LATEST NEWS
ಮದುವೆ ವಾಹನದ ಎಸ್ಕಾರ್ಟ್ ನಲ್ಲಿ ಅಕ್ರಮ ದನ ಸಾಗಾಟ

ಉಡುಪಿ ಜನವರಿ 12: ಬಿಜೆಪಿಯ ಭದ್ರಕೋಟೆ ಉಡುಪಿಯಲ್ಲಿ ಎಗ್ಗಿಲ್ಲದೆ ದನಕಳ್ಳತನ ನಡೆಯುತ್ತಿದ್ದು, ಮದುವೆ ವಾಹನವನ್ನು ಎಸ್ಕಾರ್ಟ್ ಮಾಡಿಕೊಂಡು ಪಿಕಪ್ ಒಂದರಲ್ಲಿ ಅಕ್ರಮವಾಗಿ ದನ ಸಾಗಿಸುತ್ತಿದ್ದ ಪ್ರಕರಣ ನಡೆದಿದ್ದು, ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿದ 16 ದನಗಳನ್ನು ರಕ್ಷಣೆ ಮಾಡಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ದನಕಳ್ಳತನ ಅಕ್ರಮ ದನ ಸಾಗಾಟ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದ್ದು, ಇತ್ತೀಚೆಗೆ ಕಾರ್ಕಳದಲ್ಲಿ ಮನೆಗಳಿಗೆ ನುಗ್ಗಿ ದನಕಳ್ಳತನದ ಪ್ರಕರಣ ಮಾಸುವ ಮುನ್ನವೇ ಶಿರ್ವದಲ್ಲಿ ಪಿಕಪ್ ವಾಹನದಲ್ಲಿ 16 ದನಗಳನ್ನು ಅಕ್ರಮವಾಗಿ ಸಾಗಿಸಲು ಯತ್ನಿಸಿದ ಘಟನೆ ನಡೆದಿದ್ದು, ಶಿರ್ವ ವ್ಯಾಪ್ತಿಯ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರ ಕಾರ್ಯಾಚರಣೆ ನಡೆಸಿ ಒಟ್ಟು 16 ದನಗಳನ್ನು ರಕ್ಷಿಸಿದ್ದಾರೆ.

ಈ ನಡುವೆ ಕಳ್ಳರು ತಮ್ಮ ಅಕ್ರಮ ಸಾಗಾಟಕ್ಕೆ ವಿಭಿನ್ನ ರೀತಿಯ ಐಡಿಯಾಗಳನ್ನು ಬಳಕೆ ಮಾಡುತ್ತಿದ್ದು, ಮದುವೆ ವಾಹನದಂತೆ ಸಿಂಗರಿಸಿದ ಇನೋವಾ ಕಾರ್ ನ ಎಸ್ಕಾರ್ಟ್ ಮಾಡಿ ಪಿಕಪ್ ವಾಹನದಲ್ಲಿ 16 ದನಗಳ ಸಾಗಾಟ ಮಾಡಿ ಪೊಲೀಸ್ ಮತ್ತು ಹಿಂದೂ ಕಾರ್ಯಕರ್ತ ಕಣ್ಣು ತಪ್ಪಿಸಲು ಹೊಸ ತಂತ್ರ ಬಳಸಿದ್ದಾರೆ. ಆದರೂ ಕಾರ್ಯಾಚರಣೆ ನಡೆಸಿ ದನಸಾಗಾಟವನ್ನು ಹಿಂದೂ ಸಂಘಟನೆ ಕಾರ್ಯಕರ್ತರು ಪತ್ತೆಹಚ್ಚಿದ್ದಾರೆ.