LATEST NEWS
ಹೈದರಬಾದ್ – ಇಬ್ಬರು ಗಂಡು ಮಕ್ಕಳನ್ನು ಕತ್ತಿಯಿಂದ ಕಡಿದು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ತಾಯಿ

ಹೈದರಾಬಾದ್ ಎಪ್ರಿಲ್ 18: ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಗುರುವಾರ ತನ್ನ ಇಬ್ಬರು ಗಂಡು ಮಕ್ಕಳನ್ನು ಕೊಂದು ನಂತರ ತಾನೂ ಐದನೆ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗಜುಲರಾಮರಂನ ಬಾಲಾಜಿ ಲೇಔಟ್ ಸಂಭವಿಸಿದೆ.
33 ವರ್ಷದ ತೇಜಸ್ವಿನಿ ತನ್ನ ಇಬ್ಬರು ಮಕ್ಕಳಾದ ಆಶಿಶ್ ರೆಡ್ಡಿ (7) ಮತ್ತು ಹರ್ಷಿತ್ ರೆಡ್ಡಿ (4) ಅವರನ್ನು ಕತ್ತಿಯಿಂದ ಕಡಿದುಕೊಂದು, ಬಳಿಕ ಐದನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಶಾಲೆಯ ಕೊನೆಯ ದಿನವಾದ ಹಿನ್ನಲೆ ಮನೆಯಲ್ಲಿ ಮಕ್ಕಳು ಇದ್ದರು. ಕಿರುಚಾಟದ ಶಬ್ದ ಕೇಳಿ ನೆರೆಹೊರೆಯವರು ಓಡಿಬಂದಾಗ ಆಶಿಶ್ ರಕ್ತದ ಮಡುವಿನಲ್ಲಿ ಸಾವನಪ್ಪಿದ್ದರೆ, ಮತ್ತೊಬ್ಬ ಮಗು ಹರ್ಷಿತ್ ಗಂಭೀರ ಸ್ಥಿತಿಯಲ್ಲಿರುವುದನ್ನು ಕಂಡುಕೊಂಡರು. ಅವರು ಅವರನ್ನು ಆಸ್ಪತ್ರೆಗೆ ಸಾಗಿಸಿದರು ಆದರೆ ಅಲ್ಲಿಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು” ಎಂದು ಪೊಲೀಸರು ತಿಳಿಸಿದ್ದಾರೆ.

7 ಪುಟಗಳ ಡೆತ್‌ನೋಟ್ (Suicide Note) ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ತೇಜಸ್ವಿನಿ, ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಬಗ್ಗೆ ಉಲ್ಲೇಖಿಸಿದ್ದಾರೆ. ಪುತ್ರರಿಬ್ಬರ ಉಸಿರಾಟದ ತೊಂದರೆ ಹಾಗೂ ಪತಿಯ ಬೆಂಬಲದ ಕೊರತೆಯಿಂದಾಗಿ ಮಾನಸಿಕವಾಗಿ ಕುಗ್ಗಿ ಹೋಗಿರುವುದರಿಂದ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
2 Comments