LATEST NEWS
ಎತ್ತಿನಹೊಳೆ ಯೋಜನೆ ನಿಲ್ಲಿಸುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ- ಹೆಚ್. ಡಿ ಕುಮಾರಸ್ವಾಮಿ

ಎತ್ತಿನಹೊಳೆ ಯೋಜನೆ ನಿಲ್ಲಿಸುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ- ಹೆಚ್. ಡಿ ಕುಮಾರಸ್ವಾಮಿ
ಮಂಗಳೂರು ಮೇ 22:- ದಕ್ಷಿಣಕನ್ನಡ ಜಿಲ್ಲೆಗೆ ಮಾರಕ ಎಂದು ಹೇಳಲಾಗುವ ಎತ್ತಿನಹೊಳೆ ಯೋಜನೆ ನಿಲ್ಲಿಸುತ್ತೇನೆ ಎಂದು ನಾನು ಎಲ್ಲಿಯೂ ಹೇಳಿಲ್ಲ ಎಂದು ನಿಯೋಜಿತ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿ ಗಳೊಂದಿಗೆ ಮಾತನಾಡಿ ಅವರು ದಕ್ಷಿಣಕನ್ನಡ ಜಿಲ್ಲೆ ಜನತೆಯ ವಿರೋಧ ಇರುವ ಎತ್ತಿನಹೊಳೆ ಯೋಜನೆಯನ್ನು ನಾನು ನಿಲ್ಲಿಸುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ, ಆದರೆ ಆ ಯೋಜನೆಯಲ್ಲಿ ಉಂಟಾಗಿರುವ ಅಕ್ರಮ ತಡೆಯುತ್ತೇನೆ ಎಂದಿದ್ದೆ ಎಂದು ತಿಳಿಸಿದರು.

ಕಾಂಗ್ರೆಸ್ ಮತ್ತು ನಮ್ಮ ಜೆಡಿಎಸ್ ನದ್ದು ಅಪವಿತ್ರ ಮೈತ್ರಿಯೆಂದು ಕೆಲವರು ಆರೋಪ ಮಾಡ್ತಿದಾರೆ. ಇಲ್ಲಿ ಪವಿತ್ರ – ಅಪವಿತ್ರ ಪ್ರಶ್ನೆ ಬರುವುದಿಲ್ಲ. ಶಾಸಕರ ಬಹುಮತ ಇರುವವರೆಗೆ ಸರಕಾರ ನಡೆಯುತ್ತೆ. ನಮ್ಮ ಮೃತ್ರಿ ಗಟ್ಟಿಯಾಗಿದೆ ಎಂದು ಹೇಳಿದರು.
ರೈತರ ಸಾಲ ಮನ್ನಾ ಕುರಿತು ಯಾವುದೇ ಅತಂಕ ಬೇಡ ಎಂದು ಹೇಳಿದ ಅವರು ಸಾಲ ಮನ್ನಾ ವಿಚಾರದಲ್ಲಿ ರೈತರ ಪರ ನಿಲುವು ಕೈಗೊಳ್ತೇನೆ ಎಂದು ಸ್ಪಷ್ಟಪಡಿಸಿದರು. ಅವರು ಈವರೆಗೆ ಸಂಪುಟ ರಚನೆ ಬಗ್ಗೆ ಯಾವುದೇ ನಿರ್ಧಾರ ಆಗಿಲ್ಲ . ಮಾಧ್ಯಮಗಳ ಸುದ್ದಿಯನ್ನು ನಂಬಬೇಡಿ ಎಂದು ಅವರು ಹೇಳಿದರು. ನಾನು ಆಧಿಕಾರ ಸ್ವೀಕರಿಸಿದ ಬಳಿಕ ಚರ್ಚಿಸಿ ನಿರ್ಣಯಕ್ಕೆ ಬರುತ್ತೇವೆ . ವಿಶ್ವಾಸ ಮತ ಭಾಷಣದಲ್ಲಿ ರಾಜ್ಯದ ಕುರಿತು ನನ್ನಎಲ್ಲಾ ಕನಸುಗಳನ್ನು ಹೇಳುತ್ತೇನೆ.