JYOTHISHYA
ಶ್ರಾವಣ ಮಾಸದಲ್ಲಿ ಈ ಒಂದು ಲಕ್ಷ್ಮಿ ಪೂಜೆ ಹೇಗೆ ಮಾಡುವುದು…?
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490
ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490
ಚಾತುರ್ಮಾಸ ದ ಈ ಕಾಲ “ಲಕ್ಷ್ಮೀ ಪೂಜೆ” ಗೆ ಸಕಾಲ ಈ ಪೂಜೆಯನ್ನು ( ವ್ರತವನ್ನು) ಶುಕ್ರವಾರ ಅಥವಾ ಹುಣ್ಣಿಮೆ ; ಅಮಾವಾಸ್ಯೆ ಮಂಗಳವಾರ ಮಾಡುತ್ತಾರೆ ವ್ರತ ಮಾಡುವ ಪದ್ಧತಿ ಇಲ್ಲದಿದ್ದರೆ ಯಾವುದೇ ಶುಕ್ರವಾರ ಲಕ್ಷ್ಮೀ ದೇವಿಗೆ ಪೂಜೆ ಮಾಡಬಹುದು..
ವಿಧಾನ-:
ಸಾಮನ್ಯವಾಗಿ ಎಲ್ಲ ಪೂಜೆಗಳಿಗೂ ಉಪಯೋಗಿಸುವ ಸಾಮಗ್ರಿಗಳು:
ರಂಗೋಲಿ, ಮಣೆ / ಮಂಟಪ
ಲಕ್ಷ್ಮೀ ವಿಗ್ರಹ ಅಥವಾ ಕಲಶ (ದೇವರ ಪಟ)
ದೀಪ, , ತುಪ್ಪ, ಎಣ್ಣೆ,
ದೀಪಕ್ಕೆ ಹಾಕುವ ಬತ್ತಿ
ಘಂಟೆ, ಪಂಚಪಾತ್ರೆ,
ಉದ್ದರಣೆ, ಅರ್ಘ್ಯ ಪಾತ್ರೆ, ನೀರು
ಅರಿಶಿನ, ಕುಂಕುಮ,
ಮಂತ್ರಾಕ್ಷತೆ,ಮಾವಿನ ಎಲೆ
ಶ್ರೀಗಂಧ, ಊದಿನ ಕಡ್ಡಿ
ರವಿಕೆ ಬಟ್ಟೆ,
ಹೂವು, ಪತ್ರೆ, ಗೆಜ್ಜೆ ವಸ್ತ್ರ ಪಂಚಾಮೃತ – ಹಾಲು,
ಮೊಸರು, ಸಕ್ಕರೆ, ತುಪ್ಪ, ಜೇನುತುಪ್ಪ
ವೀಳ್ಯದ ಎಲೆ, ಅಡಿಕೆ,
ಹಣ್ಣು , ತೆಂಗಿನಕಾಯಿ
ನೈವೇದ್ಯ – ಹಣ್ಣು ಕಾಯಿ ಫಲವಸ್ತು
(ಪಾಯಸ,ಹುಗ್ಗಿ, ಕೋಸಂಬರಿ, ನೀರಲ್ಲಿ ನೆನೆ ಹಾಕಿದ ಕಡಲೆ ), ಇತ್ಯಾದಿ ಯೋಗ್ಯತಾನುಸಾರ
ಕರ್ಪೂರ,
ಮಂಗಳಾರತಿ ಬತ್ತಿ
ಆರತಿ ತಟ್ಟೆ,
ಹೂಬತ್ತಿ,
ಇತ್ಯಾದಿ ಇವುಗಳೊಂದಿಗೆ ಇನ್ನು ಹಲವಾರು ವಸ್ತುಗಳ ಬಳಕೆ ಮಾಡಬಹುದು (ಮುಖ್ಯವಾಗಿ ಅಲಂಕಾರ ಮಾಡುವುದಕ್ಕೆ ಮನೆಯಲ್ಲಿನ ಹೂ ಮತ್ತು ಪತ್ರೆ ಅತ್ಯಂತ ಶ್ರೇಷ್ಟ.)
ಅವರವರ ಯೋಗ್ಯತೆ ಗೆ ಅನುಸಾರ ಇದು ಪ್ರತಿಯೊಬ್ಬರ ಆಸಕ್ತಿ ಮತ್ತು ಅಭಿರುಚಿ ಮೇಲೆ ಅವಲಂಭಿಸಿದೆ.
ಬೆಳಿಗ್ಗೆ ಎದ್ದು ಮಂಗಳ (ತಲೆ) ಸ್ನಾನ ಮಾಡಬೇಕು.
2)ವ್ರತ ಮಾಡುವವರು ಪೂಜೆ ಮಾಡುವ ಸ್ಥಳವನ್ನು ಸ್ವಚ್ಚಗೊಳಿಸಿ, ಬಾಳೆ ಕಂದು, ಮಾವಿನ ಎಲೆಗಳಿಂದ ಸಿಂಗರಿಸಿ. ಅಷ್ಟದಳ ಪದ್ಮದ ರಂಗವಲ್ಲಿ ಹಾಕಬೇಕು. ಇದರ ಮೇಲೆ ಕಲಶ ಸ್ಥಾಪಿಸಬೇಕು.
