Connect with us

LATEST NEWS

ಉಸೇನ್ ಬೋಲ್ಟ್ ದಾಖಲೆ ಮುರಿದ ಕಂಬಳ ಓಟಗಾರನಿಗೆ ಕೇಂದ್ರ ಕ್ರೀಡಾ ಸಚಿವರ ಬೆಂಬಲ

ಉಸೇನ್ ಬೋಲ್ಟ್ ದಾಖಲೆ ಮುರಿದ ಕಂಬಳ ಓಟಗಾರನಿಗೆ ಕೇಂದ್ರ ಕ್ರೀಡಾ ಸಚಿವರ ಬೆಂಬಲ

ಮಂಗಳೂರು ಫೆಬ್ರವರಿ 15: ಕಂಬಳ ಗದ್ದೆಯಲ್ಲಿ 100 ಮೀಟರ್ ಓಟವನ್ನು 9.55 ಸೆಕೆಂಡ್​ಗಳಲ್ಲಿ ಕ್ರಮಿಸಿದ ಅಶ್ವತ್ಥಪುರ ಶ್ರೀನಿವಾಸ ಗೌಡ ಅವರ ಓಟ ಈಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಇಂದು ಬೆಳಿಗ್ಗೆಯಿಂದಲೇ ಟ್ವೀಟರ್ ನಲ್ಲಿ ಉಸೇನ್ ಬೋಲ್ಟ್ ಹೆಸರಿನಲ್ಲಿ ಶ್ರೀನಿವಾಸ ಗೌಡ ಅವರು ಟ್ರೆಂಡಿಂಗ್ ನಲ್ಲಿದ್ದರು.

ಫೆ.1ರಂದು ನಡೆದ ಐಕಳಬಾವ ಕಾಂತಬಾರೆ ಬೂದಬಾರೆ ಜೋಡುಕರೆ ಕಂಬಳದಲ್ಲಿ ಶ್ರೀನಿವಾಸ್ ಕೋಣಗಳೊಂದಿಗೆ ನೇಗಿಲು ಹಿರಿಯ ವಿಭಾಗದಲ್ಲಿ 142.50 ಮೀಟರ್ ಉದ್ದದ ಕರೆಯನ್ನು 13.62 ಸೆಕೆಂಡ್​ಗಳಲ್ಲಿ ಕ್ರಮಿಸಿದ್ದಾರೆ. ಇದನ್ನು 100 ಮೀಟರ್​ಗೆ ಬದಲಾಯಿಸಿದರೆ 9.55 ಸೆಕೆಂಡ್​ಗಳಲ್ಲಿ ಓಡಿದಂತಾಗುತ್ತದೆ.

ಇಷ್ಟು ವೇಗದಲ್ಲಿ ಈವರೆಗೆ ಕಂಬಳ ಕೆರೆಯಲ್ಲಿ ಯಾರೂ ಓಡಿರುವ ದಾಖಲೆ ಇಲ್ಲ. ವಿಶ್ವವಿಖ್ಯಾತ ಓಟಗಾರ ಜಮೈಕಾದ ಉಸೇನ್ ಬೋಲ್ಟ್ ಟ್ರ್ಯಾಕ್ ನಲ್ಲಿ 9.58 ಸೆಕೆಂಡ್​ಗಳಲ್ಲಿ 100 ಮೀ. ಓಡಿರುವುದನ್ನು ಕೆಸರುಗದ್ದೆಯಲ್ಲಿ ಓಡಿರುವ ಶ್ರೀನಿವಾಸ ಗೌಡ ಮೀರಿಸಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಈಗಾಗಲೇ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದು, ಕಾಂಗ್ರೇಸ್ ಮುಖಂಡ ಶಶಿ ತರೂರ್ ತಮ್ಮ ಟ್ವೀಟರ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, ಸಂಬಂಧಪಟ್ಟ ಇಲಾಖೆ ಈ ಪ್ರತಿಭೆಯನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ತಿಳಿಸಿದ್ದರು.

ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಈ ಬಗ್ಗೆ ಟ್ವೀಟ್ ಮಾಡಿದ್ದು, ಶ್ರೀನಿವಾಸ ಗೌಡ ಅವರ ಜೊತೆ ಮಾತನಾಡಿದ ಸಾಯ್ ನಲ್ಲಿ ಟ್ರಯಲ್ ನೋಡಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲದೆ ಜನರಲ್ಲಿ ಒಲಂಪಿಕ್ಸ್ ಕ್ರೀಡಾಕೂಟದ ಕುರಿತಂತೆ ಮಾಹಿತಿಯ ಕೊರತೆ ಇದ್ದು, ಅಲ್ಲಿ ಕ್ರೀಡಾಪಟುಗಳ ಸಾಮರ್ಥ್ಯವನ್ನು , ಸಹಿಷ್ಣುತೆ ಎಲ್ಲಾ ಗಣನೆಗೆ ಬರುತ್ತದೆ ಎಂದು ತಿಳಿಸಿದರು. ಅಲ್ಲದೆ ದೇಶದ ಎಲ್ಲಾ ಕ್ರೀಡಾ ಪ್ರತಿಭೆಗಳಿಗೆ ಅವಕಾಶ ನೀಡಲಾಗುವುದು ಎಂದರು. ಯಾರೊಬ್ಬರು ಅವಕಾಶ ವಂಚಿತರಾಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

https://twitter.com/anandmahindra/status/1228519350165889024

ಮಹಿಂದಾ ಕಂಪೆನಿ  ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಟ್ವೀಟ್ ಮಾಡಿದ್ದು, ಶ್ರೀನಿವಾಸ ಗೌಡ ಅವರ ದೇಹದ್ರಾಡ್ಯತೆ ನೋಡಿದರೆ ದೇಶಕ್ಕೆ ಒಳ್ಳೆಯ ಕ್ರೀಡಾಪಟು ಆಗು ಎಲ್ಲಾ ಲಕ್ಷಣಗಳು ಇದ್ದು, ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಅವರು ಶ್ರೀನಿವಾಸ ಗೌಡ ಅವರಿಗೆ ತರಬೇತಿ ನೀಡಬೇಕು. ಅಥವಾ ಕಂಬಳವನ್ನು ಒಲಂಪಿಕ್ಸ್ ನಲ್ಲಿ ಸೇರಿಸಬೇಕು ಎಂದಿದ್ದು, ಒಟ್ಟಾರೆ ಶ್ರೀನಿವಾಸ ಗೌಡ ಅವರಿಂದ ದೇಶಕ್ಕೆ ಚಿನ್ನದ ಪದಕ ಬರಬೇಕೆಂದು ಟ್ವೀಟ್ ಮಾಡಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *