FILM
ಡಿಸೈನರ್ ಸಾರಿಯಲ್ಲಿ ಹಾಟ್ ಆಗಿ ಕಾಣಿಸಿಕೊಂಡ ನಟಿ ಜಾನ್ವಿ ಕಪೂರ್

ಮುಂಬೈ : ಬಾಲಿವುಡ್ ನಲ್ಲಿ ಸಿನೆಮಾಗಳ ಮೂಲಕ ಸಂಚಲನ ಮೂಡಿಸಿರುವ ನಟಿ ಶ್ರೀದೇವಿ ಪುತ್ರಿ ಇದೀಗ ತಮ್ಮ ಬೋಲ್ಡ್ ಪೋಟೋಗಳ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಡಿಸೈನರ್ ಸಾರಿಯಲ್ಲಿ ಮೂಡಿ ಬಂದ ಜಾನ್ವಿ ಪೋಟೋಗಳು ವೈರಲ್ ಆಗಿವೆ.
ಧಡಕ್ ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ ಶ್ರೀದೇವಿ ಮತ್ತು ಬೋನಿ ಕಪೂರ್ ದಂಪತಿಯ ಪುತ್ರಿ ಜಾನ್ವಿ ಕಪೂರ್ ಪರಿಚಿತರಾಗಿದ್ದರು. ಬಾಲಿವುಡ್ ನ ಪ್ರಮುಖ ನಟರ ಜೊತೆ ನಟಿಸಿದ ಬಳಿಕ ಇದೀಗ ದಕ್ಷಿಣ ಸಿನಿಮಾಗಳಲ್ಲೂ ನಟಿಸಲು ತೆರೆಮರೆಯಲ್ಲಿ ಜಾನ್ವಿ ಸಿದ್ಧತೆ ನಡೆಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ಜಾನ್ವಿ ಕಪೂರ್ ಹಾಟ್ ಪೋಟೋ ಶೂಟ್ ಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇದೀಗ ನಟಿ ಜಾನ್ವಿ ಕಪೂರ್ ಬಿಳಿ ಬಣ್ಣದ ಡಿಸೈನರ್ ಸೀರೆಯಲ್ಲಿ ಸೆಕ್ಸಿ ಲುಕ್‌ನಲ್ಲಿ ನಟಿ ಮಿಂಚಿದ್ದಾರೆ. ತಮ್ಮ ಮಾದಕ ಲುಕ್ಕಿನಿಂದ ನೋಡುಗರನ್ನ ಮೋಡಿ ಮಾಡಿದ್ದಾರೆ. ಕ್ಯಾಮೆರಾ ಕಣ್ಣಿಗೆ ಹಾಟ್ ಪೋಸ್ ನೀಡಿ, ಸೀರೆಯಲ್ಲಿ ಜಾನ್ವಿ ಶೈನ್ ಮಾಡಿದ್ದಾರೆ.