3)ಬಾವಿಯಿಂದ ಒಂದು ಕಲಶದಲ್ಲಿ ನೀರು ಹಾಕಿ, ಜೊತೆಗೆ ಅರಿಶಿನ ಕುಂಕುಮ, ಬೆಳ್ಳಿ ನಾಣ್ಯ / ಯಾವುದೇ ನಾಣ್ಯ, ಹೂ ಹಾಕಿ,ಕಳಶದ ಬಾಯಿಗೆ ಮಾವಿನ ಎಲೆಗಳನ್ನು ಇಡಬೇಕು. .ಅದರ ಮೇಲೆ ಅರಿಶಿನ ಕುಂಕುಮ ಸವರಿದ ತೆಂಗಿನಕಾಯಿ ಇಟ್ಟು, (ಇದರ ಮೇಲೆ ಲಕ್ಷ್ಮಿ ದೇವಿಯ ಬೆಳ್ಳಿಯ ಮುಖವಾಡ ಇದ್ದರೆ ಅದನ್ನುಈ ತೆಂಗಿನಕಾಯಿಗೆ ಜೋಡಿಸಬಹುದು) ಈ ಕಳಶವನ್ನು ಅಕ್ಕಿ ಹರಡಿರುವ ತಟ್ಟೆಯ ಮೇಲೆ ಇಡಬೇಕು. ಈ ತಟ್ಟೆಯನ್ನು ಅಷ್ಟದಳ ರಂಗೋಲಿಯ ಮೇಲೆ ಇಡಬೇಕು. ಈ ಕಲಶಕ್ಕೆ ಹೊಸ ರವಿಕೆ ಬಟ್ಟೆ ಅಥವಾ ಸೀರೆ ಉಡಿಸಿ , ಒಡವೆ ಹಾಕಿ ಅಲಂಕಾರ ಮಾಡಬಹುದು. ಈ ಕಲಶಕ್ಕೆ ಶ್ರೀ ಲಕ್ಷ್ಮಿಯನ್ನು ಆವಾಹನೆ ಮಾಡಿ,
ಕಲಶವನ್ನು ಪೂಜೆ ಮಾಡಬೇಕು.
4)ಪೂಜಾ ವಿಧಾನ
ಪೂಜಾ ವಿಧಾನವನ್ನು ಸರಳವಾಗಿ ವಿವರಿಸಬಹುದು. ದೇವರ ಪೂಜೆಯನ್ನು ಅತಿಥಿ ಸತ್ಕಾರಕ್ಕೆ ಹೋಲಿಸಿಕೊಳ್ಳಿ . ದೇವರು ನಿಮ್ಮ ಮನೆಗೆ ಬಂದಿರುವ ಅತಿಥಿ. ಅತಿಥಿಗಳಿಗೆ ಹೇಗೆ ಉಪಚಾರ ಮಾಡುತ್ತಿರೋ ,
ಹಾಗೆಯೆ ದೇವರಿಗೆ ಪೂಜೆ ರೂಪದಲ್ಲಿ ಉಪಚಾರ ಮಾಡಬೇಕು ಅಷ್ಟೆ. ಮೊದಲು ಸಂಕಲ್ಪ ಮಾಡಿ, ನಂತರ ಧ್ಯಾನ ಮಾಡಿ ದೇವರನ್ನು ಆಹ್ವಾನ ಮಾಡುವುದು. ಸಂಕಲ್ಪ – ಅಂದರೆ ನಿರ್ಧಾರ, ನಿರ್ಣಯ, ಚಿತ್ತ. ಈ ದಿನ ಈ ಪೂಜೆ ಮಾಡುತ್ತ ಇದ್ದೀನಿ ಅಂತ ನಿರ್ಧಾರ ಮಾಡುವುದೇ ಸಂಕಲ್ಪ. ಸಂಕಲ್ಪ ಮಾಡುವಾಗ ಆ
ದಿನದ ಸಂವತ್ಸರ, ಋತು , ಮಾಸ, ಪಕ್ಷ, ವಾರ, ತಿಥಿ, ನಕ್ಷತ್ರವನ್ನು ಹೆಸರಿಸಬಹುದು
ವರ್ತಮಾನೇ ವ್ಯಾವಹಾರಿಕೇ ಕ್ರೋಧಿನಾಮ
ಸಂವತ್ಸರೇ, ದಕ್ಷಿಣಾಯನೇ ,…
ಗ್ರೀಷ್ಮ ಋತೌ , ಆಷಾಢ ಮಾಸೇ ,ಶುಕ್ಲ (ಕೃಷ್ಣ)ಪಕ್ಷೇ , …
…..ತಿಥಿಯಾಂ ,ಶುಕ್ರ(ಭೃಗು )ವಾಸರ ಯುಕ್ತಾಯಾಂ , ಶುಭ
ನಕ್ಷತ್ರ, ಶುಭಯೋಗ ಶುಭ ಕರಣ ಏವಂ ಗುಣ
ವಿಶೇಷಣ ವಿಶಿಷ್ಟಾಯಾಂ ಶುಭತಿಥೌ ,
ಅಸ್ಮಾಕಂ ಸಹಕುಟುಂಬಾನಾಂ ಕ್ಷೇಮಸ್ಥೈರ್ಯ
ವಿಜಯ ವೀರ್ಯ ಅಭಯ ಆಯುರಾರೋಗ್ಯ
ಐಶ್ವರ್ಯಾಭಿವೃದ್ಧ್ಯರ್ಥಂ ಸಮಸ್ತ
ದುರಿತೋಪಶಾಂತ್ಯರ್ಥಂ ಸಮಸ್ತ
ಸನ್ಮಂಗಳಾರ್ಥಂ ಸಮಸ್ತಾಭ್ಯುದಯಾರ್ಥಂ ಚ
ಧರ್ಮಾರ್ಥ ಕಾಮಮೋಕ್ಷ ಚತುರ್ವಿಧ ಫಲ
ಪುರುಷಾರ್ಥ ಸಿಧ್ಧ್ಯರ್ಥಂ ಯಾವತ್ ಜೀವನ ಸೌಮಾಂಗಲ್ಯ ಪ್ರಾಪ್ಯರ್ಥಂ ಶ್ರೀ ….ಮಹಾಲಕ್ಷ್ಮೀ ಪ್ರೀತ್ಯರ್ಥಂ ಯಾಥಾ ಶಕ್ತ್ಯಾ
ಧ್ಯಾನಾವಾಹನಾದಿ ಷೋಡಶೋಪಚಾರ
ಪೂಜಾಂ ಅಹಂ ಕರಿಷ್ಯೇ.
ಧ್ಯಾನ
||ಪದ್ಮಾಸನೆ ಪದ್ಮಕರೇ ಸರ್ವ ಲೋಕೈಕ
ಪೂಜಿತೆ|
ನಾರಾಯಣ ಪ್ರಿಯೇದೇವಿ ಸುಪ್ರೀತಾ ಭವ
ಸರ್ವದಾ”…||
(ನೀವು ಪೂಜೆ ಮಾಡುತ್ತಿರುವ ದೇವರನ್ನು ಭಕ್ತಿಯಿಂದ ಧ್ಯಾನ ಮಾಡಿ ಆವಾಹನೆ ಮಾಡುವುದು. ಸಾಮಾನ್ಯವಾಗಿ
ಷೋಡಶೋಪಚಾರದಿಂದ ಪೂಜೆ ಅಂತ ನೀವು ಕೇಳಿರಬಹುದು. ಷೋಡಶ
ಅಂದರೆ 16.
