LATEST NEWS
ಅಕ್ರಮ ಮೀನುಗಾರಿಕೆ ತಮಿಳುನಾಡು ಮೂಲದ 6 ದೋಣಿಗಳು ವಶಕ್ಕೆ
ಅಕ್ರಮ ಮೀನುಗಾರಿಕೆ ತಮಿಳುನಾಡು ಮೂಲದ 6 ದೋಣಿಗಳು ವಶಕ್ಕೆ
ಮಂಗಳೂರು ಅಕ್ಟೋಬರ್ 23: ಉಳ್ಳಾಲ ಕೋಟೆಪುರ ಸಮೀಪದ ನೇತ್ರಾವತಿ ನದಿ ಕಿನಾರೆಯಲ್ಲಿ ತಮಿಳ್ನಾಡು ಮೂಲದ 6 ದೋಣಿಗಳನ್ನು ಮೀನುಗಾರಿಕೆ ಮತ್ತು ಪೊಲೀಸ್ ಇಲಾಖೆ ಹಾಗೂ ಕರಾವಳಿ ತಟರಕ್ಷಣಾ ಪಡೆಯ ಅಧಿಕಾರಿಗಳ ತಂಡ ಜಂಟಿ ಕಾರ್ಯಾಚರಣೆ ನಡೆಸಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಸ್ಥಳೀಯರು ನೀಡಿದ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ತಂಡವು ಸೂಕ್ತ ದಾಖಲೆಪತ್ರಗಳಿಲ್ಲದ ಕಾರಣ ಈ ದೋಣಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಮುಂದಾಗಿದ್ದಾರೆ. ಮೂಲವೊಂದರ ಪ್ರಕಾರ ನಿಷೇಧಿತ ಕಪ್ಪೆ ಬೊಂಡಾಸ್ ಹಿಡಿಯಲು ತಮಿಳ್ನಾಡಿನ ಮೀನುಗಾರರು ಬಂದಿದ್ದರು ಎನ್ನಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಚಿಕ್ಕವೀರ ನಾಯಕ್, ಉಳ್ಳಾಲದಲ್ಲಿ ಅಕ್ರಮ ದೋಣಿ ಲಂಗರು ಹಾಕಿಕೊಂಡಿದೆ ಎಂದು ಸಾರ್ವಜನಿಕರ ದೂರಿನ ಮೇರೆಗೆ ಸ್ಥಳಕ್ಕೆ ತೆರಳಿ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ದೋಣಿಗಳನ್ನು ವಶಕ್ಕೆ ಪಡೆಯಲಾಗಿದೆ. ಮುಂದಿನ ಕ್ರಮಕ್ಕೆ ದೋಣಿಗಳನ್ನು ಕರಾವಳಿ ತಟರಕ್ಷಣಾ ಪಡೆಗೆ ಹಸ್ತಾಂತರಿಸಲಾಗಿದೆ.