LATEST NEWS
ಹೆಂಡತಿಯನ್ನು ಕೊಂದು ಕುಕ್ಕರ್ ನಲ್ಲಿ ಬೇಯಿಸಿದ ಪತಿ
ಹೈದರಾಬಾದ್ ಜನವರಿ 23: ಪತಿಯೊಬ್ಬ ತನ್ನ ಹೆಂಡತಿಯನ್ನು ಕೊಂದು ಆಕೆಯ ದೆೇಹವನ್ನು ಕತ್ತರಿಸಿ ಪೀಸ್ ಪೀಸ್ ಮಾಡಿ ಕುಕ್ಕರ್ ನಲ್ಲಿ ಬೇಯಿಸಿದ ಘಟನೆ ಹೈದರಾಬಾದ್ ನ ಮೀರ್ ಪೇಟೆಯಲ್ಲಿ ನಡೆದಿದೆ.
ಕೊಲೆಯಾದ ಮಹಿಳೆಯನ್ನು ವೆಂಕಟ ಮಾಧವಿ(35) ಎಂದು ಗುರುತಿಸಲಾಗಿದ್ದು, ಆಕೆಯ ಪತಿ ನಿವೃತ್ತ ಯೋಧ ಗುರುಮೂರ್ತಿ ಕೊಲೆ ಮಾಡಿದ ಆರೋಪಿ.
ಗುರುಮೂರ್ತಿ ಹಾಗೂ ಮಾಧವಿ ಹದಿಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು ದಂಪತಿಗೆ ಇಬ್ಬರು ಮಕ್ಕಳು, ಇತ್ತೀಚಿಗೆ ಕೆಲ ವರ್ಷದ ಹಿಂದೆ ಕುಟುಂಬ ಜಿಲ್ಲಾಲಗುಡ ನ್ಯೂ ವೆಂಕಟೇಶ್ವರ ಕಾಲನಿಯಲ್ಲಿ ಬಾಡಿಗೆ ಮಾಡಿಕೊಂಡು ವಾಸವಾಗಿದ್ದಾರೆ. . ಗುರುಮೂರ್ತಿ, ಮಾಜಿ ಸೈನಿಕ, ಪ್ರಸ್ತುತ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ (DRDO) ಭದ್ರತಾ ಸಿಬ್ಬಂದಿಯಾಗಿ ಉದ್ಯೋಗಿಯಾಗಿದ್ದಾರೆ.
ಕೆಲವು ವರ್ಷಗಳಿಂದ ಗಂಡ ಹೆಂಡತಿ ನಡುವೆ ಗಲಾಟೆ ನಡೆಯುತ್ತಿತ್ತು ಎಂದು ಹೇಳಲಾಗಿದೆ. ಈ ನಡುವೆ ಮಾಧವಿ ಪೋಷಕರು ಗುರುಮೂರ್ತಿ ಕರೆ ಮಾಡಿ ವಿಚಾರಿಸಿದಾಗ ಆಕೆ ಮನೆಬಿಟ್ಟು ಹೋಗಿದ್ದಾಳೆ ಎಂದಿದ್ದಾನೆ. ಕೆಲವು ದಿನಗಳಲ್ಲಿ ವಾಪಾಸ್ ಬರದೆ ಇದ್ದಾಗ , ಪೊಲೀಸ್ ಠಾಣೆಯಲ್ಲಿ ನಾಪತ್ತೆ ಕಂಪ್ಲೆಟ್ ಕೊಟ್ಟಿದ್ದಾರೆ. ಈ ವೇಳೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹತ್ತಿರದ ಪೊಲೀಸ್ ಠಾಣೆಗೆ ಮಾಧವಿ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ ಜೊತೆಗೆ ವೆಂಕಟೇಶ್ವರ ಕಾಲನಿಗೆ ಬಂದು ಮಾಧವಿ ವಾಸವಿದ್ದ ಮನೆಗೆ ಬಂದು ಪತಿ ಹಾಗೂ ಮಕ್ಕಳ ಬಳಿ ಮಾಹಿತಿ ಕಲೆ ಹಾಕಿದ್ದಾರೆ, ಎಲ್ಲ ಕಡೆ ಬಾವಿ, ನದಿ, ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಎಲ್ಲಾದರೂ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆಯೂ ತನಿಖೆ ನಡೆಸಿದ್ದಾರೆ ಆದರೆ ಎಲ್ಲೂ ಒಂದು ಸುಳಿವೂ ಸಿಗಲಿಲ್ಲ ಇದರ ನಡುವೆ ಪತಿ ಗುರುಮೂರ್ತಿ ಮೇಲೆ ಪೊಲೀಸರು ಒಂದು ಕಣ್ಣಿಟ್ಟಿದ್ದರು ಆತನ ನಡವಳಿಕೆ ಮೇಲೆ ಅನುಮಾನಗೊಂಡ ಪೊಲೀಸರು ಆತನನ್ನು ಮತ್ತೆ ವಿಚಾರಣೆ ನಡೆಸಲು ಠಾಣೆಗೆ ಕರೆಸಿದ್ದಾರೆ ಈ ವೇಳೆ ಪೊಲೀಸರ ದಿಕ್ಕು ತಪ್ಪಿಸಲು ಯತ್ನಿಸಿದ ಗುರುಮೂರ್ತಿ ಗೆ ಪೊಲೀಸರ ದಾಟಿಯಲ್ಲೇ ವಿಚಾರಣೆ ನಡೆಸಿದ್ದಾರೆ, ಈ ವೇಳೆ ತನ್ನ ಕೃತ್ಯವನ್ನು ವಿವರಿಸಿದ್ದಾನೆ ಇದನ್ನು ಕೇಳಿದ ಪೊಲೀಸರೇ ಒಂದು ಕ್ಷಣ ದಂಗಾಗಿದ್ದಾರೆ.
ಈ ವೇಳೆ ತಾನು ಹೆಂಡತಿಯನ್ನು ಕೊಂದು ಬಾತ್ರೂಮ್ ನಲ್ಲಿ ದೇಹವನ್ನು ಕತ್ತರಿಸಿ ಕುಕ್ಕರ್ ನಲ್ಲಿ ಅದನ್ನು ಬೇಯಿಸಿದ್ದೇನೆ , ಬಳಿಕ ಅದನ್ನು ಒಣಗಿಸಿ ಪುಡಿ ಮಾಡಿ ಮೂರು ದಿನಗಳ ಕಾಲ ಮಾಂಸ ಮತ್ತು ಮೂಳೆಗಳನ್ನು ಪ್ಯಾಕ್ ಮಾಡಿ ಮೀರಪೇಟ್ ಸರೋವರಕ್ಕೆ ಎಸೆದಿದ್ದಾನೆ ಎಂದು ತಿಳಿಸಿದ್ದಾನೆ. ಈ ಕೃತ್ಯ ಎಸಗುವ ಮೊದಲು ಯೂ ಟ್ಯೂಬ್ ಮೂಲಕ ಯಾವ ರೀತಿ ಹತ್ಯೆ ನಡೆಸ ಬಹುದು ಅಲ್ಲದೆ ಕುರುಹುಗಳನ್ನು ನಾಶಮಾಡುವುದು ಎಲ್ಲವನ್ನು ಯೂ ಟ್ಯೂಬ್ ಮೂಲಕ ನೋಡಿ ಕಲಿತುಕೊಂಡೆ ಎಂದು ಆರೋಪಿ ಗುರುಮೂರ್ತಿ ಹೇಳಿದ್ದಾರೆ.