Connect with us

    LATEST NEWS

    ಲವ್ ಜಿಹಾದ್ ತಡೆಗೆ ಬರಲಿದೆ ಹಿಂದೂ ಟಾಸ್ಕ್ ಫೋರ್ಸ್

    ಲವ್ ಜಿಹಾದ್ ತಡೆಗೆ ಬರಲಿದೆ ಹಿಂದೂ ಟಾಸ್ಕ್ ಫೋರ್ಸ್

    ಮಂಗಳೂರು ಡಿಸೆಂಬರ್ 20: ಇತ್ತಿಚಿನ ದಿನಗಳಲ್ಲಿ ಸರಣಿ ಲವ್ ಜಿಹಾದ್ ಪ್ರಕರಣ ಬೆಳೆಕಿಗೆ ಬರುತ್ತಿರುವುದು ಹಿಂದೂ ಸಂಘಟನೆ ಹಾಗೆ ಧಾರ್ಮಿಕ ಮುಖಂಡರನ್ನು ಕಂಗೆಡಿಸಿದೆ. ಈ ಹಿನ್ನೆಲೆಯಲ್ಲಿ ಲವ್ ಜಿಹಾದ್ ಪ್ರಕರಣಗಳನ್ನು ತಡೆಯಲು ಹಿಂದೂ ಟಾಸ್ಕ್ ಫೋರ್ಸ್ ರಚನೆಗೆ ಹಿಂದೂ ಸಂಘಟನೆಗಳು ಮುಂದಾಗಿದ್ದು ಇನ್ನು ಕೆಲವೇ ದಿನಗಳಲ್ಲಿ ಹಿಂದೂ ಟಾಸ್ಕ ಫೋರ್ಸ್ ಕಾರ್ಯಾಚರಣೆ ಆರಂಭಿಸಲಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರ ಸೀಮಿತ ವಾಗುವಂತೆ ಮೊದಲು ಈ ಟಾಸ್ಕ್ ಫೋರ್ಸ್ ಕಾರ್ಯಾಚರಣೆ ನಡೆಸಲಿದೆ.

    ಲವ್ ಜಿಹಾದ್ ಪ್ರಕರಣ ಗಳನ್ನು ಬೆಳಕಿಗೆ ಬರುವ ಮೊದಲೇ ಪತ್ತೆ ಹಚ್ಚಿ ಪ್ರಕರಣ ಬಗೆಹರಿಸುವುದು ಈ ಟಾಸ್ಕ್ ಫೋರ್ಸ್ ನ ಜವಬ್ದಾರಿಯಾಗಿರುತ್ತದೆ.

    ಈ ಕುರಿತು ಮಾಹಿತಿ ನೀಡಿದ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮಿಜಿ ಈ ಟಾಸ್ಕ್ ಪೋರ್ಸ್ ರಚನೆ ಕುರಿತು ಈಗಾಗಲೇ ಹಲವಾರು ಹಿಂದೂ ಪರ ಸಂಘಟನೆಗಳೊಂದಿಗೆ 2 ಸುತ್ತಿನ ಬೈಠಕ್ ನಡೆಸಲಾಗಿದ್ದು ಇನ್ನು ಒಂದು ವಾರದಲ್ಲಿ ಹಿಂದೂ ಟಾಸ್ಕ್ ಫೋರ್ಸ್ ಕಾರ್ಯಾಚರಣೆಗೆ ಇಳಿಯಲಿದೆ.

    ಈ ಟಾಸ್ಕ್ ಪೋರ್ಸ್ ನಲ್ಲಿ ಮಹಿಳೆಯರು ಸೇರಿದಂತೆ ಯುವಕ, ಯುವತಿಯರು ಇರಲಿದ್ದಾರೆ. ಅದಲ್ಲದೆ ವೈದ್ಯರು, ಸೈಕ್ಯಾಟ್ರಿಸ್ಟ್ , ಸಮಾಜಿಕ ಕಾರ್ಯಕರ್ತರು, ನ್ಯಾಯವಾದಿಗಳು ಸೇರಿದಂತೆ ಕಾನೂನು ತಜ್ಞರು ಈ ಟಾಸ್ಕ್ ಫೋರ್ಸ್ ನಲ್ಲಿ ಇರಲಿದ್ದಾರೆ. ಈ ಟಾಸ್ಕ್ ಫೋರ್ಸ್ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಾರ್ಯಾಚರಣೆಗೆ ಇಳಿಯಲಿದೆ. ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಈ ಟಾಸ್ಕ್ ಪೋರ್ಸ್ ಗಳು ರಚನೆಯಾಗಲಿದೆ ಎಂದು ರಾಜಶೇಖರಾನಂದ ಸ್ವಾಮಿಜಿ ತಿಳಿಸಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *