Connect with us

KARNATAKA

ಹುಬ್ಬಳ್ಳಿ : ಭೀಮಾ ನದಿ ಸೇತುವೆ ಸಮೀಪ ಹಳಿ ತಪ್ಪಿದ ರೈಲು, 17 ರೈಲುಗಳು ದಿಢೀರ್‌ ರದ್ದು..!

ಹುಬ್ಬಳ್ಳಿ : ಗದಗ ಸೊಲ್ಲಾಪುರ ರೈಲು ಮಾರ್ಗದ ಭೀಮಾ ನದಿ ಸೇತುವೆ ಸಮೀಪ ರೈಲು ಇಂಜಿನ್‌ ಮಂಗಳವಾರ ತಡರಾತ್ರಿ ಹಳಿ ತಪ್ಪಿದ್ದು,ಪರಿಹಾರ  ಕಾರ್ಯ ಭರದಿಂದ ಸಾಗಿದೆ. ಈ ಮಧ್ಯೆ ಗೋಲ್‌ಗುಂಬಜ್‌ ಎಕ್ಸ್‌ಪ್ರೆಸ್‌ ಸೇರಿ 17 ರೈಲುಗಳ ಸಂಚಾರ ರದ್ದು ಮಾ ಡಿ ರೈಲ್ವೇ ಇಲಾಖೆ ಆದೇಶಿಸಿದೆ.

ನೈರುತ್ಯ ರೈಲ್ವೆ ಇಲಾಖೆ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದು ಕರ್ನಾಟಕ ಮಹಾರಾಷ್ಟ್ರ ಗಡಿಯ ನಡುವೆ ಈ ಘಟನೆ ಸಂಭವಿಸಿದೆ. ಮಂಗಳವಾರ ತಡರಾತ್ರಿ 1.30 ಕ್ಕೆ ಇಂಜಿನ್‌ ರೈಲು ಹುಬ್ಬಳ್ಳಿ – ಸೊಲ್ಲಾಪುರ ಮಾರ್ಗದ ಗದಗ – ಹೊಟಗಿ ವಿಭಾಗದ ಲಚ್ಯಾನ್ ಮತ್ತು ತಡವಾಲ್ ಎಂಬ ಸ್ಟೇಷನ್‌ಗಳನ ನಡುವೆ ಭೀಮಾ ನದಿಯ ಸೇತುವೆ ಸಮೀಪ ಹಳಿತಪ್ಪಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಘಟನೆ ಹಿನ್ನೆಲೆ ಟ್ರ್ಯಾಕ್‌ ರಿಪೇರಿ ಕಾರ್ಯ ಆರಂಭವಾಗಿದ್ದು, ಮುಂದಿನ ಕೆಲ ದಿನಗಳ ಕಾಲ ಮುಂಜಾಗ್ರತಾ ಕ್ರಮವಾಗಿ 17 ರೈಲುಗಳ ರದ್ದು, ಭಾಗಶಃ ರದ್ದು, ಕೆಲ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಪ್ರಯಾಣಿಕರು ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ. ಈಗಾಗಲೇ ಆ ಮಾರ್ಗದಲ್ಲಿ ಸಂಚಾರ ಮಾಡುತ್ತಿದ್ದ ರೈಲುಗಳನ್ನು ಸಮೀಪದ ನಿಲ್ದಾಣಗಳಲ್ಲಿಲೇ ನಿಲ್ಲಿಸಲಾಗಿದ್ದು, ಪ್ರಯಾಣಿಕರಿಗೆ ಬಸ್‌ ಮೂಲಕ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

ಯಾವೆಲ್ಲಾ ರೈಲು ರದ್ದು?

