DAKSHINA KANNADA
ಎಪ್ರಿಲ್ 25 ರಂದು ಮಿಲಾಗ್ರಿಸ್ ಚರ್ಚ್ ನಲ್ಲಿ ಪೋಪ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

ಮಂಗಳೂರು ಎಪ್ರಿಲ್ 23: ಕ್ಯಾಥೊಲಿಕ್ ಧರ್ಮ ಸಭೆಯ ಪರಮೋಚ್ಛ ಗುರು ಪೋಪ್ ಫ್ರಾನ್ಸಿಸ್ ಅವರು ಎಪ್ರಿಲ್ 21 ರಂದು ನಿಧನ ಹೊಂದಿದ್ದು, ಮಂಗಳೂರು ಧರ್ಮ ಪ್ರಾಂತ್ಯದ ವತಿಯಿಂದ ಪೋಪ್ ಅವರ ಆತ್ಮಕ್ಕೆ ಚಿರ ಶಾಂತಿ ಕೋರಲು ಎಪ್ರಿಲ್ 25 ರಂದು ಶುಕ್ರವಾರ ಮಂಗಳೂರಿನ ಮಿಲಾಗ್ರಿಸ್ ಚರ್ಚ್ ನಲ್ಲಿ ಸಂಜೆ 5 ಗಂಟೆಗೆ ಬಲಿ ಪೂಜೆಯನ್ನು ಏರ್ಪಡಿಸಲಾಗಿದೆ.
ಬಲಿ ಪೂಜೆಯ ಬಳಿಕ 6 ಗಂಟೆಗೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಧರ್ಮ ಪ್ರಾಂತ್ಯದ ಬಿಷಪ್ ಅತಿ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ತಿಳಿಸಿದ್ದಾರೆ.
