಎಂದು ಕರೆಯಲ್ಪಡುವ ಖಾದ್ಯಕ್ಕಾಗಿ ಕರ್ನಾಟಕದ ಕರಾವಳಿಯಲ್ಲಿ ಕಪ್ಪೆಗಳ ಅಕ್ರಮ ಸಾಗಾಟ ನಡೆಯುತ್ತಿದೆ.
ಕರಾವಳಿ ಯಲ್ಲಿ ಮಳೆ ಆರಂಭವಾಗುತ್ತಿದ್ದಂತೆ ಕಪ್ಪೆಗಳ ಅಕ್ರಮ ಬೇಟೆ ಆರಂಭವಾಗುತ್ತದೆ. ಗಿಡಗಂಟಿಗಳಲ್ಲಿ , ಕೆರೆ, ತೊರೆ, ನಾಲೆ, ಸೇರಿದಂತೆ ಕಾಡಿನಂಚಿನಲ್ಲಿ ಕಪ್ಪೆಗಳಿಗೆ ಗೋವಾ ದ ರೆಸ್ಟೋರೆಂಟ್ ಗಳಲ್ಲಿ ಭಾರೀ ಬೇಡಿಕೆ ಕೇಳಿಬರುತ್ತದೆ. ಗೋವಾದ ಪ್ರತಿಷ್ಠಿತ ಹೊಟೇಲ್ ಗಳಲ್ಲಿ ಕಪ್ಪೆ ಮಾಂಸಕ್ಕೆ ಜಂಪಿಂಗ್ ಚಿಕನ್ ಎಂದೇ ಜನಪ್ರೀಯತೆ ಪಡೆದಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಕಪ್ಪೆಗಳ ಪೂರೈಕೆಗೆ ಗೋವಾದ ಪ್ರತಿಷ್ಠಿತ ರೆಸ್ಟೋರೆಂಟ್ ಗಳು ಉತ್ತರಕನ್ನಡ ಸೇರಿದಂತೆ ಕರಾವಳಿಯ ಜಿಲ್ಲೆಗಳತ್ತ ಮುಖ ಮಾಡುತ್ತಿವೆ.

ಗೋವಾದಲ್ಲಿ ಕಪ್ಪೆಗಳ ಬೇಟೆ ವಿರುದ್ದ ಕಠಿಣವಾದ ಕಾನೂನು ಇದ್ದು, ಕಪ್ಪೆಗಳ ಅಕ್ರಮ ಭೇಟೆ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಗೋವಾದ ಹೋಟೆಲ್ ಗಳು ಕಪ್ಪೆಗಳಿಗಾಗಿ ಕರ್ನಾಟಕದ ಕಾರವಾರ, ಉಡುಪಿ, ದಕ್ಷಿಣಕನ್ನಡ ಜಿಲ್ಲೆಯತ್ತ ಮುಖ ಮಾಡುತ್ತವೆ. ಇಲ್ಲಿಂದಲೇ ಕಪ್ಪೆಗಳನ್ನು ಗೋವಾದ ಮದ್ಯವರ್ತಿಗಳೇ ಬಂದು ಕೊಂಡೊಯ್ಯತ್ತಾರೆ.
ಈ ಕಳ್ಳದಂಧೆಕೋರರು ಕೇವಲ ಮಳೆಗಾಲದ ಸಂದರ್ಭದಲ್ಲಿ ದೊಡ್ಡ ಕಪ್ಪೆಗಳಿಗಾಗಿ ಹುಡುಕಾಟ ಆರಂಭಿಸುತ್ತಾರೆ. ರಾತ್ರಿಯ ಸಂದರ್ಭದಲ್ಲಿ ಈ ಜಾಲಗಳು ವ್ಯವಸ್ಥಿತವಾಗಿ ಕಾರ್ಯಾಚರಣೆ ಆರಂಭಿಸುತ್ತವೆ. ಕತ್ತಲಾಗುತ್ತಿದ್ದಂತೆ ಟಾರ್ಚ್ ಗಳನ್ನು ಹಿಡಿಡು ಈ ತಂಡಗಳು ಕಪ್ಪೆಗಳ ಬೇಟೆ ಮಾಡಲಾಗುತ್ತದೆ. ಈ ದೊಡ್ಡ ಗಾತ್ರದ ವಿದೇಶಿಯರಿಗೆ ಭಾರೀ ಪ್ರೀಯವಾಗಿರುವ ಈ ಕಪ್ಪೆಗಳನ್ನು ಈ ರೆಸ್ಟೋರಂಟ್ ಗಳು ಹಚ್ಚಿನ ಹಣ ನೀಡಿ ಖರೀದಿಸುತ್ತಿವೆ. ಒಂದು ದೊಡ್ಡಗಾತ್ರದ ಕಪ್ಪೆಗೆ 300 ರಿಂದ 450 ರೂಪಾಯಿ ನೀಡಿ ಖರೀದಿಸಲಾಗುತ್ತದೆ.
ವನ್ಯ ಜೀವಿ ಕಾಯ್ದೆಯಡಿ ಯಾವುದೇ ಕಪ್ಪೆಗಳನ್ನು ಹಿಡಿಯುವುದು, ಹಿಡಿದು ಸಾಗಾಟ ಮಾಡುವುದು ಕಾನೂನು ಬಾಹಿರ. ಕಪ್ಪೆ ಸಂರಕ್ಷಣೆಗೆ ಕಾನೂನು ಇದೆ ಅದರೆ ಕಟ್ಟುನಿಟ್ಟಾಗಿ ಜಾರಿಯಾಗುತ್ತಿಲ್ಲ. ರೈತನ ಮಿತ್ರ ಎಂದೇ ಹೇಳಲಾಗುವ ಈ ಕಪ್ಪೆಗಳ ಸಂರಕ್ಷಣೆಗೆ ಅರಣ್ಯ ಇಲಾಖೆ ಮುಂದಾಗಬೇಕಿದೆ.