  • ರೈಲು ಸಂಖ್ಯೆ 11305 ಸೋಲಾಪುರ – ಹೊಸಪೇಟೆ ಎಕ್ಸ್‌ಪ್ರೆಸ್‌ ಸೆಪ್ಟೆಂಬರ್‌ 25 ರಂದು ಪ್ರಾರಂಭವಾಗುವ ಪ್ರಯಾಣವನ್ನು ರದ್ದುಗೊಳಿಸಲಾಗಿದೆ.
  • ರೈಲು ಸಂಖ್ಯೆ 11306 ಹೊಸಪೇಟೆ – ಸೊಲ್ಲಾಪುರ ಎಕ್ಸ್‌ಪ್ರೆಸ್‌ ಸೆಪ್ಟೆಂಬರ್‌ 26 ರಂದು ಪ್ರಾರಂಭವಾಗುವ ಪ್ರಯಾಣವನ್ನು ರದ್ದುಗೊಳಿಸಲಾಗಿದೆ.
  • ರೈಲು ಸಂಖ್ಯೆ 07664 ರಾಯಚೂರು – ವಿಜಯಪುರ ಎಕ್ಸ್‌ಪ್ರೆಸ್‌ ಸೆಪ್ಟೆಂಬರ್‌ 25 ರಂದು ಪ್ರಾರಂಭವಾಗುವ ಪ್ರಯಾಣವನ್ನು ರದ್ದುಗೊಳಿಸಲಾಗಿದೆ.
  • ರೈಲು ಸಂಖ್ಯೆ 17029 ವಿಜಯಪುರ – ಹೈದರಾಬಾದ್ ಎಕ್ಸ್‌ಪ್ರೆಸ್‌ ಸೆಪ್ಟೆಂಬರ್‌ 25 ರಂದು ಪ್ರಾರಂಭವಾಗುವ ಪ್ರಯಾಣವನ್ನು ರದ್ದುಗೊಳಿಸಲಾಗಿದೆ.
  • ರೈಲು ಸಂಖ್ಯೆ 07331 ಸೋಲಾಪುರ – ಹುಬ್ಬಳ್ಳಿ ಎಕ್ಸ್‌ಪ್ರೆಸ್‌ ಸೆಪ್ಟೆಂಬರ್‌ 25 ರಂದು ಪ್ರಾರಂಭವಾಗುವ ಪ್ರಯಾಣವನ್ನು ರದ್ದುಗೊಳಿಸಲಾಗಿದೆ.

 

ಯಾವೆಲ್ಲಾ ರೈಲು ಭಾಗಶಃ ರದ್ದು?

