Connect with us

LATEST NEWS

ಇಲ್ಲಿ 25 ವರ್ಷಕ್ಕಿಂತ ಮೊದಲು ಮದುವೆ ಆಗದಿದ್ದರೆ ಇಂತಹ ಕಠೋರ ಶಿಕ್ಷೆ!

ಇಲ್ಲೊಂದು ದೇಶದಲ್ಲಿ ವಿಚಿತ್ರ ಆಚರಣೆಯನ್ನು ಮಾಡಲಾಗುತ್ತದೆ. ಯಾರಾದರೂ ಮದುವೆಯಾಗದೆ 25 ವರ್ಷಗಳು ಕಳೆದರೆ, ಅದು ಹುಡುಗನಾಗಿರಲಿ ಅಥವಾ ಹುಡುಗಿಯಾಗಿರಲಿ, ಅವರ ಸ್ನೇಹಿತರು ಅವರನ್ನು ಕಂಬಕ್ಕೆ ಅಥವಾ ಮರಕ್ಕೆ ಕಟ್ಟಿ ದಾಲ್ಚಿನ್ನಿ ಪುಡಿ ಅಥವಾ ಖಾರದ ಪುಡಿಯಿಂದ ಅವರಿಗೆ ಸ್ನಾನ ಮಾಡಿಸುತ್ತಾರೆ.

ಪ್ರತಿಯೊಂದು ದೇಶವೂ ತನ್ನದೇ ಆದ ನಂಬಿಕೆಗಳನ್ನು ಹೊಂದಿದೆ. ಎಲ್ಲೋ ಒಂದು ಕಡೆ ಬಾಲ್ಯ ವಿವಾಹವನ್ನು ಒಳ್ಳೆಯದು ಎಂದು ಪರಿಗಣಿಸಿದರೆ, ಇನ್ನೊಂದು ಕಡೆ ಜನರು ತಡವಾಗಿ ಮದುವೆಯಾಗುವುದು ಒಳ್ಳೆಯದು ಎನ್ನುತ್ತಾರೆ. ಆದರೆ ಡೆನ್ಮಾರ್ಕ್‌ನಲ್ಲಿ ಯಾರಾದರೂ 25 ವರ್ಷ ವಯಸ್ಸಿನವರೆಗೆ ಅವಿವಾಹಿತರಾಗಿದ್ದರೆ, ಅವರಿಗೆ ದಾಲ್ಚಿನ್ನಿ ಪುಡಿ ಮತ್ತು ಇತರ ಖಾರ ಮಸಾಲೆಗಳಿಂದ ಸ್ನಾನ ಮಾಡಿಸಲಾಗುತ್ತದೆ.

ನೀವು ಈ ಪದ್ಧತಿಯನ್ನು ಎಂಜಾಯ್ ಮಾಡಲು ಆಚರಣೆ ಮಾಡುತ್ತಿದ್ದಾರೆ ಎಂದು ಭಾವಿಸಿದ್ದರೆ ಅದು ತಪ್ಪು. ಇದು ಡೆನ್ಮಾರ್ಕ್‌ನಲ್ಲಿ ಇನ್ನೂ ಅನುಸರಿಸುತ್ತಿರುವ ಸಂಪ್ರದಾಯವಾಗಿದೆ. ಡ್ಯಾನಿಶ್ ಸಮಾಜದಲ್ಲಿ ಜನರು 25 ನೇ ವಯಸ್ಸಿಗೆ ಮದುವೆಯಾಗುತ್ತಾರೆ. ಒಂದು ವೇಳೆ ಆಗದಿದ್ದರೆ ಈ ಕಾರ್ಯಕ್ರಮವನ್ನು ಮಾಡಿ ಆನಂದಿಸುತ್ತಾರೆ.