ಹದಿನಾರು ಬಗೆಯಿಂದ ದೇವರಿಗೆ ಉಪಚಾರ ಮಾಡಿ
ಎಂದರ್ಥ. ಇವುಗಳ ವಿವರ ಕೆಳಗಿದೆ: ಇಲ್ಲಿ ಅಕ್ಷತೆ ಹಾಕಬೇಕು (ಸ್ತ್ರೀ ಸೂಕ್ತ ತಿಳಿದವರು ಹೇಳುವುದು)
1.ಆವಾಹನೆ – (ಅಂದರೆ ಆಹ್ವಾನ. ದೇವರನ್ನು ನಿಮ್ಮ ಮನೆಗೆ ಅಥವಾ ಪೂಜೆ ಮಾಡುತ್ತಿರುವ ಜಾಗಕ್ಕೆ ಆಹ್ವಾನ ಮಾಡುವುದು.)ಮಹಾಲಕ್ಷ್ಮೀಯೇ ನಮಃ ಆವಾಹಯಾಮಿ ಆವಾಹನಂ ಸಮರ್ಪಯಾಮಿ
2.ಆಸನ – ಅಂದರೆ ಕುಳಿತುಕೊಳ್ಳುವ ಜಾಗ . ದೇವರ ಪ್ರತಿಮೆಯನ್ನು ಇಡುವ ವೇದಿಕೆ/ ಮಣೆ ಮೇಲೆ ಅಕ್ಷತೆ ಹಾಕುವುದು.ಮಹಾಲಕ್ಷ್ಮೀಯೇ ನಮಃ ಆಸನಂ ಸಮರ್ಪಯಾಮಿ
3.ಪಾದ್ಯ – ಕಾಲು ತೊಳೆದುಕೊಳ್ಳುವುದಕ್ಕೆ ನೀರು ಕೊಡುವುದು.ಮಹಾಲಕ್ಷ್ಮೀಯೇ ನಮಃ ಪಾದ್ಯಂ ಸಮರ್ಪಯಾಮಿ (ಹರಿವಾಣದಲ್ಲಿ ನೀರು ಬಿಡುವುದು)
4.ಅರ್ಘ್ಯ – ಕೈ ತೊಳೆದುಕೊಳ್ಳುವುದಕ್ಕೆ ನೀರು ಕೊಡುವುದು.ವರಮಹಾಲಕ್ಷ್ಮೀಯೇ ನಮಃ ಅರ್ಘ್ಯಂ ಸಮರ್ಪಯಾಮಿ(ಹರಿವಾಣದಲ್ಲಿ ನೀರು ಬಿಡುವುದು)
5.ಆಚಮನ – ಕುಡಿಯುವುದಕ್ಕೆ ನೀರು ಕೊಡುವುದು.ಮಹಾಲಕ್ಷ್ಮೀಯೇ ನಮಃ ಆಚಮನಂ ಸಮರ್ಪಯಾಮಿ
6.ಸ್ನಾನ – ಶುದ್ಧೋದಕ (ನೀರು) ಮತ್ತು ಪಂಚಾಮೃತದಿಂದ ಸ್ನಾನ ಮಹಾಲಕ್ಷ್ಮೀಯೇ ನಮಃ ಸ್ನಾನಂ ಸಮರ್ಪಯಾಮಿ
7.ವಸ್ತ್ರ – ಧರಿಸಲು ಉಡುಪು ಕೊಡುವುದು . ಗೆಜ್ಜೆವಸ್ತ್ರಗಳನ್ನೂ ದೇವರಿಗೆ ಇಡುವುದು . ಜೊತೆಗೆ
( ಜನಿವಾರ), ಆಭರಣವನ್ನು (ಬಳೆ- ಬಿಚ್ಚೋಲೆ )ಸಮರ್ಪಿಸುವುದು.ಮಹಾಲಕ್ಷ್ಮೀಯೇ ನಮಃ ವಸ್ತ್ರಂ ಸಮರ್ಪಯಾಮಿ
8.ಹರಿದ್ರ, ಕುಂಕುಮ, ಗಂಧ, ಅಕ್ಷತ – ಅರಿಶಿನ , ಕುಂಕುಮ, ಶ್ರೀಗಂಧ, ಮಂತ್ರಾಕ್ಷತೆಯನ್ನು ದೇವರಿಗೆ ಅರ್ಪಿಸುವುದು.ಮಹಾಲಕ್ಷ್ಮೀಯೇ ನಮಃ.ಹರಿದ್ರ, ಕುಂಕುಮ, ಗಂಧ, ಅಕ್ಷತಾಂ – ಸಮರ್ಪಯಾಮಿ
9.ಪುಷ್ಪ ಮಾಲ – ಹೂವು, ಪತ್ರೆಗಳಿಂದ ದೇವರಿಗೆ ಅಲಂಕಾರ ಮಾಡುವುದು.ಮಹಾಲಕ್ಷ್ಮೀಯೇ ನಮಃ ಪುಷ್ಪಂ ಸಮರ್ಪಯಾಮಿ
10. ಅರ್ಚನೆ/ಅಷ್ಟೋತ್ತರ – ನೂರೆಂಟು ನಾಮಗಳಿಂದ ದೇವರನ್ನು ಸ್ಮರಣೆ ಮಾಡುವುದು.(ಪೋಟೋದಲ್ಲಿ ಕೊಟ್ಟಿದೆ.) ನಮಃ ಅಷ್ಟೋತ್ತರ ಶತ ನಾಮ ಪೂಜಾಂ ಸಮರ್ಪಯಾಮಿ
11.ಧೂಪ – ಪರಿಮಳಯುಕ್ತವಾದ ಧೂಪವನ್ನು ಅರ್ಪಿಸುವುದು.ಮಹಾಲಕ್ಷ್ಮೀಯೇ ನಮಃ ಧೂಪಂ ಸಮರ್ಪಯಾಮಿ
12.ದೀಪ – ದೀಪ ಸಮರ್ಪಣೆ ಮಾಡುವುದು. ಮಹಾಲಕ್ಷ್ಮೀಯೇ ನಮಃ ದೀಪಂ ಸಮರ್ಪಯಾಮಿ
13.ನೈವೇದ್ಯ, ತಾಂಬೂಲ – ದೇವರಿಗೆ ವಿಧ ವಿಧ ಭಕ್ಷ್ಯಗಳ ಭೋಜನ ಅರ್ಪಿಸುವುದು. ವೀಳೆಯ, ಅಡಿಕೆ, ತೆಂಗಿನಕಾಯಿ ತಾಂಬೂಲ ಕೊಡುವುದು.ಮಹಾಲಕ್ಷ್ಮೀಯೇ ನಮಃ ನೈವೇದ್ಯಂ ಸಮರ್ಪಯಾಮಿ
14. ನೀರಾಜನ – ಕರ್ಪುರದಿಂದ ಮಂಗಳಾರತಿ ಮಾಡುವುದು.ಮಹಾಲಕ್ಷ್ಮೀಯೇ ನಮಃ ನೀರಾಜನಂ ಸಮರ್ಪಯಾಮಿ
15. ನಮಸ್ಕಾರ – ಪ್ರದಕ್ಷಿಣೆ ಮಾಡಿ ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡುವುದು.ಮಹಾಲಕ್ಷ್ಮೀಯೇ ನಮಃ ನಮಸ್ಕಾರಂ ಸಮರ್ಪಯಾಮಿ
16. ಪ್ರಾರ್ಥನೆ – ನಿಮ್ಮ ಇಷ್ಟಗಳನ್ನು ನಡೆಸಿ
ಕೊಡು ಎಂದು ದೇವರಲ್ಲಿ ಅರಿಕೆ / ಪ್ರಾರ್ಥನೆ
ಮಾಡುವುದು.
