UDUPI
ಅಸಹಾಯಕ ಪರಿಸ್ಥಿತಿಯಲ್ಲಿದ್ದ ಉಡ ರಕ್ಷಣೆ
ಅಸಹಾಯಕ ಪರಿಸ್ಥಿತಿಯಲ್ಲಿದ್ದ ಉಡ ರಕ್ಷಣೆ
ಉಡುಪಿ, ಸೆಪ್ಟೆಂಬರ್ 21: ವಾಹನದ ಅಡಿಗೆ ಸಿಕ್ಕಿ ಅಥವಾ ಮಾಂಸದ ಆಸೆಗೆ ಯಾರೋ ಹೊಡೆದು ಗಾಯಗೊಂಡು ಓಡಲಾಗದ ಸ್ಥಿತಿಯಲ್ಲಿದ್ದ ಉಡವನ್ನು ಸಾಮಾಜಿಕ ಕಾರ್ಯಕರ್ತರು ರಕ್ಷಿಸಿದ್ದಾರೆ. ಬಲು ಅಪರೂಪವಾಗುತ್ತಿರುವ ಜೀವ ವೈವಿದ್ಯವಾಗಿರುವ ಉಡ, ಸುಮಾರು ಎರಡು ಕೆಜಿ ಭಾರವಿದ್ದು 3 ಅಡಿ ಉದ್ದ ಇದೆ.
ಗಾಯಗೊಂಡ ಉಡ ಪತ್ತೆಯಾಗಿದ್ದು ಉಡುಪಿ ಹೊರವಲಯದ ಪೆರಂಪಳ್ಳಿಯಲ್ಲಿ, ಸ್ಥಳಿಯ ಪ್ರಾಣಿಪ್ರೀಯರಾದ ಮನೋಜ್ ಕುಮಾರ್ ಅವರು ಊಡವನ್ನು ಹಿಡಿದು ಸಾಮಾಜಿಕ ಕಾರ್ಯಕರ್ತರಾದ ಶಿರೂರು ತಾರಾನಾಥ್ ಮೇಸ್ತರಿಗೆ ತಂದೊಪ್ಪಿಸಿದ್ದಾರೆ. ತಾರಾನಾಥ್ ಮೇಸ್ತರು ನಂತರ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರನ್ನು ಸಂಪರ್ಕಿಸಿದ್ದಾರೆ.
ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತರು ಅರಣ್ಯ ಇಲಾಖೆಯನ್ನು ಸಂಪರ್ಕಿಸಿ ಊಡವನ್ನು ಅರಣ್ಯ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಊಡಕ್ಕೆ ಪಂಜರದಲ್ಲಿ ಆಶ್ರಯ ನೀಡಿದ್ದಾರೆ. ಊಡ ಬಲಿಷ್ಠವಾದ ಪ್ರಾಣಿ ಸಂಕುಲವಾಗಿದ್ದು, ಇದರ ಮಾಂಸಕ್ಕೆ ಬಲು ಬೇಡಿಕೆ ಇದೆ, ಊಡದ ಎಣ್ಣೆ ಔಷಧಿಯ ಗುಣ ಹೊಂದಿದ್ದು, ಚರ್ಮವು ಬಳಕೆಗೆ ಬರುತ್ತದೆ ಹಾಗಾಗಿ ಊಡ ಸಂತತಿಯು ವಿನಾಶದ ಅಂಚಿನಲ್ಲಿದ್ದು, ಊಡದ ಸಂತತಿಯು ವಿನಾಶಗೊಳ್ಳುತ್ತಿದೆ. ಸಮಾಜಿಕ ಕಾರ್ಯಕರ್ತರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.