DAKSHINA KANNADA
ಕೊಯಿಲ: ಅಕ್ರಮ ಗೋಸಾಗಾಟ ವಾಹನ ಪೊಲೀಶ್ ವಶಕ್ಕೆ ಚಾಲಕ ಪರಾರಿ
ಕಡಬ ಜನವರಿ 15: ಕೊಯಿಲ ಗ್ರಾಮದ ಪರಂಗಾಜೆ ಎಂಬಲ್ಲಿ ಜಾನುವಾರು ಅಕ್ರಮ ಸಾಗಟವನ್ನು ಪತ್ತೆ ಹಚ್ಚಿದ ಕಡಬ ಪೊಲೀಸರು ಪಿಕಪ್ ವಾಹನ ಮತ್ತು ಅದರಲ್ಲಿದ್ದ ಎಂಟು ಗೋವುಗಳನ್ನು ವಶಕ್ಕೆ ಪಡೆದ ಘಟನೆ ಮಂಗಳವಾರ ಮುಂಜಾನೆ ನಡೆದಿದೆ.
ಕಡಬ ಠಾಣಾಧಿಕಾರಿ ಅಭಿನಂದನ್ ಹಾಗು ಸಿಬ್ಬಂದಿಗಳು ಗಸ್ತು ನಿರತ ವೇಳೆ ಖಚಿತ ಮಾಹಿತಿ ಮೇರೆಗೆ ಪರಂಗಾಜೆ ಎಂಬಲ್ಲಿ ಪಿಕಪ್ ವಾಹನವನ್ನು ತಡೆದು ನಿಲ್ಲಿಸಿದಾಗ ಅದರಲ್ಲಿದ್ದ ಚಾಲಕ ಪರಾರಿಯಾಗಿದ್ದಾನೆ. ಬಳಿಕ ಪರಿಶೀಲನೆ ನಡೆಸಿದಾಗ ಹಿಂಸತ್ಮಾಕ ರೀತಿಯಲ್ಲಿ ಗೋವುಗಳನ್ನು ತುಂಬಿಸಿ ಅದರ ಮೇಲೆ ತರಕಾರಿ ತುಂಬಿಸುವ ಟ್ರೆಗಳನ್ನು ಇಡಲಾಗಿತ್ತು. ಗೋವುಗಳನ್ನು ವದೆ ಮಾಡುವ ಹಿನ್ನೆಲೆಯಿಂದ ಸಾಗಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ವಾಹನ ಹಾಗು ಗೋವುಗಳನ್ಬು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ. ಠಾಣೆಯಲ್ಲಿ ಪಿಕಪ್ ನಿಂದ ಗೋವುಗಳನ್ನು ಹೊರತೆಗೆಯುವ ಸಂದರ್ಭ ಎಂಟು ಗೋವುಗಳ ಪೈಕಿ ಮೂರು ಗೋವುಗಳು ಮೃತಪಟ್ಟಿರುವುದು ಕಂಡುಬಂದಿದೆ. ಇನ್ನುಳಿದವುಗಳು ಕೂಡ ಅಸ್ವಸ್ಥಗೊಂಡಿದೆ ಎಂದು ತಿಳಿದುಬಂದಿದೆ.
ಇತ್ತೀಚಿನ ದಿನಗಳಲ್ಲಿ ಕಡಬ ಸುತ್ತಮುತ್ತಲು ಅಕ್ರಮ ಗೋ ಸಾಗಾಟ , ಗೋವಧೆ ಹೆಚ್ಚಾಗುತ್ತಿದ್ದು ನಾಗರಿಕರಲ್ಲಿ ಕಳವಳ ಉಂಟು ಮಾಡಿದೆ. ಹಿಂದೂಗಳು ದೇವರೆಂದು ಪೂಜಿಸುವ ಗೋವುಗಳ ಹತ್ಯೆ ಮಾಡುತ್ತಿರುವುದು ಅತ್ಯಂತ ಘೋರ ಅಪರಾಧ. ಮಂಗಳವಾರ ಕಡಬ ತಾಲೂಕಿನ ಕೊಯಿಲದ ಬಳಿ ಅಕ್ರಮ ಗೋ ಸಾಗಾಟ ಮಾಡುತ್ತಿದ್ದವರನ್ನು ಪೊಲೀಸ್ ಇಲಾಖೆ ಪತ್ತೆ ಹಚ್ಚಿದ್ದು ಪಿಕಪ್ ವಾಹನದಲ್ಲಿ ಇದ್ದ 8 ಗೋವುಗಳಲ್ಲಿ 3 ಗೋವುಗಳು ಈಗಾಗಲೇ ಮೃತಪಟ್ಟಿದ್ದು ಉಳಿದ ಗೋವುಗಳನ್ನು ರಕ್ಷಣೆ ಮಾಡಲಾಗಿದೆ. ಇಂತಹ ಘಟನೆಗಳು ಇನ್ನು ಮುಂದೆ ನಡೆಯಬಾರದೆಂದು ಸರಕಾರ ಹಾಗೂ ಮತಾಂಧ ಶಕ್ತಿಗಳನ್ನು ಎಚ್ಚರಿಸಲು ಬುಧವಾರ ಸಂಜೆ ಕಡಬ ಪೊಲೀಸ್ ಠಾಣೆ ಮುಂಭಾಗದಲ್ಲಿ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ.