KARNATAKA
ಅಕ್ಕನ ಜೊತೆ ಅನೈತಿಕ ಸಂಬಂಧ – ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದವನ ಮುಗಿಸಿದ ತಮ್ಮ!

ಹಾವೇರಿ ಜುಲೈ 26: ಅಕ್ಕನ ಜತೆ ಅನೈತಿಕ ಸಂಬಂಧ ಹೊಂದಿದ್ದ ಯುವಕನನ್ನು ತಮ್ಮ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿ ನಡೆದಿದೆ.
ಅಕ್ಕನ ಜೊತೆ ಚಳಗೇರಿ ಗ್ರಾಮದಲ್ಲಿ ದಿಲೀಪ್ ಹಿತ್ತಲಮನಿ(47) ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಇದನ್ನು ಕಂಡ ಅಕ್ಕನ ತಮ್ಮ ರಾಜಯ್ಯ ಸಿಡಿದೆದ್ದು, ದಿಲೀಪ್ ಹಿತ್ತಲಮನಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದಾನೆ.
ನಂತರ ರಾಜಯ್ಯ ಪೊಲೀಸರ ಮುಂದೆ ಶರಣಾಗಿದ್ದು ನನ್ನ ಅಕ್ಕನಿಗೆ ಮದುವೆಯಾಗಿದೆ ಬಿಟ್ಟು ಬಿಡು ಎಂದು ಹೇಳಿದ್ದೆ ಆದರೆ ಇದಕ್ಕೆ ದಿಲೀಪ ಒಪ್ಪಲಿಲ್ಲ. ಹೀಗಾಗಿ ಕೊಲೆ ಮಾಡಿದೆ ಎಂದು ರಾಜಯ್ಯ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.
