BANTWAL
ಸುರೇಂದ್ರ ಬಂಟ್ವಾಳ್ ನನ್ನು ಕೊಂದದ್ದು ನಾನೆ…!?

ಬಂಟ್ವಾಳ, ಅಕ್ಟೋಬರ್ 22 : ಬಂಟ್ವಾಳದಲ್ಲಿ ನಿನ್ನೆ ಬರ್ಬರವಾಗಿ ಹತ್ಯೆಯಾದ ಚಿತ್ರ ನಟ ಸುರೇಂದ್ರ ಬಂಟ್ವಾಳಪ್ರಕರಣವನ್ನು ಭೇದಿಸಲು ವಿಶೇಷ ಪೊಲಿಸ್ ತಂಡಗಳನ್ನು ರಚಿಸಲಾಗಿದೆ. ಈ ಮಧ್ಯೆ ಸುರೇಂದ್ರನ 22 ವರ್ಷ ಜೊತೆಗಿದ್ದ ಅಪ್ತ ಸತೀಶ್ ಸ್ವತಃ ತಾನೇ ಕೊಲೆ ಮಾಡಿರುವುದಾಗಿ ಹೇಳಿಕೆ ನೀಡಿದ್ದು ಉಡುಪಿಯಲ್ಲಿ ನಡೆದ ಕಿಶನ್ ಹೆಗ್ಡೆ ಕೊಲೆಗೆ ರಿವೆಂಜ್ ಇದು ಎಂದು ಸ್ವಷ್ಟಪಡಿಸಿದ್ದಾನೆ.
ನಾನು ಎರಡು ದಿನದಲ್ಲಿ ಪೊಲೀಸರಿಗೆ ಶರಣಾಗುವುದಾಗಿ ಆಡಿಯೋ ಮಾಡಿ ಹೇಳಿಕೆ ನೀಡಿದ್ದಾನೆ. ನಾವು ಈಗ ಕಾರವಾರದಲ್ಲಿದ್ದೇವೆ. ನಮಗೆ ಏನೂ ಮಾಡಬೇಕು ಎಂದು ತೊಚದೆ ಇಲ್ಲಿ ಬಂದಿದ್ದೇವೆ.ಇನ್ನೂ ಒಂದೆರಡು ದಿವಸದಲ್ಲಿ ಪೊಲೀಸರಿಗೆ ಶರಣಾಗತಿ ಅಗುತ್ತೇವೆ ಎಂದು 2 ನಿಮಿಷ 17 ಸೆಕೆಂಡ್ ಮಾತಾನಾಡಿ ಆಡಿಯೋ ವೈರಲ್ ಮಾಡಿದ್ದಾನೆ.
