Connect with us

LATEST NEWS

ಮದ್ವೆಯಾಗಿ 3 ತಿಂಗಳಾದ್ರೂ ಫಸ್ಟ್‌ನೈಟ್‌ಗೆ ಒಪ್ಪುತ್ತಿಲ್ಲ ಗಂಡ! ನೊಂದ ಪತ್ನಿ ಮಾಡಿದ್ದೇನು ಗೊತ್ತಾ?

ತ್ತರ ಪ್ರದೇಶ, ಮೇ 20: ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಎನ್ನುತ್ತಾರೆ. ಆದರೆ ಒಲ್ಲೊಂದು ಪ್ರಕರಣದಲ್ಲಿ ನವವಿವಾಹಿತೆಯೊಬ್ಬಳು ತನ್ನ ಗಂಡ ತನ್ನ ಜೊತೆ ಸಂಸಾರ ಮಾಡುತ್ತಿಲ್ಲ ಎಂದು ಆರೋಪಿಸಿ ಗಂಡನ ಮೇಲೆ ದೂರು ದಾಖಲಿಸಿದ್ದಾಳೆ.
ಉತ್ತರ ಪ್ರದೇಶದ ಪಿಲಿಭಿತ್‌ ಜಿಲ್ಲೆಯಲ್ಲಿ ಈ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಇತ್ತೀಚೆಗೆ ವಿವಾಹಿವಾಗಿದ್ದ ವ್ಯಕ್ತಿಯೊಬ್ಬ ಪತ್ನಿಯನ್ನು ಮೂರು ತಿಂಗಳಾದರೂ ಹತ್ತಿರಕ್ಕೆ ಸೇರಿಸುತ್ತಿಲ್ಲ ಎನ್ನಲಾಗಿದ್ದು, ವರದಕ್ಷಿಣೆಯಾಗಿ ಹಣ ತಂದುಕೊಂಡುವವರೆಗೂ ಫರ್ಸ್ಟ್​ನೈಟ್ ಮಾಡಿಕೊಳ್ಳಲ್ಲ ಎಂದು ಪಟ್ಟು ಹಿಡಿದಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
10 ಲಕ್ಷ ಕೊಡುವ ತನಕ ಹೆಂಡತಿ ಮುಟ್ಟಲ್ಲ ಎಂದ ಪತಿ: ಮಹಿಳೆ ನೀಡಿರುವ ದೂರಿನ ಪ್ರಕಾರ, ಆಕೆಯ ಪತಿ ಕಳೆದ ಮೂರು ತಿಂಗಳಿನಿಂದ ಸಂಭೋಗ ನಡೆಸಿಲ್ಲವಂತೆ. ಆಕೆ ಈ ಬಗ್ಗೆ ಕೇಳಿದ್ದಕ್ಕೆ 10 ಲಕ್ಷ ವರದಕ್ಷಿಣೆ ತಂದುಕೊಟ್ಟ ನಂತರ ಮೊದಲ ರಾತ್ರಿ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. ಈ ವಿಷಯವನ್ನು ಆಕೆ ತನ್ನ ಪೋಷಕರಿಗೆ ಹೇಳಿದ್ದು, ಆಕೆಯ ಕುಟುಂಬಸ್ಥರು 5 ಲಕ್ಷ ರೂಪಾಯಿಗಳನ್ನು ಹೊಂದಿಸಿ ತಂದುಕೊಟ್ಟಿದ್ದಾರೆ.ಹನಿಮೂನ್​ನಲ್ಲಿ ಅಶ್ಲೀಲ ವಿಡಿಯೋ ಮಾಡಿ ಬೆದರಿಕೆ: 5 ಲಕ್ಷ ತಂದುಕೊಟ್ಟ ನಂತರ ಸಂತ್ರಸ್ತೆಯನ್ನು ಪತಿ ಹನಿಮೂನ್​ಗೆಂದು ನೈನಿತಾಲ್​ಗೆ ಕರೆದುಕೊಂಡು ಹೋಗಿದ್ದಾನೆ. ಆದರೆ ಈ ಪ್ರವಾಸದಲ್ಲೂ ಆತ ಆಕೆಯಿಂದ ಅಂತರ ಕಾಯ್ದುಕೊಂಡಿದ್ದಾನೆ. ಹನಿಮೂನ್​ ಸಮಯದಲ್ಲಿ ಕಾಲಹರಣ ಮಾಡುತ್ತಲೇ ಪತ್ನಿಯ ಅಶ್ಲೀಲ ವಿಡಿಯೋ ಹಾಗೂ ಫೋಟೋಗಳನ್ನು ತೆಗೆದುಕೊಂಡಿದ್ದಾನೆ. ಈ ಬಗ್ಗೆ ಪ್ರಶ್ನಿಸಿದಾಗ ಪತ್ನಿ ಉಳಿದ ಐದು ಲಕ್ಷ ರೂಪಾಯಿ ತಂದುಕೊಟ್ಟ ನಂತರವೇ ಫರ್ಸ್ಟ್​ನೈಟ್​ ಎಂದು ಹೇಳಿದ್ದಾನೆ.

