Connect with us

LATEST NEWS

ವಾಟ್ಸಪ್ ಮೂಲಕ 5 ಲಕ್ಷ ಕೊಕೇನ್ ಆರ್ಡರ್ ಮಾಡಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಆಸ್ಪತ್ರೆ ಸಿಇಓ

ಹೈದರಾಬಾದ್ ಮೇ 11: ಹೈದರಾಬಾದ್‌ನಲ್ಲಿ ಐದು ಲಕ್ಷ ರೂಪಾಯಿ ಮೌಲ್ಯದ ಕೊಕೇನ್ ಖರೀದಿಸುವಾಗ ಸಿಕ್ಕಿಬಿದ್ದ ವೈದ್ಯೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರು ತಿಂಗಳ ಹಿಂದೆ ಒಮೆಗಾ ಆಸ್ಪತ್ರೆಗಳ ಸಿಇಒ ಹುದ್ದೆಗೆ ರಾಜೀನಾಮೆ ನೀಡಿದ ನಮ್ರತಾ ಚಿಗುರುಪತಿ, ಮುಂಬೈ ಮೂಲದ ಪೂರೈಕೆದಾರ ವಂಶ್ ಧಕ್ಕರ್ ಅವರಿಂದ ಕೊರಿಯರ್ ಮೂಲಕ ಕೊಕೇನ್ ಪಡೆಯುತ್ತಿದ್ದಾಗ ಬಂಧಿಸಲಾಯಿತು.


ಮುಂಬೈ ಮೂಲದ ಡೀಲರ್‌ ವಂಶ್ ಧಕ್ಕರ್‌ ಕಳುಹಿಸಿದ್ದ ಕೊರಿಯರ್‌ ಮೂಲಕ ಕೊಕೇನ್‌ ಪಡೆಯುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ. ಡೀಲರ್‌ ಧಕ್ಕರ್‌ ಆಪ್ತ ಬಾಲಕೃಷ್ಣ ಜೊತೆಗೆ ನಮ್ರತಾಳನ್ನೂ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಹೈದರಾಬಾದ್‌ ಆಸ್ಪತ್ರೆಯೊಂದರ ಸಿಇಓ ಆಗಿರುವ ನಮ್ರತಾ ಧಕ್ಕರ್‌ನನ್ನ ವಾಟ್ಸಪ್‌ ಮೂಲಕ ಸಂಪರ್ಕಿಸಿ 5 ಲಕ್ಷ ರೂ.ಗೆ ಕೊಕೇನ್‌ ಆರ್ಡರ್‌ ಮಾಡಿದ್ದಳು. ಆನ್‌ಲೈನ್‌ನಲ್ಲಿ ಹಣ ಕೂಡ ವರ್ಗಾವಣೆ ಮಾಡಿದ್ದಳು. ಬಳಿಕ ಧಕ್ಕರ್‌ ಆಪ್ತ ಬಾಲಕೃಷ್ಣ ಎಂಬ ವ್ಯಕ್ತಿ ಮೂಲಕ ಡ್ರಗ್ಸ್‌ ಡೀಲ್‌ ಮಾಡಲು ಹೇಳಿದ್ದ. ನಂತರ ಬಾಲಕೃಷ್ಣ ಡ್ರಗ್ಸ್‌ ಕೊಡೋದಕ್ಕಾಗಿ ರಾಯದುರ್ಗಂಗೆ ಬಂದಾಗ ಪೊಲೀಸರು ಇಬ್ಬರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ವೆಂಕಣ್ಣ ಮಾಹಿತಿ ನೀಡಿದ್ದಾರೆ.

ಬಂಧಿತರಿಂದ 10,000 ರೂ. ನಗದು, 53 ಗ್ರಾಂ ಕೊಕೇನ್‌ ಹಾಗೂ 2 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಅಲ್ಲದೇ ಪ್ರಾಥಮಿಕ ವಿಚಾರಣೆಯಲ್ಲಿ ನಮ್ರತಾ ಡ್ರಗ್ಸ್‌ಗಾಗಿ ಸುಮಾರು 70 ಲಕ್ಷ ರೂ. ಖರ್ಚುಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ

Share Information
Continue Reading
Advertisement
1 Comment

1 Comment

    Leave a Reply

    Your email address will not be published. Required fields are marked *