LATEST NEWS
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಶಾಲಾ ವಿಧ್ಯಾರ್ಥಿಗಳ ಮಧ್ಯಂತರ ರಜೆಗೆ ಕತ್ತರಿ

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಶಾಲಾ ವಿಧ್ಯಾರ್ಥಿಗಳ ಮಧ್ಯಂತರ ರಜೆಗೆ ಕತ್ತರಿ
ಮಂಗಳೂರು ಸೆಪ್ಟೆಂಬರ್ 5: ದಕ್ಷಿಣಕನ್ನಡ ಜಿಲ್ಲೆಯ ಶಾಲಾ ವಿಧ್ಯಾರ್ಥಿಗಳ ಮಧ್ಯಂತರ ರಜೆಗೆ ಜಿಲ್ಲಾಡಳಿತ ಕತ್ತರಿ ಹಾಕಿದೆ. ಕಳೆದ ಅಗಸ್ಟ್ ತಿಂಗಳಲ್ಲಿ ಸುರಿದ ಭಾರಿ ಮಳೆ ಹಿನ್ನಲೆಯಲ್ಲಿ ಒಟ್ಟಾರೆ 9 ರಜೆಗಳನ್ನು ಶಾಲಾ ಮಕ್ಕಳಿಗೆ ನೀಡಲಾಗಿತ್ತು. ಈ ಹಿನ್ನಲೆಯಲ್ಲಿ ಈಗ ಮಧ್ಯಂತರ ರಜೆಯನ್ನು ಜಿಲ್ಲಾಧಿಕಾರಿ ಕಡಿತಗೊಳಿಸಿದ್ದಾರೆ.
ರಾಜ್ಯ ಸರಕಾರ ಅಕ್ಟೋಬರ್ 7 ರಿಂದ 21 ರವರಗೆ 15 ದಿನ ಮಧ್ಯಂತರ ರಜೆಯನ್ನು ನಿಗದಿ ಪಡಿಸಿತ್ತು. ಆದರೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅಕ್ಟೋಬರ್ 14 ರಿಂದ 21 ರವರೆಗೆ ರಜೆ ಮರು ನಿಗದಿ ಪಡಿಸಿ ಆದೇಶಿಸಲಾಗಿದೆ. ಮಳೆ ಕಾರಣದಿಂದ ಘೋಷಿಸಿದ್ದ ರಜೆಗಳಿಂದಾಗಿ ಕೊರತೆಯಾಗಿರುವ ದಿನಗಳನ್ನು ಸರಿದೂಗಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಅಲ್ಲದೆ ಇನ್ನೂ ಹೆಚ್ಚಾಗಿ ಕೊರತೆ ಬೀಳುವುದಿದ್ದರೆ ವಿಧ್ಯಾರ್ಥಿಗಳ ಕಲಿಕೆಗ ನಷ್ಟವಾಗದಂತೆ ಶಾಲಾ ಹಂತದಲ್ಲಿ ಶನಿವಾರವನ್ನು ಪೂರ್ಣ ದಿನವನ್ನಾಗಿ ಹಾಗೂ ಶಾಲಾ ಹಂತದಲ್ಲಿ ನಿಗದಿಯಾಗುವ ಸ್ಥಳೀಯ ರಜೆ ಕಡಿಮೆ ಮಾಡಿಕೊಂಡು ಸರಿದೂಗಿಸಿಕೊಳ್ಳಲು ಸೂಚಿಸಲಾಗಿದೆ.
ಅಲ್ಲದೆ ಸೆಪ್ಟೆಂಬರ್ ಸಂಪೂರ್ಣ ತಿಂಗಳನ್ನು ತರಗತಿ ಪಾಠ ಭೋಧನೆಗೆ ಬಳಸಿಕೊಂಡು ಮಧ್ಯಾವಧಿ ಪರೀಕ್ಷೆಗಳನ್ನು ಅಕ್ಟೋಬರ್ 7 ರಿಂದ 14 ರ ನಡುವಿನ ಮರು ನಿಗದಿತ ಕರ್ತವ್ಯದ ದಿನಗಳನ್ನೂ ಒಳಗೊಂಡಂತೆ ವೇಳಾಪಟ್ಟಿ ರೂಪಿಸಲು ಶಾಲಾ ಆಡಳಿತಕ್ಕೆ ತಿಳಿಸಲಾಗಿದೆ.