DAKSHINA KANNADA
ಪುತ್ತೂರು – ಸಿದ್ದರಾಮಯ್ಯ ಶುದ್ದರಾಮಯ್ಯ ಆಗಬೇಕು
ಪುತ್ತೂರು ಜನವರಿ 20: ಅಕ್ರಮ ಗೋಸಾಗಾಟ ಮತ್ತು ಚಾಮರಾಜನಗರದಲ್ಲಿ ಗೋವಿನ ಮೇಲೆ ನಡೆದ ವಿಕೃತಿ ಖಂಡಿಸಿ ಗೋ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಪುತ್ತೂರಿನ ಅಮರ್ ಜವಾನ್ ಜ್ಯೋತಿ ಬಳಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸಹಸೇವಾ ಪ್ರಮುಖ್ ನಾ.ಸೀತಾರಾಮ ಅವರು ಗೋವಿನ ಸಂರಕ್ಷಣೆಯಲ್ಲಿ ರಾಜ್ಯ ವ್ಯವಸ್ಥೆ ಮುಂದಾಗಬೇಕು,ಮುಖ್ಯಮಂತ್ರಿ ಸಿದ್ಧರಾಮಯ್ಯ ಹೆಸರಿನ ರಾಮಯ್ಯ ಮುಂದೆ ಸಿದ್ಧ ಇದೆ, ಆದರೆ ಯಾವುದಲ್ಲಿ ಸಿದ್ಧ ಎನ್ನುವುದನ್ನು ನೀವು ಹೇಳಬೇಕು, ಸಿದ್ಧರಾಮಯ್ಯರ ತಕ್ಷಣ ಶುದ್ಧರಾಮಯ್ಯ ಆಗಬೇಕು, ಇಲ್ಲದೇ ಹೋದಲ್ಲಿ ಗೋವಿನ ಶಾಪ ನಿಮಗೆ ತಟ್ಟಲಿದ್ದು, ಆ ಬಳಿಕ ನಿಮ್ಮನ್ನು ಈ ಜನ್ಮದಲ್ಲಿ ಮಾತ್ರವಲ್ಲ ಏಳು ಜನ್ಮದಲ್ಲೂ ನಿಮಗೆ ಮೋಕ್ಷವಿಲ್ಲ ಎಂದರು . ಯಾವ ಮಠವೂ,ಸ್ವಾಮೀಜಿಯೂ,ಸಂಘಟನೆಯೂ ನಿಮ್ಮನ್ನು ರಕ್ಷಿಸಲು ಸಾಧ್ಯವಿಲ್ಲ, ಆ ರೀತಿಯ ಅಸುರಕ್ಷತೆಯ ಕಡೆಗೆ ನೀವು ಹೋಗಬೇಡಿ, ಇನ್ನುಳಿದ ನಿಮ್ಮ ಅವಧಿಯಲ್ಲಿ ಗೋವಿನ ಸಂರಕ್ಷಣೆ ಕೆಲಸವನ್ನು ಮಾಡಿ ಎಂದರು ,
ಹಿಂದೂ ಸಮಾಜದ ತಾಳ್ಮೆ,ಸಹನೆಯ ಕಟ್ಟೆ ಒಡೆಯುವಂತೆ ಮಾಡಬೇಡಿ, ಹಿಂದೂ ಸಮಾಜದ ವಿರುದ್ಧ ನಿಂತವರಿಗೆ ಕಾಲಕಾಲಕ್ಕೆ ತಕ್ಕ ಉತ್ತರವನ್ನು ಹಿಂದೂ ಸಮಾಜ ನೀಡಿದೆ,ಮುಂದೆಯೂ ನೀಡಲಿದೆ ಎಂದು ರಾಜ್ಯ ಸರಕಾರವನ್ನು ಎಚ್ಚರಿಸಿದರು.