||ಸರ್ವ ಮಂಗಳ ಮಾಂಗಲ್ಯೆ ಶಿವೆ ಸರ್ವಾರ್ಥ ಸಾಧಿಕೆ |
ಶರಣ್ಯೇ ತ್ರಯಂಬಕೆ ಗೌರಿ ನಾರಾಯಣೀ ನಮೋಸ್ತುತೆ||…………. ಮಹಾಲಕ್ಷ್ಮೀಯೇ ನಮಃ ಪ್ರಾರ್ಥನಾಂ ಸಮರ್ಪಯಾಮಿ
ಪೂಜೆಯ ನಂತರ ದೇವರು ಅನುಗ್ರಹಿಸಿರುವ ಅರಿಶಿನ, ಕುಂಕುಮ, ನೈವೇದ್ಯವನ್ನು ಪ್ರಸಾದ ರೂಪವಾಗಿ ಸ್ವೀಕಾರ ಮಾಡುವುದು.
ಹೀಗೆ ಕ್ರಮವಾಗಿ ಪೂಜೆ ಮಾಡಿ.
ಶ್ರೀ ಲಕ್ಷ್ಮೀ ಅಷ್ಟೋತ್ತರ ಶತ ನಾಮಾವಳಿ
ಓಂ ಪ್ರಕೃತ್ಯೈ ನಮಃ
ಓಂ ವಿಕೃತ್ಯೈ ನಮಃ
ಓಂ ವಿದ್ಯಾಯೈ ನಮಃ
ಓಂ ಸರ್ವಭೂತಹಿತಪ್ರದಾಯೈ ನಮಃ
ಓಂ ಶ್ರದ್ಧಾಯೈ ನಮಃ
ಓಂ ವಿಭೂತ್ಯೈ ನಮಃ
ಓಂ ಸುರಭ್ಯೈ ನಮಃ
ಓಂ ಪರಮಾತ್ಮಿಕಾಯೈ ನಮಃ
ಓಂ ವಾಚೇ ನಮಃ
ಓಂ ಪದ್ಮಾಲಯಾಯೈ ನಮಃ (10)
ಓಂ ಪದ್ಮಾಯೈ ನಮಃ
ಓಂ ಶುಚ್ಯೈ ನಮಃ
ಓಂ ಸ್ವಾಹಾಯೈ ನಮಃ
ಓಂ ಸ್ವಧಾಯೈ ನಮಃ
ಓಂ ಸುಧಾಯೈ ನಮಃ
ಓಂ ಧನ್ಯಾಯೈ ನಮಃ
ಓಂ ಹಿರಣ್ಮಯ್ಯೈ ನಮಃ
ಓಂ ಲಕ್ಷ್ಮ್ಯೈ ನಮಃ
ಓಂ ನಿತ್ಯಪುಷ್ಟಾಯೈ ನಮಃ
ಓಂ ವಿಭಾವರ್ಯೈ ನಮಃ (20)
ಓಂ ಅದಿತ್ಯೈ ನಮಃ
ಓಂ ದಿತ್ಯೈ ನಮಃ
ಓಂ ದೀಪ್ತಾಯೈ ನಮಃ
ಓಂ ವಸುಧಾಯೈ ನಮಃ
ಓಂ ವಸುಧಾರಿಣ್ಯೈ ನಮಃ
ಓಂ ಕಮಲಾಯೈ ನಮಃ
ಓಂ ಕಾಂತಾಯೈ ನಮಃ
ಓಂ ಕಾಮಾಕ್ಷ್ಯೈ ನಮಃ
ಓಂ ಕ್ರೋಧಸಂಭವಾಯೈ ನಮಃ
ಓಂ ಅನುಗ್ರಹಪರಾಯೈ ನಮಃ (30)
ಓಂ ಋದ್ಧಯೇ ನಮಃ
ಓಂ ಅನಘಾಯೈ ನಮಃ
ಓಂ ಹರಿವಲ್ಲಭಾಯೈ ನಮಃ
ಓಂ ಅಶೋಕಾಯೈ ನಮಃ
ಓಂ ಅಮೃತಾಯೈ ನಮಃ
ಓಂ ದೀಪ್ತಾಯೈ ನಮಃ
ಓಂ ಲೋಕಶೋಕ ವಿನಾಶಿನ್ಯೈ ನಮಃ
ಓಂ ಧರ್ಮನಿಲಯಾಯೈ ನಮಃ
ಓಂ ಕರುಣಾಯೈ ನಮಃ
ಓಂ ಲೋಕಮಾತ್ರೇ ನಮಃ (40)
ಓಂ ಪದ್ಮಪ್ರಿಯಾಯೈ ನಮಃ
ಓಂ ಪದ್ಮಹಸ್ತಾಯೈ ನಮಃ
ಓಂ ಪದ್ಮಾಕ್ಷ್ಯೈ ನಮಃ
ಓಂ ಪದ್ಮಸುಂದರ್ಯೈ ನಮಃ
ಓಂ ಪದ್ಮೋದ್ಭವಾಯೈ ನಮಃ
ಓಂ ಪದ್ಮಮುಖ್ಯೈ ನಮಃ
ಓಂ ಪದ್ಮನಾಭಪ್ರಿಯಾಯೈ ನಮಃ
ಓಂ ರಮಾಯೈ ನಮಃ
ಓಂ ಪದ್ಮಮಾಲಾಧರಾಯೈ ನಮಃ
ಓಂ ದೇವ್ಯೈ ನಮಃ (50)
ಓಂ ಪದ್ಮಿನ್ಯೈ ನಮಃ