  • ರೈಲು ಸಂಖ್ಯೆ 07322 ಧಾರವಾಡ – ಸೊಲ್ಲಾಪುರ ಎಕ್ಸ್‌ಪ್ರೆಸ್‌ ಸೆಪ್ಟೆಂಬರ್‌ 24 ರಂದು ಪ್ರಾರಂಭವಾದ ಪ್ರಯಾಣ ವಿಜಯಪುರ ಮತ್ತು ಸೊಲ್ಲಾಪುರ ನಡುವೆ ಭಾಗಶಃ ರದ್ದುಗೊಂಡಿದೆ.
  • ರೈಲು ಸಂಖ್ಯೆ 11306 ಹೊಸಪೇಟೆ – ವಿಜಯಪುರ ಎಕ್ಸ್‌ಪ್ರೆಸ್‌ ಸೆಪ್ಟೆಂಬರ್‌ 25 ರಂದು ಪ್ರಾರಂಭವಾದ ಪ್ರಯಾಣ ವಿಜಯಪುರ ಮತ್ತು ಸೊಲ್ಲಾಪುರ ನಡುವೆ ಭಾಗಶಃ ರದ್ದುಗೊಂಡಿದೆ.
  • ರೈಲು ಸಂಖ್ಯೆ 17030 ಹೈದರಾಬಾದ್ – ವಿಜಯಪುರ ಎಕ್ಸ್‌ಪ್ರೆಸ್‌ ಸೆಪ್ಟೆಂಬರ್‌ 24 ರಂದು ಪ್ರಾರಂಭವಾದ ಪ್ರಯಾಣವು ಸೋಲಾಪುರ ಮತ್ತು ವಿಜಯಪುರ ನಡುವೆ ಭಾಗಶಃ ರದ್ದುಗೊಂಡಿದೆ.
  • ರೈಲು ಸಂಖ್ಯೆ 07321 ಸೋಲಾಪುರ – ಧಾರವಾಡ ಎಕ್ಸ್‌ಪ್ರೆಸ್‌ ಸೆಪ್ಟೆಂಬರ್‌ 25 ರಂದು ಪ್ರಾರಂಭವಾದ ಪ್ರಯಾಣವು ಸೊಲ್ಲಾಪುರ ಮತ್ತು ವಿಜಯಪುರ ನಡುವೆ ಭಾಗಶಃ ರದ್ದಾಗಿದೆ.
  • ರೈಲು ಸಂಖ್ಯೆ 11139 ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ – ಹೊಸಪೇಟೆ ಎಕ್ಸ್‌ಪ್ರೆಸ್‌ ಸೆಪ್ಟೆಂಬರ್‌ 24 ರಂದು ಆರಂಭವಾದ ಪ್ರಯಾಣವನ್ನು ಸೋಲಾಪುರ ಮತ್ತು ಹೊಸಪೇಟೆ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ.
  • ರೈಲು ಸಂಖ್ಯೆ 11140 ಹೊಸಪೇಟೆ – ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್‌ ಎಕ್ಸ್‌ಪ್ರೆಸ್‌ ಸೆಪ್ಟೆಂಬರ್‌ 25 ರಂದು ಪ್ರಾರಂಭವಾಗುವ ಪ್ರಯಾಣವು ಹೊಸಪೇಟೆ ಮತ್ತು ಸೊಲ್ಲಾಪುರ ನಡುವೆ ಭಾಗಶಃ ರದ್ದುಗೊಳ್ಳುತ್ತದೆ.
  • ರೈಲು ಸಂಖ್ಯೆ 17307 ಮೈಸೂರು – ಬಾಗಲಕೋಟ ಎಕ್ಸ್‌ಪ್ರೆಸ್‌ ಸೆಪ್ಟೆಂಬರ್‌ 24 ರಂದು ಪ್ರಾರಂಭವಾದ ಪ್ರಯಾಣವನ್ನು ಸೋಲಾಪುರ ಮತ್ತು ಬಾಗಲಕೋಟೆ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ.
  • ರೈಲು ಸಂಖ್ಯೆ 17308 ಬಾಗಲಕೋಟೆ – ಮೈಸೂರು ಎಕ್ಸ್‌ಪ್ರೆಸ್‌ ಸೆಪ್ಟೆಂಬರ್‌ 25 ರಂದು ಪ್ರಾರಂಭವಾಗುವ ಪ್ರಯಾಣವನ್ನು ಬಾಗಲಕೋಟೆ ಮತ್ತು ಸೋಲಾಪುರ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ.
  • ರೈಲು ಸಂಖ್ಯೆ 16535 ಮೈಸೂರು – ಪಂಢರಪುರ ಗೋಲ್‌ಗುಂಬಜ್‌ ಎಕ್ಸ್‌ಪ್ರೆಸ್‌ ಸೆಪ್ಟೆಂಬರ್‌ 24 ಮತ್ತು 25 ರಂದು ಪ್ರಾರಂಭವಾದ ಪ್ರಯಾಣವನ್ನು ವಿಜಯಪುರ ಮತ್ತು ಪಂಢರಪುರ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ.
  • ರೈಲು ಸಂಖ್ಯೆ. 16536 ಪಂಢರಪುರ – ಮೈಸೂರು ಗೋಲ್‌ಗುಂಬಜ್‌ ಎಕ್ಸ್‌ಪ್ರೆಸ್‌ 25 ಮತ್ತು 26 ರಂದು ಪ್ರಾರಂಭವಾಗುವ ಪ್ರಯಾಣವನ್ನು ಪಂಢರಪುರ ಮತ್ತು ವಿಜಯಪುರ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ.
  • ರೈಲು ಸಂಖ್ಯೆ 07663 ವಿಜಯಪುರ- ರಾಯಚೂರು ಎಕ್ಸ್‌ಪ್ರೆಸ್‌ ಸೆಪ್ಟೆಂಬರ್‌ 25 ರಂದು ಪ್ರಾರಂಭವಾಗುವ ಪ್ರಯಾಣವು ವಿಜಯಪುರ ಮತ್ತು ಸೊಲ್ಲಾಪುರದ ನಡುವೆ ಭಾಗಶಃ ರದ್ದಾಗಿದೆ.
Share Information
Continue Reading
Advertisement
Click to comment

Leave a Reply

Your email address will not be published. Required fields are marked *