DAKSHINA KANNADA
ಶಾಂತಿ ಸುವ್ಯವಸ್ಥೆ ಹದಗೆಟ್ರೆ ಅದಕ್ಕೆ ನೇರ ಹೊಣೆ ಪೊಲೀಸ್ ಇಲಾಖೆ: ಅರುಣ್ ಕುಮಾರ್ ಪುತ್ತಿಲ
ಪುತ್ತೂರು, ಮೇ 18: ಪುತ್ತೂರಿನಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರ ದೌರ್ಜನ್ಯ ಆರೋಪ ವಿಚಾರವಾಗಿ ಪೊಲೀಸರ ಅಮಾನವೀಯ ವರ್ತನೆಗೆ ಹಿಂದೂ ಮುಖಂಡ ಅರುಣ್ ಪುತ್ತಿಲ ಕೆಂಡಾಮಂಡಲವಾಗಿದ್ದಾರೆ.
ಯಾರು ನಮ್ಮ ಹಿಂದೂ ಕಾರ್ಯಕರ್ತರ ಮೇಲೆ ದೌರ್ಜನ್ಯವೆಸಗಿದ್ದಾರೋ ಅವರನ್ನ ಅಮನತುಗೊಳಿಸಿ, ಡಿವೈಎಸ್ಪಿ, ಸಂಪ್ಯ ಠಾಣಾ ಎಸ್ಐ ಹಾಗೂ ಸಿಬ್ಬಂದಿ ವರ್ಗದ ಮೇಲೆ ಸೂಕ್ತ ಕ್ರಮ ಕೈಗೊಳ್ಳಿ,ಈ ಘಟನೆ ಬಗ್ಗೆ ದ.ಕ ಎಸ್ಪಿಯವರಲ್ಲಿ ಮಾತನಾಡಿದ್ದೇನೆ.
ಇಂತಹ ಕೃತ್ಯ ಮತ್ತೆ ಎಲ್ಲಿಯೂ ಮುಂದುವರಿಯಬಾರದು, ಇಂದು ಎಸ್ಪಿ ವಿಚಾರಣೆಗಾಗಿ ಪುತ್ತೂರಿಗೆ ಆಗಮಿಸ್ತಾರೆ, ಹಾಗಾಗಿ ಇಂದು ಸಂಜೆಯೊಳಗಡೆ ಯಾರು ಈ ದೌರ್ಜನ್ಯ ಎಸಗಿದ ಪೊಲೀಸರಿದ್ದರೋ ಅವರನ್ನ ಅಮಾನತು ಮಾಡಬೇಕು, ಜೊತೆಗೆ ಪೊಲೀಸರ ಮೇಲೆ ಕೇಸ್ ದಾಖಲಿಸಬೇಕು. ಈ ದೌರ್ಜನ್ಯದ ಬಗ್ಗೆ ಮಾನವ ಹಕ್ಕಿಗೂ ದೂರು ನೀಡುತ್ತೇವೆ.
ಇನ್ನು ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಪುತ್ತೂರಿನಲ್ಲಿ ಹಲವು ಘಟನೆ ನಡೆದಿದೆ. ಅದರಲ್ಲಿ ಈ ಪೊಲೀಸ್ ದೌರ್ಜನ್ಯ ಕೇಸ್ ಕೂಡ ಒಂದು, ಇವೆಲ್ಲವನ್ನ ಹಿಂದೂ ಸಮಾಜ ಸೂಕ್ಷ್ಮವಾಗಿ ಗಮನಿಸುತ್ತಿದೆ.ಇದಕ್ಕೆ ಈ ಕೂಡಲೇ ಕಡಿವಾಣ ಹಾಕಿದ್ರೆ ಚೆನ್ನಾಗಿರುತ್ತೆ, ಇಲ್ಲದಿದ್ದಲ್ಲಿ ಹಿಂದೂ ಸಂಘಟನೆ ಸಂಘರ್ಷಕ್ಕೂ ಸಿದ್ಧರಿದ್ದೇವೆ. ಶಾಂತಿ ಸುವ್ಯವಸ್ಥೆ ಹದಗೆಟ್ರೆ ಇದಕ್ಕೆ ನೇರ ಹೊಣೆ ಪೊಲೀಸ್ ಇಲಾಖೆ ಎಂದು ಅರುಣ್ ಕುಮಾರ್ ಪುತ್ತಿಲ ಎಚ್ಚರಿಕೆ ನೀಡಿದ್ದಾರೆ.