LATEST NEWS
ತರಗತಿಯಲ್ಲಿ ಹಿಜಬ್ ಧರಿಸಲು ಅವಕಾಶಕ್ಕೆ ವಿಧ್ಯಾರ್ಥಿನಿಯರ ಮುಂದುವರಿದ ಹೋರಾಟ
ಉಡುಪಿ ಜನವರಿ 20: ಉಡುಪಿ ಸರಕಾರಿ ಪಿಯು ಕಾಲೇಜ್ ನಲ್ಲಿ ಮುಸ್ಲಿಂ ವಿಧ್ಯಾರ್ಥಿನಿಯರು ತರಗತಿಯಲ್ಲಿ ಹಿಜಬ್ ಧರಿಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.
ಡಿಸೆಂಬರ 27 ರಿಂದ 8 ಮಂದಿ ವಿಧ್ಯಾರ್ಥಿನಿಯರು ತರಗತಿಯಲ್ಲಿ ಹಿಜಬ್ ಧರಿಸಿ ಪಾಠ ಕೇಳಲು ಮುಂದಾಗಿದ್ದರು, ಆದರೆ ಕಾಲೇಜು ಆಡಳಿತ ಮಂಡಳಿ ಹಿಜಬ್ ಧರಿಸಿ ಕ್ಲಾಸ್ ಗೆ ಬರಲು ಅವಕಾಶ ನೀಡಲಿಲ್ಲ. ಅಲ್ಲದೆ ಕಾಲೇಜಿ ಸಮವಸ್ತ್ರದಲ್ಲೇ ಪಾಠ ಕೇಳಲು ತಾಕೀತು ಮಾಡಿತ್ತು. ನಂತರ ನಡೆದ ಪೋಷಕರ ಸಭೆಯಲ್ಲೂ ಸಮವಸ್ತ್ರದಲ್ಲಿ ಮಾತ್ರ ಪಾಠ ಕೇಳಲು ಅವಕಾಶ ಕಲ್ಪಿಸಲಾಗದುವುದು ಎಂದು ಮಂಡಳಿ ವಿಧ್ಯಾರ್ಥಿನಿಯರ ಪೋಷಕರಿಗೆ ತಿಳಿಸಿತ್ತು. ಆದರೆ ಹಠ ಬಿಡದ ವಿಧ್ಯಾರ್ಥಿನಿಯರು ಡಿಸೆಂಬರ್ 27 ರಿಂದ ತರಗತಿ ಬಹಿಷ್ಕರಿ ಪ್ರತಿಭಟನೆಗೆ ಕೂತಿದ್ದಾರೆ.
ಈ ಹಿನ್ನಲೆ ಕಾಲೇಜಿನ ಪ್ರಾಂಶುಪಾಲರು ಪದವಿಪೂರ್ವ ಬೋರ್ಡ್ ಗೆ ಪತ್ರ ಬರೆದಿದ್ದು, ಸದ್ಯ ಪಿಯು ಬೋರ್ಡ್ ನಿರ್ದೇಶಕರ ಉತ್ತರಕ್ಕಾಗಿ ಕಾಯುತ್ತಿದ್ದಾರೆ.