ಓಂ ಪದ್ಮಗಂಥಿನ್ಯೈ ನಮಃ
ಓಂ ಪುಣ್ಯಗಂಧಾಯೈ ನಮಃ
ಓಂ ಸುಪ್ರಸನ್ನಾಯೈ ನಮಃ
ಓಂ ಪ್ರಸಾದಾಭಿಮುಖ್ಯೈ ನಮಃ
ಓಂ ಪ್ರಭಾಯೈ ನಮಃ
ಓಂ ಚಂದ್ರವದನಾಯೈ ನಮಃ
ಓಂ ಚಂದ್ರಾಯೈ ನಮಃ
ಓಂ ಚಂದ್ರಸಹೋದರ್ಯೈ ನಮಃ
ಓಂ ಚತುರ್ಭುಜಾಯೈ ನಮಃ (60)
ಓಂ ಚಂದ್ರರೂಪಾಯೈ ನಮಃ
ಓಂ ಇಂದಿರಾಯೈ ನಮಃ
ಓಂ ಇಂದುಶೀತುಲಾಯೈ ನಮಃ
ಓಂ ಆಹ್ಲೋದಜನನ್ಯೈ ನಮಃ
ಓಂ ಪುಷ್ಟ್ಯೈ ನಮಃ
ಓಂ ಶಿವಾಯೈ ನಮಃ
ಓಂ ಶಿವಕರ್ಯೈ ನಮಃ
ಓಂ ಸತ್ಯೈ ನಮಃ
ಓಂ ವಿಮಲಾಯೈ ನಮಃ
ಓಂ ವಿಶ್ವಜನನ್ಯೈ ನಮಃ (70)
ಓಂ ತುಷ್ಟ್ಯೈ ನಮಃ
ಓಂ ದಾರಿದ್ರ್ಯ ನಾಶಿನ್ಯೈ ನಮಃ
ಓಂ ಪ್ರೀತಿಪುಷ್ಕರಿಣ್ಯೈ ನಮಃ
ಓಂ ಶಾಂತಾಯೈ ನಮಃ
ಓಂ ಶುಕ್ಲಮಾಲ್ಯಾಂಬರಾಯೈ ನಮಃ
ಓಂ ಶ್ರಿಯೈ ನಮಃ
ಓಂ ಭಾಸ್ಕರ್ಯೈ ನಮಃ
ಓಂ ಬಿಲ್ವನಿಲಯಾಯೈ ನಮಃ
ಓಂ ವರಾರೋಹಾಯೈ ನಮಃ
ಓಂ ಯಶಸ್ವಿನ್ಯೈ ನಮಃ (80)
ಓಂ ವಸುಂಧರಾಯೈ ನಮಃ
ಓಂ ಉದಾರಾಂಗಾಯೈ ನಮಃ
ಓಂ ಹರಿಣ್ಯೈ ನಮಃ
ಓಂ ಹೇಮಮಾಲಿನ್ಯೈ ನಮಃ
ಓಂ ಧನಧಾನ್ಯ ಕರ್ಯೈ ನಮಃ
ಓಂ ಸಿದ್ಧಯೇ ನಮಃ
ಓಂ ಸ್ತ್ರೈಣ ಸೌಮ್ಯಾಯೈ ನಮಃ
ಓಂ ಶುಭಪ್ರದಾಯೈ ನಮಃ
ಓಂ ನೃಪವೇಶ್ಮ ಗತಾನಂದಾಯೈ ನಮಃ
ಓಂ ವರಲಕ್ಷ್ಮ್ಯೈ ನಮಃ (90)
ಓಂ ವಸುಪ್ರದಾಯೈ ನಮಃ
ಓಂ ಶುಭಾಯೈ ನಮಃ
ಓಂ ಹಿರಣ್ಯಪ್ರಾಕಾರಾಯೈ ನಮಃ
ಓಂ ಸಮುದ್ರ ತನಯಾಯೈ ನಮಃ
ಓಂ ಜಯಾಯೈ ನಮಃ
ಓಂ ಮಂಗಳಾಯೈ ನಮಃ
ಓಂ ದೇವ್ಯೈ ನಮಃ
ಓಂ ವಿಷ್ಣು ವಕ್ಷಃಸ್ಥಲ ಸ್ಥಿತಾಯೈ ನಮಃ
ಓಂ ವಿಷ್ಣುಪತ್ನ್ಯೈ ನಮಃ
ಓಂ ಪ್ರಸನ್ನಾಕ್ಷ್ಯೈ ನಮಃ (100)
ಓಂ ನಾರಾಯಣ ಸಮಾಶ್ರಿತಾಯೈ ನಮಃ
ಓಂ ದಾರಿದ್ರ್ಯ ಧ್ವಂಸಿನ್ಯೈ ನಮಃ
ಓಂ ಸರ್ವೋಪದ್ರವ ವಾರಿಣ್ಯೈ ನಮಃ
ಓಂ ನವದುರ್ಗಾಯೈ ನಮಃ
ಓಂ ಮಹಾಕಾಳ್ಯೈ ನಮಃ
ಓಂ ಬ್ರಹ್ಮ ವಿಷ್ಣು ಶಿವಾತ್ಮಿಕಾಯೈ ನಮಃ
ಓಂ ತ್ರಿಕಾಲ ಜ್ಞಾನ ಸಂಪನ್ನಾಯೈ ನಮಃ
ಓಂ ಭುವನೇಶ್ವರ್ಯೈ ನಮಃ (108)
ಶ್ರೀ ಸೂಕ್ತ ಮತ್ತು ವಿಶೇಷತೆಗಳು.
