Connect with us

    DAKSHINA KANNADA

    ಜೆರೋಸಾ ಸ್ಕೂಲ್ ಪ್ರಕರಣ, ದೂರು, ಸಾಕ್ಷ್ಯಗಳಿದ್ದರೆ ನೀಡಲು ತನಿಖಾಧಿಕಾರಿ ಸೂಚನೆ..!

    ಮಂಗಳೂರು :  ಮಂಗಳೂರು ಜೆರೋಸಾ ಶಾಲೆಯಲ್ಲಿ ಹಿಂದೂ ಧರ್ಮ ಅವಹೇಳನ ವಿಚಾರದ ಪ್ರಕರಣದಲ್ಲಿ ಸಾರ್ವಜನಿಕರ ದೂರುಗಳಿದ್ದರೆ ಸಲ್ಲಿಸಲು ತನಿಖಾಧಿಕಾರಿ ಆಕಾಶ್ ಶಂಕರ್ ಸೂಚಿಸಿದ್ದಾರೆ.

    ರಾಜ್ಯ ಸರ್ಕಾರದ ನಿರ್ದೇಶನ ಮೇರೆಗೆ ಐಎಎಸ್‌ ಅಧಿಕಾರಿ ಆಕಾಶ್ ಶಂಕರ್ ಕಳೆದ 2 ದಿನಗಳಿಂದ ಮಂಗಳೂರಿನಲ್ಲಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಮಂಗಳೂರಿನ ಜಿಲ್ಲಾ ಪಂಚಾಯತ್ ಕಟ್ಟಡದಲ್ಲಿರುವ ಡಿಡಿಪಿಐ ಕಚೇರಿಯಲ್ಲಿ ಈ ವಿಚಾರಣೆ ನಡೆಯುತ್ತಿದ್ದು ಸಾರ್ವಜನಿಕರ ದೂರು, ಸಾಕ್ಷ್ಯಗಳಿದ್ದರೆ ಅಧಿಕಾರಿ ಮುಂದೆ ಹಾಜರಾಗಬಹುದಾಗಿದೆ. ಇಂದು ಮಧ್ಯಾಹ್ನ 12ರಿಂದ 2 ಗಂಟೆಯ ವರೆಗೆ ದೂರು, ಸಾಕ್ಷ್ಯಗಳನ್ನು ನೀಡಬಹುದಾಗಿದೆ. ಈಗಾಗಲೇ
    ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಎಚ್.ಕೆ ಪುರುಷೋತ್ತಮ್, ಪೊಲೀಸ್ ದೂರು ನೀಡಿದ್ದ ಶರತ್ ಕುಮಾರ್ ಗೆ ನೋಟಿಸ್ ಜಾರಿ ಮಾಡಲಾಗಿದ್ದು ಮಧ್ಯಾಹ್ನ ಡಿಡಿಪಿಐ ಕಚೇರಿಗೆ ಹಾಜರಾಗಿ ಮಾಹಿತಿ ನೀಡಲು ಸೂಚಿಸಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *