LATEST NEWS
ಹೌತಿ ಬಂಡುಕೋರರಿಂದ ಕೆಂಪು ಸಮುದ್ರದಲ್ಲಿ ಗ್ರೀಕ್ ತೈಲ ಟ್ಯಾಂಕರ್ ಮೇಲೆ ದಾಳಿ, ಸಮುದ್ರ ಮಧ್ಯೆ ಸ್ಪೋಟಗೊಂಡ CHIOS Lion..!

ಯೆಮನ್ : ಗ್ರೀಕ್ ಒಡೆತನದ ಕಚ್ಚಾ ತೈಲ ಟ್ಯಾಂಕರ್ ಚಿಯೋಸ್ ಲಯನ್ ಹೌತಿ ದಾಳಿಗೆ ಗುರಿಯಾಗಿ ಸ್ಪೋಟಗೊಂಡಿದೆ. ಸ್ಪೋಟಗೊಂಡ ಹಡಗಿನಿಂದ ತೈಲ ಸೋರಿಕೆಯ ಭೀತಿ ಎದುರಾಗಿದೆ.
ಇಸ್ರೇಲ್ ಆಕ್ರಮಿತ ಪ್ಯಾಲೆಸ್ಟೈನ್ ಬಂದರುಗಳಿಗೆ ಹಡಗುಗಳ ನಿಷೇಧವನ್ನು ಹೇರಲಾಗಿದ್ದು ಅದನ್ನು ಉಲ್ಲಂಘಿಸಿದ್ದ ಚಿಯೋಸ್ ಲಯನ್ ಹಡಗನ್ನು ಯೆಮೆನ್ ಸಶಸ್ತ್ರ ಪಡೆಗಳು ಕೆಂಪು ಸಮುದ್ರದಲ್ಲಿ ರಿಮೋಟ್-ನಿಯಂತ್ರಿತ ಸ್ಪೋಟಕಗಳು ತುಂಬಿದ್ದ ದೋಣಿಯನ್ನು ಅಪ್ಪಳಿಸಿ ಸ್ಪೋಟಿಸಿದೆ ಎನ್ನಲಾಗಿದೆ.

ಯುಎಸ್ ಸೆಂಟ್ರಲ್ ಕಮಾಂಡ್ ಡ್ರೋನ್ ಬೋಟ್ ದಾಳಿಯನ್ನು ದೃಢಪಡಿಸಿದೆ ಆದರೆ ಚಿಯೋಸ್ ಲಯನ್ ಯಾವುದೇ ಸಹಾಯವನ್ನು ಕೇಳಿಲ್ಲ ಎಂದು ಹೇಳಿದೆ. ಹಡಗಿಗೆ ಹಾನಿಯಾಗಿದ್ದರು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಹೇಳಿದೆ. ಯೆಮೆನ್‌ನ ಹೊಡೆಡಾದಿಂದ ವಾಯುವ್ಯಕ್ಕೆ ಸುಮಾರು 97 ನಾಟಿಕಲ್ ಮೈಲಿ ದೂರದಲ್ಲಿ ದಾಳಿ ನಡೆದಿದೆ. ಲೈಬೀರಿಯಾದಲ್ಲಿ ನೋಂದಾಯಿಸಲಾಗಿದ್ದ ಈ ಹಡಗನ್ನು ಗ್ರೀಸ್‌ನಿಂದ ನಿರ್ವಹಿಸಲಾಗುತ್ತಿತ್ತು.