KARNATAKA
ಮ್ಯಾಟ್ರಿಮೋನಿ ಹುಡುಗಿ ನಂಬಿ “ಐದು ಲಕ್ಷ” ಕಳೆದುಕೊಂಡ…!

ಹುಬ್ಬಳ್ಳಿ, ಅಕ್ಟೋಬರ್ 20: ನಮ್ಮ ಸಮಾಜದಲ್ಲಿ ದಿನದಿಂದ ದಿನಕ್ಕೆ ಸೈಬರ್ ಕ್ರೈಂಗಳ ಸಂಖ್ಯೆ ಹೆಚ್ಚುತ್ತಲೇ ಇದೆ ಇದರ ಬಗ್ಗೆ ನಮ್ಮ ಪೊಲೀಸ್ ಇಲಾಖೆ ಸಾರ್ವಜನಿಕರಲ್ಲಿ ಸಾಕಷ್ಟು ಅರಿವನ್ನು ಮೂಡಿಸುವ ಕಾರ್ಯಕ್ರಮ ಮಾಡಿ ಜನರಿಗೆ ತಿಳುವಳಿಕೆ ಹೇಳ್ತಿಲ್ಲ ಹೀಗಾಗಿ ಸೈಬರ್ ಕ್ರೈಂ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಸಾಗುತ್ತಿದೆ.
ಹುಬ್ಬಳ್ಳಿಯ ನವನಗರದ ನಿವಾಸಿ ಒಬ್ಬರು ಕೂಡಾ ಇದೆ ರೀತಿಯಾದ ಮ್ಯಾಟ್ರಿಮೋನಿ ಹೆಸರಿನಲ್ಲಿ ಬರೋಬ್ಬರಿ ಐದು ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಕಳೆದುಕೊಂಡು ಇದೀಗ ಸೈಬರ್ ಕ್ರೈಂ ಪೊಲೀಸ್ ಮೆಟ್ಟಿಲೇರಿದ್ದಾರೆ.ನವನಗರದ ನಿವಾಸಿಯೊಬ್ಬರಿಗೆ ಮ್ಯಾಟ್ರಿಮೋನಿ ಯಲ್ಲಿ ಪರಿಚಯವಾದ ಲಂಡನ್ ಮೂಲದ ಮಹಿಳೆಯೊಬ್ಬಳು ಚಾಟಿಂಗ್,ಕಾಲಿಂಗ್ ,ಮಾಡುತ್ತಾ ನಿಮಗೆ ದುಬಾರಿ ಬೆಲೆಯ ಗಿಫ್ಟ್ ಅನ್ನು ಕಳಿಸಿದ್ದೇನೆ ಅದನ್ನು ತೆಗೆದುಕೊಳ್ಳಿ ಎಂದು ಹೇಳಿದ್ದಾಳೆ,ಹಾಗೆಯೇ ಮಹಿಳೆ ಹೇಳಿದ ಒಂದು ವಾರದ ಮೇಲೆ ನವನಗರದ ನಿವಾಸಿಗೆ ಕರೆ ಮಾಡಿದ ವ್ಯಕ್ತಿಯೊಬ್ಬ ನಿಮಗೆ ಉಡುಗೊರೆ ಬಂದಿದೆ ಇಷ್ಟು ದುಡ್ಡು ಕಟ್ಟಿ ಬಿಡಿಸಿಕೊಳ್ಳಿ ಎಂದು ಹೇಳಿದ್ದಾರೆ.

ಅದೇರೀತಿಯಾಗಿ ನವನಗರದ ಆಸಾಮಿ ಬರೋಬ್ಬರಿ ಐದು ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಸೈಬರ್ ಕಳ್ಳರ ಕಿಸೆಗೆ ಹಾಕಿ ಇದೀಗ ಮ್ಯಾಟ್ರಿಮೋನಿ ಹುಡುಗಿಯು ಇಲ್ಲ ಕಿಸೆದಾಗ ರೋಕ್ಕು ಇಲ್ಲಾ ಅಂತಾ ಹೇಳಿ ಹುಬ್ಬಳ್ಳಿಯ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಮೆಟ್ಟಿಲನ್ನು ಏರಿದ್ದಾರೆ.