DAKSHINA KANNADA
ನನ್ನ ಜೀವನದಲ್ಲಿ ಅಮ್ಮನ ಜೊತೆ ಆಕೆಯ ಕಡೆ ಕ್ಷಣದ ತನಕ ಮಾತನಾಡಿಲ್ಲ- ರಾಕ್ ಸ್ಟಾರ್ ರೊಪೇಶ್ ಶೆಟ್ಟಿ

ಮಂಗಳೂರು, ಆಗಸ್ಟ್ 09: ಕನ್ನಡದ ಬಿಗ್ ಬಾಸ್ ಓಟಿಟಿ ಸದ್ಯ ಭಾರಿ ಸುದ್ದಿ ಮಾಡುತ್ತಿದ್ದು, ತುಳುನಾಡಿನ ರಾಕ್ ಸ್ಟಾರ್ ರೊಪೇಶ್ ಶೆಟ್ಟಿ ಈ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ಸುದ್ದಿಯಾಗಿದ್ದಾರೆ. ಹೌದು, ರಾಕ್ ಸ್ಟಾರ್ ರೊಪೇಶ್ ಶೆಟ್ಟಿ ಪ್ರಥಮ ಬಾರಿಗೆ ತಾಯಿಯ ಕುರಿತು ಮಾತಾಡಿದ್ದಾರೆ. ಬಿಗ್ ಬಾಸ್ ನ ನಾನ್ಯಾರು ಟಾಸ್ಕ್ ನಲ್ಲಿ ಎಲ್ಲಾ ಸ್ಪರ್ಧಿಗಳು ಅವರವರ ಜೀವನದ ಕಥೆ ಹಂಚಿಕೊಂಡ ಸಂದರ್ಭ ರೊಪೇಶ್ ಶೆಟ್ಟಿ ಸಹ ತನ್ನ ತಾಯಿಯ ಬಗ್ಗೆ ಹೇಳಿಕೊಂಡಿದ್ದಾರೆ.
” ತಾಯಿ ಬಗ್ಗೆ ನಾನು ಯಾವತ್ತು ಮಾತನಾಡಿಲ್ಲಾ, ಲೈಫ್ ನಲ್ಲಿ ಆಗಿರೊ ಎಕ್ಸಪೀರಿಯನ್ ನಾ ಇನ್ನೊಬ್ಬರ ಜೊತೆ ಹೇಳಿ ಕೊಳ್ಳೊದೆ ಇಷ್ಟ ಇಲ್ಲಾ, ನಾನು ಇದ್ದಿದ್ದು ಒಂದು ಚಿಕ್ಕ ಗ್ರಾಮದಲ್ಲಿ , ಕರೆಂಟ್ ಸಹ ಇರಲಿಲ್ಲಾ, ನನ್ನ ತಂದೆ ಯಕ್ಷಗಾನ ಕಲಾವಿದರು ನನ್ನ ತಾಯಿ ಬೀಡಿ ಕಟ್ಟಿಕೊಂಡು ಜೀವನ ನಡೆಸ್ತಾ ಇದ್ರು, ನನಗೆ ನನ್ನ ಫ್ಯಾಮಿಲಿ ಸ್ಟ್ರಕ್ಚರ್ ಬಗ್ಗೆ ಏನು ಗೊತ್ತಿಲ್ಲಾ, ಅದಕ್ಕೆ ಕಾರಣ ಎನಂದ್ರೆ ನನ್ನ ತಾಯಿಗೆ ಸ್ವಲ್ಪ ಮಾನಸಿಕ ಸಮಸ್ಯೆ ಇತ್ತು, ನನ್ನ ತಾಯಿಗೆ ಫ್ಯಾಮಿಲಿ ನಲ್ಲಿ ಎನಾದರು ಗಲಾಟೆ ಆದರೆ ಮರುದಿನ ಹೀಗಾಗುತ್ತದೆ.”

“ಒಂದು ದಿನ ನನ್ನ ತಂದೆಗು ಅಜ್ಜನಿಗು ದೊಡ್ಡ ಗಲಾಟೆ ನಡಿಯೊತ್ತೆ, ಅವಾಗ ಅನ್ಕೊಂಡೆ ನಾಳೆ ಅಮ್ಮನಿಗೆ ಶುರುವಾಗುತ್ತೆ ಅಂತ, ನನಗೆ ನನ್ನ ತಾಯಿಯನ್ನು ಫೇಸ್ ಮಾಡೊದಕ್ಕೆ ಭಯ ಆಗ್ತಾ ಇತ್ತು. ಈ ಘಟನೆ ನಂತರ ನಾನು ತಾಯಿ ಜೊತೆ ಮಾತನಾಡುವುದನ್ನೆ ಬಿಟ್ಟಿದ್ದೆ. ನನ್ನ ತಾಯಿ ತೀರಿ ಹೋಗುವ ಮುಂಚಿನ ದಿನ ಕೇಳಿದ್ರು ಮಗನೇ ಮಾತಾಡು, ಯಾಕೆ? ಏನಾಯಿತು, ನನ್ನತ್ರ ಯಾಕೆ ಮಾತಾಡೊದಿಲ್ಲಾ ಅಂತ ಚಿಕ್ಕ ಮಕ್ಕಳು ಕೇಳೊತರ ಕೇಳಿದ್ರು. ಆದ್ರು ನಾನು ಮಾತಾಡಿಲ್ಲಾ ನನಗೆ ನಾಚಿಕೆ ಆಗುತ್ತೆ ಅಂತ. ನನ್ನ ಲೈಫ್ ನಲ್ಲಿ ದೊಡ್ಡ ಸ್ಸಾರಿ ಕೇಳ್ಬೆಕಂದ್ರೆ ಅದು ಅಮ್ಮನಿಗೆ….” ಎಂದು ರೊಪೇಶ್ ಶೆಟ್ಟಿ ತಮ್ಮ ತಾಯಿ ಜೊತೆ ಕ್ಷಮೆ ಕೇಳಿದ್ದಾರೆ….!!