ಮಾಧ್ಯಮ ವರದಿಗಳ ಪ್ರಕಾರ, ಡೆನ್ಮಾರ್ಕ್‌ನ ಈ ಸಂಪ್ರದಾಯವು ಹಲವು ವರ್ಷಗಳಷ್ಟು ಹಳೆಯದು. ಹಿಂದಿನ ಕಾಲದಲ್ಲಿ ಮಾರಾಟಗಾರರು ಮಸಾಲೆಗಳನ್ನು ಮಾರಾಟ ಮಾಡಲು ಒಂದು ನಗರದಿಂದ ಇನ್ನೊಂದು ನಗರಕ್ಕೆ ಪ್ರಯಾಣಿಸುತ್ತಿದ್ದರು. ಅಂತಹ ಪರಿಸ್ಥಿತಿಯಲ್ಲಿ, ಅವರ ಮದುವೆಯು ಸಮಯಕ್ಕೆ ಸರಿಯಾಗಿ ನಡೆಯುತ್ತಿರಲಿಲ್ಲ. ಡ್ಯಾನಿಶ್ ಸಮಾಜದಲ್ಲಿ, ಅಂತಹ ಮಾರಾಟಗಾರರನ್ನು ಪೇಪರ್ ಡ್ಯೂಡ್ಸ್ (ಪೆಬರ್ಸ್ವೆಂಡ್ಸ್) ಮತ್ತು ಮಹಿಳೆಯರನ್ನು ಪೇಪರ್ ಮೇಡನ್ಸ್ (ಪೆಬರ್ಮೊ) ಎಂದು ಕರೆಯಲಾಗುತ್ತಿತ್ತು. ಈ ಸಂದರ್ಭದಲ್ಲಿ ಅವರು ಮಸಾಲೆಗಳೊಂದಿಗೆ ಸ್ನಾನ ಮಾಡಲು ಪ್ರಾರಂಭಿಸಿದರು. ಅಂದಿನಿಂದ ಈ ಅಭ್ಯಾಸ ಚಾಲ್ತಿಯಲ್ಲಿದೆ.

ಈ ಆಚರಣೆಯ ಸಮಯದಲ್ಲಿ, ಜನರು ದಾಲ್ಚಿನ್ನಿ ಪುಡಿಯನ್ನು ತಲೆಯಿಂದ ಕಾಲಿನವರೆಗೆ ಹಚ್ಚುತ್ತಾರೆ. ಹುಲ್ಲುಗಾವಲು ಪ್ರದೇಶದಲ್ಲಿ ವ್ಯಕ್ತಿಯನ್ನು ಕುಳ್ಳಿರಿಸಿ ಖಾರ ಮಸಾಲೆಯಿಂದ ಅವರಿಗೆ ಸ್ನಾನ ಮಾಡಿಸುತ್ತಾರೆ. ಭಾರತದಲ್ಲಿನ ವಿವಾಹಗಳಿಗೆ ಸಂಬಂಧಿಸಿದ ಅನೇಕ ಆಚರಣೆಗಳಂತೆ ಡೆನ್ಮಾರ್ಕ್ ನಲ್ಲಿ ಈ ಅಭ್ಯಾಸ ಇದೆ. ಈ ಅಭ್ಯಾಸದ ಪ್ರಕಾರ ಅವಿವಾಹಿತ ಹುಡುಗ ಹುಡುಗಿಯರು ಶೀಘ್ರದಲ್ಲೇ ಉತ್ತಮ ಜೀವನ ಸಂಗಾತಿಯನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ.

ದಿ ಟೆಲಿಗ್ರಾಫ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಈ ಅಭ್ಯಾಸವನ್ನು ಅನೇಕ ಸ್ಥಳಗಳಲ್ಲಿ ಸಾಮೂಹಿಕವಾಗಿ ಆಯೋಜಿಸಲಾಗುತ್ತದೆ. ಈ ಸಮಯದಲ್ಲಿ ಡೆನ್ಮಾರ್ಕ್‌ನ ಬೀದಿಗಳು ದಾಲ್ಚಿನ್ನಿ ಪುಡಿಯಿಂದ ತುಂಬಿ ತುಳುಕುತ್ತದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *