UDUPI
ಉಡುಪಿಯ ಹೋಟೆಲೊಂದರ 18 ಮಂದಿ ನೌಕರರಿಗೆ ಕೊರೊನಾ ದೃಡ!
ಉಡುಪಿ ಜುಲೈ 21: ಉಡುಪಿ ಕರಾವಳಿ ಬೈ ಪಾಸ್ ಬಳಿ ಇರುವ ಪ್ರಸಿದ್ದ ಹೊಟೇಲ್ ಒಂದರ 18 ಮಂದಿ ಸಿಬ್ಬಂದಿಗಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ.
ಈ ಮೊದಲು ಹೋಟೆಲಿನ ಮಾಲೀಕರಿಗೆ ಕೊರೊನಾ ಸೊಂಕು ತಗುಲಿದ್ದು, ಹೋಟೆಲ್ ಸೀಲ್ ಡೌನ್ ಮಾಡಿ 20 ಸಿಬ್ಬಂದಿಗಳನ್ನು ಕ್ವಾರಂಟೈನ್ ಮಾಡಲಾಗಿತ್ತು. ಈಗ ಹೋಮ್ ಕ್ವಾರಂಟೈನ್ ನಲ್ಲಿದ್ದ ಹದಿನೆಂಟು ಮಂದಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಅದರಲ್ಲಿ ಇಬ್ಬರು ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಭಟ್ಕಳಕ್ಕೆ ತೆರಳಿದ್ದಾರೆ.