DAKSHINA KANNADA
ಹಿಜಬ್ ಗಲಾಟೆ ವರದಿ ಮಾಡಲು ತೆರಳಿದ್ದ ಪತ್ರಕರ್ತರ ವಿರುದ್ದವೇ ದೂರು ನೀಡಿದ ವಿಧ್ಯಾರ್ಥಿನಿ…!!

ಮಂಗಳೂರು ಜೂನ್ 04 : ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ಗಲಾಟೆ ಮಾಡಲು ತೆರಳಿದ್ದ ಪತ್ರಕರ್ತರ ಮೇಲೆ ದಿಗ್ಬಂದನ ಹಾಕಿ ಗಲಾಟೆ ಮಾಡಿದ್ದಲ್ಲದೆ ಇದೀಗ ಪತ್ರಕರ್ತರ ಮೇಲೆ ವಿಧ್ಯಾರ್ಥಿನಿಯೊಬ್ಬಳು ಪೊಲೀಸರಿಗೆ ದೂರು ನೀಡಿರುವ ಘಟನೆ ನಡೆದಿದೆ.
ಜೂನ್ 2 ರಂದು ಹಿಜಬ್ ಗಲಾಟೆ ಬಗ್ಗೆ ಮಾಹಿತಿ ಪಡೆಯಲು ಕಾಲೇಜಿಗೆ ಹೋಗಿದ್ದ ಕೆಲವು ಪತ್ರಕರ್ತರಿಗೆ ವಿದ್ಯಾರ್ಥಿಗಳು ದಿಗ್ಬಂಧನ ಹಾಕಿರುವ ಸಂಬಂಧ ಪತ್ರಕರ್ತ ಅಜಿತ್‌ಕುಮಾರ್ ದೂರು ನೀಡಿದ್ದರು. ಈ ಹಿನ್ನಲೆ ಇದೀಗ ಪ್ರತಿಯಾಗಿ ವಿದ್ಯಾರ್ಥಿಗಳು ಮೂವರು ಪತ್ರಕರ್ತರ ವಿರುದ್ಧ ಶುಕ್ರವಾರ ಪ್ರತಿದೂರು ನೀಡಿದ್ದಾರೆ.

ಉಪ್ಪಿನಂಗಡಿ ಕಾಲೇಜಿಗೆ ಶುಕ್ರವಾರ ಮಧ್ಯಾಹ್ನ ಸುಮಾರು 11.30ಕ್ಕೆ ವಿದ್ಯಾರ್ಥಿಗಳಲ್ಲದ ಮೂವರು ಅಪರಿಚಿತರು ಅಕ್ರಮವಾಗಿ ಪ್ರವೇಶ ಮಾಡಿದ್ದರು. ಶಾಲನ್ನು ಎಳೆಯಲು ಯತ್ನಿಸಿದ್ದರು ಎಂದು ವಿಧ್ಯಾರ್ಥಿನಿಯೊಬ್ಬಳು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.