“ಶ್ರೀ ಸೂಕ್ತ”.
ಹರಿಃ ಓಂ || ಹಿರ’ಣ್ಯವರ್ಣಾಂ ಹರಿ’ಣೀಂ ಸುವರ್ಣ’ರಜತಸ್ರ’ಜಾಮ್ | ಚಂದ್ರಾಂ ಹಿರಣ್ಮ’ಯೀಂ ಲಕ್ಷ್ಮೀಂ ಜಾತ’ವೇದೋ ಮ ಆವ’ಹ ||
ತಾಂ ಮ ಆವ’ಹ ಜಾತ’ವೇದೋ ಲಕ್ಷ್ಮೀಮನ’ಪಗಾಮಿನೀ”ಮ್ |
ಯಸ್ಯಾಂ ಹಿರ’ಣ್ಯಂ ವಿಂದೇಯಂ ಗಾಮಶ್ವಂ ಪುರು’ಷಾನಹಮ್ ||
ಅಶ್ವಪೂರ್ವಾಂ ರ’ಥಮಧ್ಯಾಂ ಹಸ್ತಿನಾ”ದ-ಪ್ರಬೋಧಿ’ನೀಮ್ |
ಶ್ರಿಯಂ’ ದೇವೀಮುಪ’ಹ್ವಯೇ ಶ್ರೀರ್ಮಾ ದೇವೀರ್ಜು’ಷತಾಮ್ ||
ಕಾಂ ಸೋ”ಸ್ಮಿತಾಂ ಹಿರ’ಣ್ಯಪ್ರಾಕಾರಾ’ಮಾರ್ದ್ರಾಂ ಜ್ವಲಂ’ತೀಂ ತೃಪ್ತಾಂ ತರ್ಪಯಂ’ತೀಮ್ |
ಪದ್ಮೇ ಸ್ಥಿತಾಂ ಪದ್ಮವ’ರ್ಣಾಂ ತಾಮಿಹೋಪ’ಹ್ವಯೇ ಶ್ರಿಯಮ್ ||
ಚಂದ್ರಾಂ ಪ್ರ’ಭಾಸಾಂ ಯಶಸಾ ಜ್ವಲಂ’ತೀಂ ಶ್ರಿಯಂ’ ಲೋಕೇ ದೇವಜು’ಷ್ಟಾಮುದಾರಾಮ್ |
ತಾಂ ಪದ್ಮಿನೀ’ಮೀಂ ಶರ’ಣಮಹಂ ಪ್ರಪ’ದ್ಯೇஉಲಕ್ಷ್ಮೀರ್ಮೇ’ ನಶ್ಯತಾಂತ್ವಾಂ ವೃ’ಣೊಮಿ ||
ಆದಿತ್ಯವ’ರ್ಣೇ ತಪಸೋஉಧಿ’ಜಾತೋ ವನಸ್ಪತಿಸ್ತವ’ ವೃಕ್ಷೋஉಥ ಬಿಲ್ವಃ |
ತಸ್ಯ ಫಲಾ’ನಿ ತಪಸಾನು’ದಂತು ಮಾಯಾಂತ’ರಾಯಾಶ್ಚ’ ಬಾಹ್ಯಾ ಅ’ಲಕ್ಷ್ಮೀಃ ||
ಉಪೈತು ಮಾಂ ದೇವಸಖಃ ಕೀರ್ತಿಶ್ಚ ಮಣಿ’ನಾ ಸಹ |
ಪ್ರಾದುರ್ಭೂತೋஉಸ್ಮಿ’ ರಾಷ್ಟ್ರೇஉಸ್ಮಿನ್ ಕೀರ್ತಿಮೃ’ದ್ಧಿಂ ದದಾದು’ ಮೇ ||
ಕ್ಷುತ್ಪಿ’ಪಾಸಾಮ’ಲಾಂ ಜ್ಯೇಷ್ಠಾಮ’ಲಕ್ಷೀಂ ನಾ’ಶಯಾಮ್ಯಹಮ್ |
ಅಭೂ’ತಿಮಸ’ಮೃದ್ಧಿಂ ಚ ಸರ್ವಾಂ ನಿರ್ಣು’ದ ಮೇ ಗೃಹಾತ್ ||
ಗಂಧದ್ವಾರಾಂ ದು’ರಾಧರ್ಷಾಂ ನಿತ್ಯಪು’ಷ್ಟಾಂ ಕರೀಷಿಣೀ”ಮ್ |
ಈಶ್ವರೀಮ್’ ಸರ್ವ’ಭೂತಾನಾಂ ತಾಮಿಹೋಪ’ಹ್ವಯೇ ಶ್ರಿಯಮ್ ||
ಮನ’ಸಃ ಕಾಮಮಾಕೂತಿಂ ವಾಚಃ ಸತ್ಯಮ’ಶೀಮಹಿ |
ಪಶೂನಾಂ ರೂಪಮನ್ಯ’ಸ್ಯ ಮಯಿ ಶ್ರೀಃ ಶ್ರ’ಯತಾಂ ಯಶಃ’ ||
ಕರ್ದಮೇ’ನ ಪ್ರ’ಜಾಭೂತಾ ಮಯಿ ಸಂಭ’ವ ಕರ್ದಮ |
ಶ್ರಿಯಂ’ ವಾಸಯ’ ಮೇ ಕುಲೇ ಮಾತರಂ’ ಪದ್ಮಮಾಲಿ’ನೀಮ್ ||
ಆಪಃ’ ಸೃಜಂತು’ ಸ್ನಿಗ್ದಾನಿ ಚಿಕ್ಲೀತ ವ’ಸ ಮೇ ಗೃಹೇ |
ನಿ ಚ’ ದೇವೀಂ ಮಾತರಂ ಶ್ರಿಯಂ’ ವಾಸಯ’ ಮೇ ಕುಲೇ ||
ಆರ್ದ್ರಾಂ ಪುಷ್ಕರಿ’ಣೀಂ ಪುಷ್ಟಿಂ ಸುವರ್ಣಾಮ್ ಹೇ’ಮಮಾಲಿನೀಮ್ |
ಸೂರ್ಯಾಂ ಹಿರಣ್ಮ’ಯೀಂ ಲಕ್ಷ್ಮೀಂ ಜಾತ’ವೇದೋ ಮ ಆವ’ಹ ||
ಆರ್ದ್ರಾಂ ಯಃ ಕರಿ’ಣೀಂ ಯಷ್ಟಿಂ ಪಿಂಗಲಾಮ್ ಪ’ದ್ಮಮಾಲಿನೀಮ್ |
ಚಂದ್ರಾಂ ಹಿರಣ್ಮ’ಯೀಂ ಲಕ್ಷ್ಮೀಂ ಜಾತ’ವೇದೋ ಮ ಆವ’ಹ ||
ತಾಂ ಮ ಆವ’ಹ ಜಾತ’ವೇದೋ ಲಕ್ಷೀಮನ’ಪಗಾಮಿನೀ”ಮ್ |
