Connect with us

DAKSHINA KANNADA

ಗೃಹರಕ್ಷಕ ಅಧಿಕಾರಿ ತರಬೇತಿಯಲ್ಲಿ ಚಿನ್ನದ ಪದಕ ಪಡೆದ ಪುತ್ತೂರು ಗೃಹ ರಕ್ಷಕ ದಳ ಸಿಬ್ಬಂದಿ ಕೇಶವ ಎಸ್

ಪುತ್ತೂರು ಎಪ್ರಿಲ್ 03: ಗೃಹರಕ್ಷಕ ದಳ ಮತ್ತು ಪೌರ ರಕ್ಷಣಾ ಅಕಾಡೆಮಿ ಬೆಂಗಳೂರುನಲ್ಲಿ ನಡೆದ ಗೃಹರಕ್ಷಕ ಅಧಿಕಾರಿ ತರಬೇತಿಯಲ್ಲಿ ಪುತ್ತೂರು ಘಟಕದ ಸಿಬ್ಬಂದಿ ಕೇಶವ ಎಸ್ ರವರು ಚಿನ್ನದ ಪದಕವನ್ನು ಪಡೆದುಕೊಂಡಿರುತ್ತಾರೆ.


ಪುತ್ತೂರು ಮಹಿಳಾ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರನ್ನು ಗುರುತಿಸಿ ಶ್ರೀಮತಿ ಜೆ.ಕೆ ರಶ್ಮಿ ಐಪಿಎಸ್ ರವರು ಸ್ವಾಗತಿಸಿದರು ದಕ್ಷಿಣ ಕನ್ನಡ ಜಿಲ್ಲೆಯಿಂದ ಇಬ್ಬರು ಸಿಬ್ಬಂದಿ ಆಯ್ಕೆಯಾಗಿದ್ದು ಸುಮಾರು 26 ದಿನಗಳ ತರಬೇತಿಯಲ್ಲಿ ಕೇಶವ ಎಸ್ ರವರು ವಿವಿಧ ಪರೀಕ್ಷೆಗಳನ್ನು ಸಮಗ್ರವಾಗಿ ಎದುರಿಸಿ ಚಿನ್ನದ ಪದಕವನ್ನು ಪಡೆದುಕೊಂಡಿರುತ್ತಾರೆ.

ಕೇಶವ ರವರು ಈ ಹಿಂದೆ ಪುತ್ತೂರು ನಗರ ಸಂಚಾರ ಗ್ರಾಮಾಂತರ ಕಡಬ ಉಪ್ಪಿನಂಗಡಿ ಠಾಣೆಗಳಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಮಹಿಳಾ ಠಾಣೆ ಪುತ್ತೂರುನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಪುತ್ತೂರು ಘಟಕದ ಸಿಬ್ಬಂದಿಯಾದ ಇವರು ಇಲಾಖೆಗೆ ಸೇರಿ ಸುಮಾರು 9 ವರ್ಷಗಳ ಸೇವೆಯಲ್ಲಿ ಗ್ರಾ.ಪಂ ತಾ.ಪಂ ಜಿಲ್ಲಾ.ಪಂ ವಿಧಾನಸಭೆ ಲೋಕಸಭೆ ಚುನಾವಣೆ ತಮಿಳುನಾಡು ಕೇರಳ ಮಹಾರಾಷ್ಟ್ರ ರಾಜ್ಯ ಚುನಾವಣೆ ಕರ್ತವ್ಯ ನಿರ್ವಹಿಸಿರುವ ಇವರು ಸುದ್ದಿ ಆನ್ಲೈನ್ ವೋಟಿಂಗ್ ಮೂಲಕ ಪ್ರಥಮ ಸ್ಥಾನ ಪಡೆದು ನಾಗರಿಕರಿಂದಲೂ ಗುರುತಿಸಲ್ಪಟ್ಟಿದ್ದರು ಇವರು ಪ್ರಸ್ತುತ ಮುಂಡೂರು ಗ್ರಾಮದ ಕಾಲಿಂಗ ಹಿತ್ಲು ಎಂಬಲ್ಲಿ ವಾಸ್ತವ್ಯವನ್ನು ಹೊಂದಿರುತ್ತಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *