LATEST NEWS
ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ಹಮಾಸ್ ಮೇಲೆ ನರಕವೇ ಬೀಳಲಿದೆ – ಡೊನಾಲ್ಡ್ ಟ್ರಂಪ್ ಎಚ್ಚರಿಕೆ
ವಾಷಿಂಗ್ಟನ್ ಜನವರಿ 08: ಜನವರಿ 20 ರೊಳಗೆ ಅಮೆರಿಕಾದ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ಹಮಾಸ್ ಮೇಲೆ ನರಕವೇ ಬೀಳಲಿದೆ ಎಂದು ಅಮೇರಿಕಾದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಒತ್ತೆಯಾಳುಗಳ ಬಿಡುಗಡೆಗಾಗಿ ನಡೆಯುತ್ತಿರುವ ಸಂಧಾನಕ್ಕೆ ನಾನು ಅಡ್ಡಿಪಡಿಸುವುದಿಲ್ಲ. ಆದರೆ ನಾನು ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸುವ ಹೊತ್ತಿಗೆ ಎಲ್ಲಾ ಅಮೆರಿಕನ್ ಒತ್ತೆಯಾಳುಗಳು ಬಿಡುಗಡೆಯಾಗಿರಬೇಕು. ಇಲ್ಲದಿದ್ದರೆ ಮಧ್ಯಪ್ರಾಚ್ಯದಲ್ಲಿ ಸೃಷ್ಟಿಯಾಗಲಿರುವ ನರಕಸದೃಷ್ಯ ದೃಶ್ಯಕ್ಕೆ ನಾನು ಹೊಣೆಗಾರನಲ್ಲ..” ಎಂದು ಟ್ರಂಪ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಅಮೆರಿಕದ ಪ್ರಜೆಗಳನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿರುವ ಹಮಾಸ್ ಉಗ್ರ ಸಂಘಟನೆಗೆ, ಅಮೆರಿಕದ ಸೇನಾ ತಾಕತ್ತಿನ ಅರವಿದೆ ಎಂದು ನಾನು ಭಾವಿಸುತ್ತೇನೆ. ಅಮರಿಕನ್ನರ ರಕ್ಷಣೆಗಾಗಿ ನಾವು ಭೂಮಿ-ಆಕಾಶವನ್ನು ಒಂದು ಮಾಡಲು ಸಿದ್ಧರಿದ್ದೇವೆ. ಆದರೆ ನಾವು ಇಂತಹ ಕಠೋರ ತೀರ್ಮಾನ ಕೈಗೊಂಡರೆ ಮಧ್ಯಪ್ರಾಚ್ಯದಲ್ಲಿ ನಜಕ್ಕೂ ನರಕವೇ ಸೃಷ್ಟಿಯಾಗುತ್ತದೆ. ಇದಾಗಬಾರದು ಎಂದರೆ ಹಮಾಸ್ ನಮ್ಮ ಪ್ರಜೆಗಳನ್ನು ಈ ಕೂಡಲೇ ಬಿಡುಗಡೆ ಮಾಡಬೇಕು..” ಎಂದು ಅಮೆರಿಕದ ಚುನಾಯಿತ ಅಧ್ಯಕ್ಷರು ಗುಡುಗಿದ್ದಾರೆ