ಯಸ್ಯಾಂ ಹಿರ’ಣ್ಯಂ ಪ್ರಭೂ’ತಂ ಗಾವೋ’ ದಾಸ್ಯೋஉಶ್ವಾ”ನ್, ವಿಂದೇಯಂ ಪುರು’ಷಾನಹಮ್ ||
ಯಃ ಶುಚಿಃ ಪ್ರದಯತೋ ಭೂ ತ್ವಾ ಜುಹುಯಾದಾಜ್ಯಮನ್ವಹಮ್
ಸೂಕ್ತಂ ಪಂಚದಶರ್ಚಂಚ ಶ್ರೀಕಾಮಃ ಸತತಂ ಜಪೇತ್
ಪದ್ಮಾನನೇ ಪದ್ಮನಿ ಪದ್ಮಪತ್ರೆ ಪದ್ಮಾದಲಾಯತಾಕ್ಷಿ
ವಿಶ್ವಪ್ರಿಯೇ ವಿಷ್ಣುಮನೋನುಕೂಲೇ ತ್ವತ್ಪಾದಪದ್ಮಂಮಯಿ ಸನ್ನಿಧಸ್ತ್ವ ||
.
ಪದ್ಮಾನನೇ ಪದ್ಮ ಊರೂ ಪದ್ಮಾಕ್ಷೀ ಪದ್ಮ ಸಂಭವೇ
ತನ್ಮೆ ಭಜಸಿ ಪದ್ಮಾಕ್ಷಿ ಯೇನ ಸೌಖ್ಯಂ ಲಭಾಮ್ಯಹಮ್ ||
ಅಶ್ವದಾಯೀ ಗೋದಾಯೀ ಧನದಾಯೀ ಮಹಾಧನೇ
ಧನಂ ಮೇ ಜುಷತಾಂ ದೇವಿ ಸರ್ವಕಾಮಾಂಶ್ಚ ದೇಹಿ ಮೇ ||೩||
ಪುತ್ರ ಪೌತ್ರ ಧನಂ ಧಾನ್ಯಂ ಹಸ್ತ್ಯಶ್ವಾದಿಗವೇರಥಮ್
ಪ್ರಜಾನಾಂ ಭವಸಿ ಮಾತಾ ಆಯುಷ್ಮಂತಂ ಕರೋತು ಮೇ ||
ಧನಮಗ್ನಿರ್ಧನಂ ವಾಯುರ್ಧನಮ್ ಸೂರ್ಯೋಧನಂ ವಸುಃ
ಧನಮಿಂದ್ರೋ ಬೃಹಸ್ಪತಿರ್ವರುಣಂ ಧನಮಶ್ನುತೇ
ವೈನತೇಯಃ ಸೋಮಂ ಪಿಬ ಸೋ ಮಂ ಪಿಬತು ವೃತ್ತಹಾ
ಸೋಮಂ ಧನಸ್ಯ ಸೋಮಿನೋ ಮಹ್ಯಂ ದದಾತುಸೋಮಿನಃ ||
ನ ಕ್ರೋಧೋ ನ ಚ ಮಾತ್ಸಯಂ ನ ಲೋಭೋ ನಾ ಶುಭೋ ಮತಿಃ
ಭವಂತಿ ಕೃತಪುಣ್ಯಾನಾಂ ಭಕ್ತನಾಂ ಶ್ರೀಸೂಕ್ತಮ್ ಜಪೆತ್||
ಸರಸಿಜನಿಲಯೇ ಸರೋಜಹಸ್ತೇ ಧವಲತಾರಾಂ ಶುಕಗಂಧಮಾಲ್ಯ ಶೋಭೇ
ಭಗವತಿ ಹರಿವಲ್ಲಭೇ ಮನೋಜ್ಞೆ ತ್ರಿಭುವನ ಭೂತರಿ ಪ್ರಸೀದಮಹ್ಯಮ್ |
ವಿಷ್ಣುಪತ್ನೀಂ ಕ್ಷಮಾಂ ದೇವಿಂ ಮಾಧವೀಂ ಮಾಧವ ಪ್ರಿಯಾಂ||
ಲಕ್ಷ್ಮೀಂ ಪ್ರಿಯ ಸಖೀಂ ದೇವಿಂ ನಮಾಮ್ಯಚ್ಯುತವಲ್ಲಭಾಮ್ |
ಮಹಾ ಲಕ್ಷ್ಮೀ ಚ’ ವಿದ್ಮಹೇ’ ವಿಷ್ಣುಪತ್ನೀ ಚ’ ಧೀಮಹಿ | ತನ್ನೋ’ ಲಕ್ಷ್ಮೀಃ ಪ್ರಚೋದಯಾ”ತ್ ||
ಆನಂದಃ ಕರ್ದಮಷ್ಚೈವ ಚಿಕ್ಲೀತ ಇತಿ ವಿಶ್ರಿತಾಃ|
ಋಷಯಃ ಶ್ರಿಯಃ ಪುತ್ರಾಶ್ಚ ಶ್ರೀರ್ದೇವೀ ದೇವತಾಃ ||
ಶ್ರೀ-ರ್ವರ್ಚ’ಸ್ವ-ಮಾಯು’ಷ್ಯ-ಮಾರೋ”ಗ್ಯಮಾವೀ’ಧಾಛ್ಚೊ ಭಮಾನಂ ಮಹೀಯತೇ” |
ಧನಂ ಧಾನ್ಯಂ ಪಶುಂ ಬಹುಪು’ತ್ರಲಾಭಂ ಶತಸಂ”ವತ್ಸರಂ ದೀರ್ಘಮಾಯುಃ’ ||
ಋಣ ರೋಗಾರಿ ದಾರಿದ್ರ್ಯ ಪಾಪಕ್ಷುದಪಮೃತ್ಯವ: |
ಭಯಶೋಕ ಮನಸ್ತಾಪಾ ನಶ್ಯಂತು ಮಮ ಸರ್ವದಾ||
ಶ್ರೀ ಸೂಕ್ತಮ್
ಈ ಸೂಕ್ತವನ್ನು ಪ್ರತಿದಿವಸ ಬೆಳಗ್ಗೆ ಮತ್ತು ಸಾಯಂಕಾಲ 5.30 ರಿಂದ 6.30 ರ ಒಳಗೆ ಓದಿ
ಶ್ರೀ ಮಹಾಲಕ್ಷ್ಮೀ ದೇವಿಗೆ ಪೂಜೆ ಮಾಡಿದರೆ ಆ ಮನೆಯಲ್ಲಿ ಯತೇಚ್ಛವಾದ ಧನಕನಕ ವಸ್ತು ವಾಹನಗಳು ಅಭಿವೃದ್ಧಿಯಾಗಿ, ವಂಶದ ಏಳಿಗೆಯಾಗುತ್ತದೆ.
