LATEST NEWS
ಭಟ್ಕಳದಿಂದ ಉಡುಪಿಗೆ ಬಂದು ಪೇಜಾವರ ಶ್ರೀಗಳಿಗೆ ಶೃದ್ದಾಂಜಲಿ ಸಲ್ಲಿಸಿದ ಮುಸ್ಲೀಂ ಬಾಂಧವರು
ಭಟ್ಕಳದಿಂದ ಉಡುಪಿಗೆ ಬಂದು ಪೇಜಾವರ ಶ್ರೀಗಳಿಗೆ ಶೃದ್ದಾಂಜಲಿ ಸಲ್ಲಿಸಿದ ಮುಸ್ಲೀಂ ಬಾಂಧವರು
ಉಡುಪಿ ಜನವರಿ 15: ಉಡುಪಿಯಲ್ಲೀಗ ರಥೋತ್ಸವಗಳ ಸಂಭ್ರಮ, ಮಕರ ಸಂಕ್ರಾಂತಿ ಹಿನ್ನಲೆ ನಿನ್ನೆ ಉಡುಪಿಯಲ್ಲಿ ವೈಭವದ ಚೂರ್ಣೋತ್ಸವ ನಡೆಯಿತು. ಚೂರ್ಣೋತ್ಸವ ಅಂಗವಾಗಿ ರಾತ್ರಿ 3 ತೇರ ಎಳೆದು ಉತ್ಸವ ನಡೆಯಿತು ಪರ್ಯಾಯ ಫಲಿಮಾರು ಮಠಾಧೀಶರ ಜೊತೆ ಇತರ ಮಠಾಧೀಶರು ಉಪಸ್ಥಿತರಿದ್ದರು. ನಿನ್ನೆ ನಡೆದ ಮಕರ ಸಂಕ್ರಾಂತಿ ಉತ್ಸವದ ವೇಳೆ ಒಂದು ವಿಶಿಷ್ಟ ಘಟನೆ ನಡೆದಿದೆ.
ಸಾವಿರಾರು ಜನರು ಸೇರಿದ್ದ ಜಾತ್ರೆಯಲ್ಲಿ ಒಂದಷ್ಟು ಮುಸ್ಲೀಂ ಬಂಧುಗಳು ಕಾಣಿಸಿಕೊಂಡರು. ಪೇಜಾವರ ಮಠ ಮುಂಭಾಗದಲ್ಲಿ ಗುಂಪು ಸೇರಿದರು. ಜನರ ನಡುವೆ ಗುಸು ಗುಸು ಆರಂಭವಾಗಿತ್ತು. ನಂತರ ಪೇಜಾವರ ಮಠದ ಅಧಿಕಾರಿಗಳು ಬಂದು ವಿಚಾರಿಸಿದಾಗ ಇವರೆಲ್ಲಾ ಭಟ್ಕಳದಿಂದ ಬಂದ ಮುಸ್ಲಿಂ ಸಮುದಾಯದ ಪ್ರಮುಖರೆಂದು ತಿಳಿದುಬಂತು.
ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಗಳ ಬಗ್ಗೆ ಅಪಾರ ಪ್ರೇಮ ಹೊಂದಿದ್ದರು. ಸ್ವಾಮಿಗಳ ಅಗಲಿಕೆಯಿಂದ ದುಖಿತರಾಗಿದ್ದ ಇವರು ಭಟ್ಕಳದಿಂದ ಪೇಜಾವರ ಮಠದಲ್ಲಿ ಶೃದ್ದಾಂಜಲಿ ಸಲ್ಲಿಸಲೆಂದೇ ಬಂದಿದ್ದರು.
ವಿಷಯ ತಿಳಿದ ಮಠದ ಅಧಿಕಾರಿಗಳು ಒಳಗೆ ಆಹ್ವಾನಿಸಿ, ವಿಚಾರ ವಿನಿಮಯ ಮಾಡಿದರು. ಬಂದವರು ಸ್ವಾಮಿಗಳ ಸ್ಮರಣೆ ಮಾಡಿದರು. ಭಟ್ಕಳಕ್ಕೆ ಬಂದಾಗಿನ ಸ್ವಾಮೀಜಿಯ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಸ್ವಾಮಿಗಳ ಭಾವಚಿತ್ರಕ್ಕೆ ಭಕ್ತಿಯಿಂದ ಕೈ ಮುಗಿದು ಶೃದ್ದೆ ಪ್ರಕಟಿಸಿದರು.