LATEST NEWS
ಪಡುಬಿದ್ರಿ ಸಮುದ್ರದ ಅಲೆಗೆ ಸಿಲುಕಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ
ಉಡುಪಿ, ಆ. 11 ಉಡುಪಿಯಲ್ಲಿ ಧಾರಾಕಾರ ಮಳೆ ಹಿನ್ನಲೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಜಿಲ್ಲೆಯಲ್ಲಿ ನೆರೆ ಪ್ರವಾಸ ಕೈಗೊಂಡಿದ್ದಾರೆ. ಈ ಬಾರಿಯ ಮಳೆಯಿಂದಾಗಿ ಕಡಲ್ಕೊರೆತ ಉಂಟಾಗಿರುವ ಪಡುಬಿದ್ರೆ ಕಡಲತೀರಕ್ಕೆ ಭೇಟಿ ನೀಡಿದ ಸಚಿವ ಬೊಮ್ಮಾಯಿ ಕಡಲ್ಕೊರೆತದಿಂದ ಹಾನಿಗೊಳಗಾದ ಪ್ರದೇಶಗಳನ್ನು ವಿಕ್ಷಿಸಿದರು.
ಈ ಸಂದರ್ಭ ಸಮುದ್ರಕ್ಕಿಳಿದ ಸಚಿವ ಬಸವರಾಜ ಬೊಮ್ಮಾಯಿ ದೊಡ್ಡೆ ಅಲೆಯೊಂದು ಅಪ್ಪಳಿಸಿದ್ದು, ಸ್ಥಳೀಯ ಬಿಜೆಪಿ ನಾಯಕರು ಹಾಗೂ ಉಡುಪಿ ಎಸ್ಪಿ ವಿಷ್ಣುವರ್ಧನ್ ಬೊಮ್ಮಾಯಿವರ ರಕ್ಷಣೆಗೆ ಆಗಮಿಸಿದರು. ಅಲೆ ಅಬ್ಬರಕ್ಕೆ ಗೃಹ ಸಚಿವರ ಒಂದು ಚಪ್ಪಲಿ ಸಮುದ್ರದ ಅಲೆ ಎಳೆದುಕೊಂಡು ಹೋಗಿದೆ.
ಈ ಸಂದರ್ಭ ಮಾದ್ಯಮಗಳೊಂದಿಗೆ ಮಾತನಾಡಿದ ಸಚಿವರು ಸುಮಾರು 3 ಕೋಟಿಯಷ್ಟು ಹಣ ಜಿಲ್ಲಾಡಳಿತದ ಖಾತೆ ಯಲ್ಲಿದ್ದು ಇನ್ನು ಕೂಡಾ 10 ಕೋಟಿ ರೂ.ಯಷ್ಟು ಹಣವನ್ನು ಪ್ರಾಕೃತಿಕ ವಿಕೋಪದಿಂದ ಉಂಟಾದ ಹಾನಿಗೆ ತುರ್ತು ಕಾಮಗಾರಿಗಾಗಿ ಎನ್‌ಡಿಆರ್‌ಎಫ್ ಅಡಿಯಲ್ಲಿ ಮೂರು ದಿನಗಳಲ್ಲಿ ಬಿಡುಗಡೆ ಮಾಡಲಿದ್ದೇವೆ ಎಂದು ಗೃಹ ಸಚಿವ ಹಾಗು ಉಡುಪಿ ಉಸ್ತುವಾರಿ ಬಸವರಾಜು ಬೊಮ್ಮಾಯಿ ಅವರು ಹೇಳಿದರು.
ಹಾಗೆಯೇ ಪಶ್ಚಿಮ ಘಟ್ಟದಲ್ಲಿ ಭೂ ಕುಸಿತದ ಬಗ್ಗೆ ಹಾಗೂ ಅದನ್ನು ತಡೆಗಟ್ಟುವ ಶಾಶ್ವತ ಪರಿಹಾರದ ಬಗ್ಗೆ ಜಿಯೋಗ್ರಾಫಿಕಲ್ ಇಂಡಿಯಾದವರು ಒಂದು ಸರ್ವೇ ಮಾಡುವ ಬಗ್ಗೆಯೂ ಪ್ರಧಾನಿಯವರಲ್ಲಿ ಪ್ರಸ್ತಾಪ ಮಾಡಲಾಗಿದೆ. ನೆರೆ ಪೀಡಿತ ಹಾಗೂ ಭೂ ಸವೆತ ಸ್ಥಳಗಳಲ್ಲಿ ಶಾಶ್ವತ ಕ್ರಮ ಕೈಗೊಳ್ಳಲು ಜಿಯೊ ಮ್ಯಾಪಿಂಗ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.