ಶ್ರೀ ಸೂಕ್ತ ಓದಿ ಶ್ರೀ ಲಕ್ಷ್ಮೀನಾರಾಯಣರ ಪೂಜೆ ಮಾಡಿದರೆ, ಆ ಮನೆಯಲ್ಲಿ ಗಂಡಹೆಂಡತಿ ಅನ್ಯೋನ್ಯವಾಗಿ ಇರುತ್ತಾರೆ.
ಮನಸ್ತಾಪ ಇತ್ಯಾದಿ ಸಮಸ್ಯೆಗಳು ದೂರವಾಗುತ್ತದೆ..
ಯಾರ ಮನೆಯಲ್ಲಿಪುರುಷ ಸೂಕ್ತ ಮತ್ತು ಶ್ರೀ ಸೂಕ್ತ ದಿಂದ ಸಾಲಿಗ್ರಾಮ ದೇವರಿಗೆ ಅಭಿಷೇಕ ಮಾಡುತ್ತಾರೋ, ಆ ಮನೆಯಲ್ಲಿ ಎಲ್ಲರಿಗೂ ಸಮಸ್ತ ದೋಷಗಳು ನಿವಾರಣೆಯಾಗುತ್ತದೆ ..
ಯಾರ ಮನೆಯಲ್ಲಿ ಪ್ರತಿದಿವಸ ಶ್ರೀಸೂಕ್ತ ಓದಿ ,ಮನೆಗೆ ಬರುವ ಹೆಂಗಸರಿಗೆ ಅರಿಸಿನ ಕುಂಕುಮ ಕೊಡುತ್ತಾರೋ ಆ ಮನೆಯಲ್ಲಿ ಎಂದೂ ದಾರಿದ್ರ್ಯ, ವೈಧವ್ಯ ಬರುವುದಿಲ್ಲ.., ಸಮಸ್ತ ಸ್ತ್ರೀ ಶಾಪ ನಿವಾರಣೆಯಾಗುತ್ತದೆ .. ಸಕಲ ಕಾರ್ಯಗಳೂ ನಿರ್ವಿಘ್ನವಾಗಿ ನೆರವೇರುತ್ತವೆ.
ಯಾರ ಮನೆಯಲ್ಲಿ ಶ್ರೀ ಸೂಕ್ತ ಹೇಳುತ್ತಾ ದೇವರ ವಿಗ್ರಹಗಳಿಗೆ ಅಥವಾ ಸಾಲಿಗ್ರಾಮ ದೇವರಿಗೆ ಗಂಧೋದಕದಿಂದ ಅಭಿಷೇಕ ಮಾಡುತ್ತಾರೋ, ಆ ಮನೆಯಲ್ಲಿ ಯಾವುದೇ ತರಹದ ರೋಗಭಾದೆ ಇರುವುದಿಲ್ಲ ..
ಸರ್ವ ರೋಗಗಳು ನಿವಾರಣೆಯಾಗಿ ಆರೋಗ್ಯವಂತರಾಗಿ ಬಾಳುತ್ತಾರೆ..
ಸಮಸ್ತ ಮಾಟ ಮಂತ್ರ ದೋಷಗಳು ನಿವಾರಣೆಯಾಗುತ್ತದೆ.
ಸಾಲದ ಭಾದೆ ನಿವಾರಣೆಯಾಗುತ್ತದೆ ..ಹಣಕಾಸಿನ ತೊಂದರೆ ಇರುವುದಿಲ್ಲ ..
ಶ್ರೀದೇವಿಯು ಹಂಗಿನಿಂದ ಮುಕ್ತಗೊಳಿಸುವುದರೊಂದಿಗೆ, ಅನಾರೋಗ್ಯ, ಶತ್ರು ಪೀಡೆ, ಬಡತನ, ಹಸಿವು, ಕೆಡುಕು, ಅಪಮೃತ್ಯುಗಳನ್ನೂ, ಭೀತಿ, ದು:ಖ, ಮನಸ್ತಾಪಗಳನ್ನೂ ಸದಾ ನಾಶಗೊಳಿಸುತ್ತಾಳೆ.
ಶ್ರೀ ಸೂಕ್ತ ದ ಫಲ ಅಪಾರ
ಸೂಚನೆ : ವೈದಿಕರಿಂದ ಅಥವಾ ತಿಳಿದವರಿಂದ; ಗುರುಗಳಿಂದ ಇದನ್ನು ಉಪದೇಶ ಪಡೆದುಕೊಂಡು ಪಾರಾಯಣ ಮಾಡುವುದು ಕ್ಷೇಮ
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ “ದಿ ಮಂಗಳೂರು ಮಿರರ್” ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)