ಒಂದು ವೇಳೆ ಬಾಕಿ ಇರುವ 5 ಲಕ್ಷ ಹಣವನ್ನು ತಂದುಕೊಡದಿದ್ದರೆ ಈ ಅಶ್ಲೀಲ ವಿಡಿಯೋ, ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಬೇಕಾಗುತ್ತದೆ ಎಂದು ಆರೋಪಿ ಪತ್ನಿಗೆ ಬೆದರಿಕೆ ಹಾಕಿದ್ದಾನೆ. ಇದರಿಂದ ಹೆದರಿದ ಮಹಿಳೆ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾಳೆ.

ಪತಿ ಅಶ್ಲೀಲ ವಿಡಿಯೋ ಮಾಡಿ ಬೆದರಿಕೆ ಹಾಕುತ್ತಿದ್ದರೆ, ಇತ್ತ ಆಕೆಯ ಅತ್ತೆ ಕೂಡ ನಿರಂತರವಾಗಿ ವರದಕ್ಷಿಣೆ ಹಣಕ್ಕಾಗಿ ಕಿರುಕುಳ ನೀಡಿದ್ದಾರೆ. ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾಳೆ. ಈ ದೂರಿನ ಮೇರೆಗೆ ಆರೋಪಿ ಪತಿ ವಿರುದ್ಧ ಹಲ್ಲೆ, ನಿಂದನೆ ಹಾಗೂ ವರದಕ್ಷಿಣೆಗೆ ಕಿರುಕುಳ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್​ ಅಧಿಕಾರಿ ನರೇಶ್ ತ್ಯಾಗಿ ಮಾಹಿತಿ ನೀಡಿದ್ದಾರೆ.

20 ಲಕ್ಷ ಖರ್ಚು ಮಾಡಿ ಅದ್ದೂರಿ ಮದುವೆ: ಫೆಬ್ರವರಿ 6, 2023ರಂದು ಯುವತಿಯ ಮನೆಯವರು ಸುಮಾರು 20 ಲಕ್ಷ ಖರ್ಚು ಮಾಡಿ ಅದ್ದೂರಿಯಾಗಿ ವಿವಾಹ ಮಾಡಿಕೊಟ್ಟಿದ್ದರು. ಜೊತೆಗೆ 15 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಸಂತ್ರಸ್ತೆಯ ಕುಟುಂಬ ಸದಸ್ಯರು ಹೇಳಿದ್ದಾರೆ.

ಅದ್ದೂರಿಯಾಗಿ ಮದುವೆಯಾದ ಬಳಿಕ ಅಳಿಯ ತಮ್ಮ ಮಗಳ ಹತ್ತಿರಕ್ಕೆ ಹೋಗುತ್ತಿಲ್ಲ ಎಂಬ ಮಾಹಿತಿ ತಿಳಿದ ಯುವತಿಯ ಪೋಷಕರು ಅಳಿಯನ ಜೊತೆ ಮಾತನಾಡಿದ್ದಾರೆ. ಏನಾದರೂ ಆರೋಗ್ಯ ಸಮಸ್ಯೆ ಇದ್ದರೆ, ಚಿಕಿತ್ಸೆ ಕೊಡಿಸುವುದಾಗಿಯೂ ಹೇಳಿದ್ದಾರೆ. ಆದರೆ ಆತ ಮಾತ್ರ 10 ಲಕ್ಷ ಹಣಕ ಬೇಕೆಂದು ಹೇಳಿದ್ದಾನೆ. 5 ಲಕ್ಷ ಕೊಟ್ಟರೂ ಆತ ತಮ್ಮ ಮಗಳ ಜೊತೆಗೆ ಲೈಂಗಿಕವಾಗಿ ಸೇರದೆ ಹಿಂಸೆ ಕೊಟ್ಟಿದ್ದಾನೆ. ಇದರಿಂದ ನೊಂದ ಯುವತಿ ಹಾಗೂ ಕುಟುಂಬಸ್ತರು ಪೊಲೀಸರಿಗೆ ದೂರು ನೀಡಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *