LATEST NEWS
ದ್ವಿತೀಯ ಪಿಯುಸಿ ಪರೀಕ್ಷೆಗೆ ಗೈರು ಹಾಜರಾದ ಹಿಜಬ್ ಹೊರಾಟಗಾರ್ತಿಯರು

ಉಡುಪಿ ಎಪ್ರಿಲ್ 23: ನಿನ್ನೆಯಿಂದ ಪ್ರಾರಂಭವಾದ ದ್ವಿತೀಯ ಪಿಯುಸಿ ಕೊನೆಯ ಪರೀಕ್ಷೆಯಲ್ಲಿ ಇಂದಿನಿಂದ ವಿಜ್ಞಾನ ವಿಭಾಗದ ಪರೀಕ್ಷೆಗಳು ಆರಂಭವಾಗಿದ್ದು. ಉಡುಪಿಯಲ್ಲಿ ಹಿಜಬ್ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವಿಧ್ಯಾರ್ಥಿನಿಯರು ಗೈರು ಹಾಜರಾಗಿದ್ದಾರೆ.
ಹಿಜಬ್ ಹೋರಾಟಗಾರ್ತಿಯರಲ್ಲಿ ಇಂದು ಮೂವರು ವಿದ್ಯಾರ್ಥಿನಿಯರಿಗೆ ಗಣಿತ ಪರೀಕ್ಷೆ ಇತ್ತು, ಅಲ್ಮಾಸ್ ಹಾಲ್ ಟಿಕೆಟ್ ಪಡೆದಿದ್ದಳು, ಮತ್ತಿಬ್ಬರು ವಿದ್ಯಾರ್ಥಿನಿಯರು ಹಾಲ್ ಟಿಕೆಟ್ ಕೂಡ ಪಡೆದಿಲ್ಲ. ಗಣಿತ ಪರೀಕ್ಷೆಗೆ ಮೂರು ವಿದ್ಯಾರ್ಥಿನಿಯರಾದ ಅಲ್ಮಾಸ್, ಹಜ್ರಾ, ಆಯೇಷಾ ಇಂದು ಗೈರು ಹಾಜರಾಗಿದ್ದಾರೆ.
